ಮುಂಬಯಿ: ಮಹಾನಗರದಲ್ಲಿನ ಕನ್ನಡ ದಿನಪತ್ರಿಕೆ “ಕರ್ನಾಟಕ ಮಲ್ಲದ” ವು ತನ್ನ 25ನೇ ವರ್ಷದ ಸಂಭ್ರಮದಲ್ಲಿದ್ದು ಪತ್ರಿಕೆಯ ಸಂಪಾದಕರಾದ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವು ಮಾರ್ಚ್ 13ರಂದು ಕುರ್ಲಾ ಪೂರ್ವ ಬಂಟರ ಭವನದ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪತ್ರಿಕೆಯ ಮಾಲಕರಾದ ಪ್ರವೀಣ್ ಮುರಳೀಧರ ಶಿಂಗೋಟೆ ಯವರನ್ನೂ ಗೌರವಿಸಲಾಯಿತು. ಮಧ್ಯಾಹ್ನ ನೃತ್ಯ ಸ್ಪರ್ಧೆ ಯಾಗೂ ಅಭಿನಂದನ ಗ್ರಂಥ ’ಆಪ್ತ ಮಿತ್ರ’ ಬಿಡುಗಡೆಗೊಂಡಿತು. ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿಯ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ನಗರ ಹಾಗೂ ಉಪನಗರಗಳ ಅನೇಕ ಗಣ್ಯರು ಹಾಗೂ ತುಳು ಕನ್ನಡಿಗಳು ಬಹಳ ಸಂಖ್ಯೆಯಲ್ಲಿ ಆಗಮಿಸಿ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಸಮಾರಂಭದ ಉದ್ಘಾಟನೆಯನ್ನು ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲು,ಮುಂಬಯಿಯ ಸಂಸದ ಗೋಪಾಲ ಶೆಟ್ಟಿ, ಕರ್ನಾಟಕದ ಶಾಸಕ ಡಾ. ನಾರಾಯಣ ಆರ್. ಗೌಡ ಅವರು ನೆರವೇರಿಸಿ ಪಾಲೆತ್ತಾಡಿಯವರು ಕನ್ನಡ ಪತ್ರಿಕಾ ರಂಗದಲ್ಲಿ ಮಾಡಿರುವ ಸೇವೆ ಬಗ್ಗೆ ಮೆಚ್ಚಿ ಮಾತನಾಡಿದರು. ಸಮಾರಂಭದ ಮುಖ್ಯ ಅಥಿತಿಯಾಗಿ ಬಂಟ್ಸ್ ನ್ಯಾಯ ಮಂಡಳಿಯ ಕಾರ್ಯಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಆಗಮಿಸಿದ್ದು, ಉದ್ಯಮಿ ಕೆ.ಡಿ. ಶೆಟ್ಟಿ, ಗ್ರಂಥ ಬಿಡುಗಡೆಗೊಳಿಸಿದರು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ದ ಮುಖ್ಯಸ್ತರಾದ ಡಾ. ಜಿ. ಎನ್. ಉಪಾಧ್ಯ ಅಭಿನಂದನಾ ಭಾಷಣ ಮಾಡಿದರು. ಗೌರವ ಅಥಿತಿಗಳಾದ ಬಂಟರ ಸಂಘದ ವಿಶ್ವಸ್ತ ಸದಸ್ಯರಾದ ಎಂ. ಡಿ. ಶೆಟ್ಟಿ, ಮಾತೃಭೂಮಿ ಸಹಕಾರಿ ಬ್ಯಾಂಕಿನ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ತುಂಗಾ ಗ್ರೂಪ್ ನ ಆಡಳಿತ ನಿರ್ದೇಶಕ ಸುಧಾಕರ ಎಸ್. ಹೆಗ್ಡೆ, ಕ್ಲಾಸಿಕ್ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಸುರೇಸ್ ಆರ್. ಕಾಂಚನ್, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್. ಟಿ. ಪೂಜಾರಿ, ಮೊಗವೀರ ಬ್ಯಾಂಕಿನ ನಿರ್ದೇಶಕ ಗೋಪಾಲ ಎಸ್ ಪುತ್ರನ್, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಬಿ. ಭಂಡಾರಿ, ರಿಜೆನ್ಸಿ ಗ್ರೂಪ್ ಆಫ್ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಜಯರಾಮ ಎನ್. ಶೆಟ್ಟಿ, ಆಹಾರ್ ಅಧ್ಯಕ್ಷ ಆದರ್ಶ ಬಿ. ಶೆಟ್ಟಿ, ಕೃಷ್ಣ ಪ್ಯಾಲೇಸ್ ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ. ಶೆಟ್ಟಿ, ಅವೆನ್ಯೂ ಹೋಟೇಲಿನ ನಿರ್ದೇಶಕ ರಘುರಾಮ ಕೆ. ಶೆಟ್ಟಿ, ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್. ದೇವಾಡಿಗ, ಉದ್ಯಮಿ ಸತೀಶ್ ರಾಮ ನಾಯಕ್, ಸಾಹಿತಿ ಡಾ. ಸುನಿತಾ ಎಂ. ಶೆಟ್ಟಿ, ಜಾಸ್ಮಿನ್ ಕೊ. ಆಪ್. ಸೊಸೈಯ ಕಾರ್ಯಾಧ್ಯಕ್ಷ ಡಾ. ಸುರೇಂದ್ರ ವಿ ಶೆಟ್ಟಿ,ಡಾ. ಶಿವ ಮೂಡಿಗೆರೆ, ಚಿತ್ರ ನಿರ್ಮಾಪಕ ಉದಯ ಶೆಟ್ಟಿ, ಸಂತೋಷ್ ಕ್ಯಾಟರರ್ಸ್ ನ ಮಾಲಕ ರಾಘು ಪಿ. ಶೆಟ್ಟಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ನಡೆದ ಪತ್ರಿಕೋದ್ಯಮಕ್ಕೆ ಪಾಲೆತ್ತಾಡಿಯವರ ಕೊಡುಗೆ ವಿಚಾರ ಸಂಕಿರಣದಲ್ಲಿ ಕರ್ನಾಟಕ ಮಲ್ಲದ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆ ಅವರು ಉಪಾನ್ಯಾಸ ಗೈದರು. ಡಾ. ಪೂರ್ಣಿಮಾ ಸುಧಾಕರ ಶೆಟ್ಟಿಯವರು ಕೃತಿಯ ಕುರಿತು ಮಾತನಾಡಿದರು. ಮುಂಬಯಿ ನ್ಯೂಸ್ ಬಳಗದ ಪ್ರಸ್ತುತಿಯಲ್ಲಿ ಚಂದ್ರಶೇಖರ ಪಾಲೆತ್ತಾಡಿಯವರ ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಸಮಾರಂಭದಲ್ಲಿ ಸಮಿತಿಯ ಇತರ ಪದಾಧಿಕಾರಿಗಳಾದ ಸಮಿತಿಯ ಸಂಚಾಲಕ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಕಾರ್ಯದರ್ಶಿ ಪೇತ್ರಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಜತೆ ಕೋಶಾಧಿಕಾರಿಗಳಾದ ನವೀನ್ ಕೆ. ಇನ್ನ, ಶ್ರೀಧರ್ ಉಚ್ಚಿಲ್, ಸಂಸ್ಕೃತಿಕ ಸಮಿತಿಯ ಸಂಚಾಲಕರಾದ ಸುರೇಂದ್ರಕುಮಾರ್ ಹೆಗ್ಡೆ ಮತ್ತು ರವೀಂದ್ರನಾಥ ಎಂ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದು ಸಹಕರಿಸಿದರು. ನಗರದ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಚಂದ್ರಶೇಖರ ಪಾಲೆತ್ತಾಡಿಯವರನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ರಂಗನಟ ಅಶೋಕ ಪಕ್ಕಳ ನಿರೂಪಿಸಿದರು. ಮನೋರಂಜನೆಯ ಅಂಗವಾಗಿ ಪದ್ಮನಾಭ ಸಸಿಹಿತ್ಲು ತಂಡದಿಂದ ಗಾನವೈಭವ ಹಾಗೂ ವಿವಿಧ ಸಂಘ ಸಂಸ್ಥೆಗಳ ನೃತ್ಯ ಸ್ಪರ್ಧೆ ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್