ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಅಸೋಸಿಯೇಶನ್ ನ ಸ್ಥಳೀಯ ಸಮಿತಿಗಳ ಸದಸ್ಯರಿಗಾಗಿ ಆಯೋಜಿಸಿರುವ ಮೂರು ದಿನಗಳ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಯನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಆಧುನಿಕ ಯುಗಕ್ಕೆ ಸ್ಪಂದಿಸುವ ಜನತೆಯಲ್ಲಿ ಸ್ವಾಭಿಮಾನದ ಬದುಕಿನ ಅವಶ್ಯವಿದೆ. ಇಂತಹ ಕಾಲಘಟ್ಟದಲ್ಲಿ ಬದುಕು ರೂಪಿಸಲು ಪ್ರೇರಣೆ ನೀಡುವ ನಾಟಕ ಕಲೆಗಳ ಉಳಿವು ಅಗತ್ಯವಿದೆ. ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆ ಕಲಾರಾಧನೆಗೆ ಸೂಕ್ತ ವೇದಿಕೆಯಾಗಲಿಎಂದು ಸೂರು ಕರ್ಕೇರ ಶುಭಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಲಕ್ಷಾಂತರ ಜನತೆಗೆಯ ಬದುಕಿಗೆ ದೀಪಸ್ತಂಭವಾಗಿದೆ. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ರಂಗಕ್ಕೆ ಕೊಡುಗೆಯನ್ನಿತ್ತ ಮಹಾನ್ ಸಂಸ್ಥೆ. ಕನ್ನಡ ಭವನ ಸೊಸೈಟಿ ಮೂಲಕ ಶೈಕ್ಷಣಿಕ ಸೇವೆ, ಭಾರತ್ ಬ್ಯಾಂಕ್ ನಿಂದ ಆರ್ಥಿಕ ಸೇವೆ. ರಾಜಕೀಯ ಕ್ವಿಟ್ ಇಂಡಿಯಾ ಚಳುವಳಿಯ ಬೊಂಬೇ ಉಚ್ಛನ್ಯಾಯಲಯದ ಮೇಲೆ ಬಾವುಟವನ್ನಾರಿಸಿದ ದಾಮೋದರ ಬಂಗೇರಾ ಅವರನ್ನು ಮಹಾತ್ಮಗಾಂಧಿಜೀ ಅವರೇ ಬಹದ್ಧೂರು ಎಂದು ಕರೆದ ಸನ್ನಿವೇಶದಿಂದ ಈ ವರೆಗೂ ರಾಜಕೀಯವಾಗಿ ಮುಂಚೂಣಿಯಲ್ಲಿದ್ದು, ಕುದ್ರೋಳಿ, ಕಟಪಾಡಿ ದೇವಸ್ಥಾನಗಳ ಮೂಲಕ ಧಾರ್ಮಿಕವಾಗಿ ಮುನ್ನಡೆದಿದೆ. ಈ ಸ್ಪರ್ಧೆಯ ಮೂಲಕ ನಾಟಕ ಕ್ಷೇತ್ರದಲ್ಲಿ ಯುವ ಜನತೆಯನ್ನು ಪ್ರೋತ್ಸಹಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಜಯ ಸುವರ್ಣ ತಿಳಿಸಿದರು.
ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಮಾತನಾಡಿ, ಮನಸ್ಸಿಗೆ ತನ್ಮಯ ನೀಡಿ ಖುಷಿ ನೀಡುದ ಕಾರ್ಯಕ್ರಮ. ತುಳು ಜೀವಂತಿಕೆ ಮತ್ತೊಂದು ಬುನಾದಿ ಇದಾಗಿದೆ. ಸಮಾಜವನ್ನು ವ್ಯವಸ್ಥೆಯಲ್ಲಿರಿಸಲು ಈ ಸ್ಪರ್ಧೆ ಉತ್ತಮ ನಿದರ್ಶನ. ನಾಟಕಗಳು ಜೀವನ ಪಾಠಕ್ಕೆ ಸಮಕಾಲೀನತೆ ನೀಡುತ್ತಿದ್ದು ಇದೊಂದು ಅಭಿನಯ ಭಾಷೆಯಾಗಿದೆ. ಇಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸುಮಾರು 300 ಕಲಾವಿದರು ಅಭಿನಯದ ಭಿನ್ನತೆಗಳನ್ನು ಅನುಭವಿಸಬೇಕು ಎಂದರು.
ಸಮಾರಂಭದಲ್ಲಿ ಹೆಸರಾಂತ ನಾಟಕ ನಿರ್ದೇಶಕರುಗಳಾದ ಶಿಮಂತೂರು ಚಂದ್ರಹಾಸ ಸುವರ್ಣ, ಸಾ.ದಯಾ (ದಯಾನಂದ ಸಾಲ್ಯಾನ್) ಮತ್ತು ಪದ್ಮನಾಭ ಸಸಿಹಿತ್ಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ, ಅಸೋಸಿಯೇಶನ್ ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ನಾಟಕ ಸ್ಪರ್ಧಾ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ರಂಗ ನಿರ್ದೇಶಕ ಡಾ.ಭರತ್ ಕುಮಾರ್ ಪೊಲಿಪು, ಹೆಸರಾಂತ ನಾಟಕ ಕಲಾವಿದ ಮೋಹನ್ ಮಾರ್ನಾಡ್, ಅಬುಧಾಬಿ ಕರ್ನಾಟಕ ಸಂಘದ ಕಾರ್ಯದರ್ಶಿ ಮನೋಹರ್ ತೋನ್ಸೆ, ಪ್ರಸಿದ್ಧ ಪುರೋಹಿತ ಕೆ.ಸದಾಶಿವ ಶಾಂತಿ, ಅಸೋಸಿಯೇಶನ್ ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ.ಯು.ಧನಂಜಯ ಕುಮಾರ್, ಗೌ. ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗೌ. ಜೊತೆ ಕೋಶಾಧಿಕಾರಿ ಸದಾಶಿವ ಎ.ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು ಹಾಗೂ ಪ್ರಥಮ ನಾಟಕದ ಪ್ರಾಯೋಜಕರುಗಳಾದ ಭಾರತ್ ಬ್ಯಾಂಕ್ ನ ನಿರ್ದೇಶಕರಾದ ನ್ಯಾ ಎಸ್.ಬಿ ಅವಿೂನ್ ಮತ್ತು ಭಾಸ್ಕರ್ ಎಂ.ಸಾಲ್ಯಾನ್ ಉಪಸ್ಥಿತರಿದ್ದರು. ನಾಟಕಕಾರರಾದ ಬಾ.ಸುಮಾ, ಬಾಲಕೃಷ್ಣ ಕೊಡವೂರು, ಅಸೋಸಿಯೇಶನ್ನ ಗೌ.ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಕೋಟ್ಯಾನ್, ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಸಿಎ ಅಶ್ವಜಿತ್ ಹೆಜ್ಮಾಡಿ, ಜೆ.ವಿ ಕೋಟ್ಯಾನ್ ಗೋರೆಗಾಂ, ರಾಜಶೇಖರ್ ಎಂ.ಕೋಟ್ಯಾನ್, ಗಂಗಾಧರ್ ಜೆ.ಪೂಜಾರಿ, ಶ್ರೀನಿವಾಸ ಕರ್ಕೇರ, ದಯನಂದ ಕೌಡೂರು ಸೇರಿದಂತೆ ನೂರಾರು ಕಲಾಭಿಮಾನಿಗಳು ಹಾಜರಿದ್ದರು.
ಸಾಂಸ್ಕೃತಿಕ ಉಪ ಸಮಿತಿ ಕಾಯರ್ಾಧ್ಯಕ್ಷ ದಯಾನಂದ ಆರ್.ಪೂಜಾರಿ ಸ್ವಾಗತಿಸಿದರು. ಗೌ. ಪ್ರ. ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಗೌರವ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ವಂದಿಸಿದರು.
ನಾಟಕದ ಮೊದಲ ದಿನವಾದ ಇಂದು ಮಲಾಡ್ ಸ್ಥಳಿಯ ಸಮಿತಿ ತಂಡವು ಸುಂದರ್ ಪೂಜಾರಿ ರಚಿಸಿ ನಿರ್ದೇಶಿಸಿದ `ಮಾಯಾ ಜಾಲ’ ನಾಟಕವನ್ನು ನಲ್ಲಸೋಫರಾ ವಿರಾರ್ ಸ್ಥಳಿಯ ಸಮಿತಿಯು ನಾಗರಾಜ ಗುರುಪುರ ರಚಿಸಿದ, ಸುನೀತಾ ಸುವರ್ಣ ನಿರ್ದೇಶಿಸಿದ `ದೋಲು’ ನಾಟಕವನ್ನು, ಚೆಂಬೂರು ಸ್ಥಳಿಯ ಸಮಿತಿಯು ಸುಮಿತ್ರಾ ಎಸ್.ಬಂಗೇರಾ ರಚಿಸಿದ ನಿಟ್ಟೆ ಸಂಜೀವ ಬಂಗೇರ ನಿರ್ದೇಶಿಸಿದ `ಸಾಹುಕಾರ್ ಗುರುವಪ್ಪೆ’ ನಾಟಕವನ್ನು, ಭಾಂಡೂಪ್ ಸ್ಥಳಿಯ ಸಮಿತಿಯು ಸಿ.ಎ ಪೂಜಾರಿ ರಚಿಸಿದ ಕೃಷ್ಣರಾಜ್ ಶೆಟ್ಟಿ ನಿರ್ದೇಶಿಸಿದ `ನಾಣು’ ನಾಟಕವನ್ನು, ಗೋರೆಗಾಂ ಸ್ಥಳಿಯ ಸಮಿತಿಯು ಲತೇಶ್ ಎಂ.ಪೂಜಾರಿ ರಚಿಸಿ ನಿರ್ದೇಶಿಸಿದ `ಮನ್ನಿ’ ನಾಟಕವನ್ನು ಪ್ರದರ್ಶಿಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)