ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧೀನದಲ್ಲಿ ಯುಎಇಯಾದ್ಯಂತ ಹಲವಾರು ಸಾಮಾಜಿಕ ಧಾರ್ಮಿಕ ರಂಗಗಳಲ್ಲಿ ಗುರುತಿಸಿಕೊಂಡಿರುವ ಕೆಐಸಿಅಲ್ ಕೌಸರ್ ಯೂತ್ ವಿಂಗ್ ಇದರ ತೃತೀಯ ವರ್ಷದ ಮಹಾ ಸಭೆಯು ಕ್ರೀಕ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ನವಾಝ್ ಬಿಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಶುಭ ಹಾರೈಸಿ ಮಾತನಾಡಿದ ಅವರು, ಯುವ ಸಮೂಹಗಳು, ದೀನೀ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಮಿತಿ ಪಧಾಧಿಕಾರಿಗಳೊಂದಿಗೆ ಕೈಜೋಡಿಸುವಂತೆ ವಿನಂತಿಸಿಕೊಂಡರು.ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಐಸಿ ದುಬೈ ಸಮಿತಿ ಗೌರವಾಧ್ಯಕ್ಷರಾದ ಸುಲೈಮಾನ್ ಮುಸ್ಲಿಯಾರ್ ಮಾತನಾಡಿದ ಅವರು, ತೆರೆದ ಪುಸ್ತಕದಂತಿರುವ ಅನಿವಾಸಿ ಜೀವನದಲ್ಲಿ ಯುವ ಸಮೂಹಗಳನ್ನು ಒಟ್ಟುಗೂಡಿಸಿಕೊಂಡು ತಾಯಿನಾಡಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಸಮೂಹಕ್ಕೆ ಆಸರೆಯಾಗಿ ಕಾರ್ಯಾಚರಿಸುತ್ತಾ ಬಂದಿರುವ ಕೆಐಸಿ ಅಕಾಡೆಮಿಯಾ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದ್ದು, ಪಧಾಧಿಕಾರಿಗಳು, ಹಿತೈಷಿಗಳೂ ಆದ ತಾವೆಲ್ಲರೂ ಸಮಿತಿ ಪಧಾಧಿಕಾರಿಗಳೊಂದಿಗೆ ಕೈಜೋಡಿಸಿ ಸಹಕರಿಸುವಂತೆ ಕೇಳಿಕೊಂಡು ಕಾರ್ಯಕ್ರಮವನ್ನು ಶುಭಹಾರೈಸಿದರು.
ಸಮಿತಿ ಸಂಘಟನಾ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಸ್ವಾಗತಿಸಿ ಮಾತನಾಡಿ ಕಳೆದ ಮೂರು ವರ್ಷಗಳ ಅಂತರದಲ್ಲಿ ಸಮಿತಿಯು ಕೈಗೊಂಡ ಕಾರ್ಯಚಟುವಟಿಕೆ , ಮುಂದೆ ಸಮಿತಿಯ ಅಧೀನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ಷೇತ್ರಗಳ ಬಗ್ಗೆ ಸವಿವರವಾಗಿ ವಿವರಿಸಿ ಅಥಿತಿಗಳನ್ನೂ , ಹಿತೈಷಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ನಾಸೀರ್ ಬಪ್ಪಳಿಗೆ ರವರು ಸಮಿತಿಯು ಕಳೆದ ಒಂದು ವರ್ಷಗಳಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳನ್ನೊಳಗೊಂಡ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿ ಅನುಮೋದನೆಗಾಗಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ನಂತರ ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಪಧಾದಿಕಾರಿ ಗಾಯಕ ನವಾಝ್ ಕುಕ್ಕಾಜೆ ಯವರು ಭಕ್ತಿಗಾನವು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.
ನಂತರ ಅಧ್ಯಕ್ಷರು ಪಧಾಧಿಕಾರಿಗಳ ಅಭಿಪ್ರಾಯ ಸಹಮತದೊಂದಿಗೆ ವರದಿ ಹಾಗೂ ಲೆಕ್ಕ ಪತ್ರಗಳನ್ನು ಅಂಗೀಕರಿಸಿ ಮುಂದೆ ಕಾರ್ಯಕ್ರಮಕ್ಕೆ ಸೂಚಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆಐಸಿ ಯೂತ್ ವಿಂಗ್ ಗೌರವಾಧ್ಯಕ್ಷರಾದ ರಫೀಕ್ ಅತೂರ್ ರವರು ಪ್ರವಾಸಿಗಳ ಜೀವನದಲ್ಲಿ ಓರ್ವ ವ್ಯಕ್ತಿಗೆ ಬೇಕಾದ ಸಕಲ ಮಾರ್ಗಗಳು ತೆರೆದಿರುವ ಇಂತಹ ಸಂದರ್ಬದಲ್ಲಿ ಸಿಗುವ ಸಮಯಗಳನ್ನು ಸತ್ಕರ್ಮಗಳಿಗೆ ಉಪಯೋಗಿಸಿ , ತಾಯಿನಾಡಿನ ಬಡ ಅನಾಥ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಆಸರೆಯಾಗಿ ಕಾರ್ಯಾಚರಿಸುತ್ತಿರುವ ವಿದ್ಯಾ ಸಂಸ್ಥೆಯಡಿಯಲ್ಲಿ ಕಾರ್ಯವೆಸಗುತ್ತಿರುವ ತಮ್ಮಂತಹ ಯುವ ಸಮೂಹವನ್ನು ಪ್ರಶಂಸಿಲೇಬೇಕು ಎಂದು ಹಿತವಚನ ನೀಡಿ ಕೆಐಸಿಅಲ್ ಕೌಸರ್ ಯೂತ್ ವಿಂಗ್ ಪದಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಹರ್ಷ ವ್ಯಕ್ತ ಪಡಸಿ ಮುಂದಿನ ದಿನಗಳಲ್ಲಿಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಅತ್ಯಲ್ಪ ಸಮಯದಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ಪ್ರಶಂಸಾರ್ಹ ಕಾರ್ಯಗಳ ಮೂಲಕ ಕೆಐಸಿ ಎಂಬ ಮಹಾ ಸ್ಥಾಪನೆಗೆ ನೆರಳಾಗಿ ಕಾರ್ಯಾಚರಿಸುತ್ತಿರುವ ಈ ಯುವ ಸಂಘಟನೆಯು ಇತರ ಸಂಘ ಸಂಸ್ಥೆಗಳಿಂದ ಭಿನ್ನವಾಗಿ ಗೋಚರಿಸುತ್ತಿದೆ. ವ್ಯಕ್ತಿಯೋರ್ವನ ಜೀವಿತ ಕಾಲದಲ್ಲಿ ಅತೀ ಹೆಚ್ಚು ಉಪಯುಕ್ತ ಸಮಯವಾಗಿದೆ ಯುವತ್ವ ಎಂಬುದು. ಪರಲೋಕದಲ್ಲಿಯೂ ಕೂಡ ಅಲ್ಲಾಹನು ಪ್ರಶ್ನಿಸುವ ಕಾಲವಾಗಿದೆ ಅದು, ಆದ್ದರಿಂದ ಇಂತಹ ದೀನೀ ಕಾರ್ಯಗಳೊಂದಿಗೆ ಮುನ್ನಡೆಯುವ ಯುವ ಸಮೂಹವನ್ನುಪ್ರೋತ್ಸಾಹಿಸಿಕೊಂಡು, ಅವರ ಕಾರ್ಯ ವೈಖರಿಗಳಲ್ಲಿ ಕೈಜೋಡಿಸುವಂತೆ ಕೇಳಿಕೊಂಡರು.
ನಂತರ ಅಧ್ಯಕ್ಷೀಯ ಭಾಷಣದಲ್ಲಿ ನವಾಝ್ ಬಿಸಿ ರೋಡ್ ರವರು ಮಾತನಾಡುತ್ತಾ, ಪಧಾಧಿಕಾರಿಗಳ ಹಾಗೂ ನೇತಾರರ ಸಹಕಾರ ಪ್ರೋತ್ಸಾಹವನ್ನು ಸ್ಮರಿಸಿಕೊಂಡರು. ಯುವ ಸಂಘಟನೆಯಲ್ಲಿ ಗುರುತಿಸಿಕೊಳ್ಳುವಲ್ಲಿ ನಮ್ಮ ಯುವ ಸಮೂಹಗಳು ಇಂದು ಹಿಂದೆ ಸರಿಯುತ್ತಿದ್ದು, ಸಂಘಟನೆಯಲ್ಲಿ ಗುರುತಿಸಿಕೊಳ್ಳುವುದರಿಂದ ಯುವ ಸಮೂಹವು ಕಲಿಯುವಂತದ್ದು ಬಹಳಷ್ಟಿದ್ದು, ದೀನೀ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಮುಂದೆ ಬರುವಂತೆ ವಿನಂತಿಸಿಕೊಂಡರು.
ಪ್ರಸಕ್ತ ಕಳೆದೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು ದಾರ್ಮಿಕ ಚೌಕಟ್ಟಿನಲ್ಲಿ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಮುಂದೆಯೂ ಸಮುದಾಯದ ಏಳಿಗೆಗಾಗಿ ಪ್ರಯತ್ನಿಸುವುದಾಗಿ ಭರವಸೆಯನ್ನಿಟ್ಟು ಹಾಲಿ ಸಮಿತಿಯನ್ನು ಬರಕಾಸ್ತುಗೊಳಿಸಿರುವುದಾಗಿ ಘೋಷಿಸಿ ಸಮಿತಿ ಆಯ್ಕೆ ಪ್ರಕ್ರಿಯೆಗೆ ಸೂಚಿಸಿದರು.
ಅದರಂತೆ ನೂತನ ಸಮಿತಿ ಆಯ್ಕೆಯ ಜವಾಬ್ದಾರಿ ವಹಿಸಿ ಮಾತನಾಡಿದ ಅಶ್ರಫ್ ಖಾನ್ ಮಾಂತೂರ್ ರವರು, ಕೆಐಸಿ ಅಕಾಡೆಮಿಯಲ್ಲಿ ನೀಡುತ್ತಿರುವ ಶಿಕ್ಷಣ, ಅಲ್ಲಿನ ಕಾಮಗಾರಿ, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ವಿವರಿಸಿ, ಮಾನವ ಜನಾಂಗಕ್ಕೆ ಅಲ್ಲಾಹನು ಅತ್ಯುನ್ನತ ಪದವಿಯನ್ನು ನೀಡಿದ್ದು, ಯೋಚಿಸುವಂತಹ ಬುದ್ದಿ ಶಕ್ತಿ. ಆದರೆ ಇಂದು ಯುವ ಸಮೂಹಗಳು ಯೋಚಿಸುವಂತಹ ಶಕ್ತಿ ಇದ್ದರೂ ಕೂಡ ಹಲವಾರು ಕಡೆಗಳಲ್ಲಿ ಅನಾಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಸಮುದಾಯಕ್ಕೆ ಕಂಠಕವಾಗಿ ಮಾರ್ಪಡುತ್ತಿರುವ ಇಂತಹ ಕಾಲಘಟ್ಟದಲ್ಲಿ ನಮ್ಮ ಸಂಸ್ಥೆಯು ಇಂದು ನೂರಾರು ವಿದ್ಯಾರ್ಥಿಗಳಿಗೆ ಉಚಿತ ವಿಧ್ಯಾಭ್ಯಾಸವನ್ನು ನೀಡಿ ಸಮುದಾಯದ ಮುಂದೆ ಉತ್ತಮ ಪ್ರಜೆಗಳಾಗಿ ಬಾಳಲು ಕಲಿಸಿದೆ. ಆದ್ದರಿಂದ ಮುಂದೆಯೂ ನಮ್ಮ ಸಂಸ್ಥೆಯಲ್ಲಿ ಹಲವಾರು ಕಾರ್ಯ ಯೋಜನೆಗಳು ಇದ್ದು, ಸಂಸ್ಥೆಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಸಹಕರಿಸುವಂತೆ ಕೇಳಿಕೊಂಡು ನೂತನ ಸಮಿತಿ ಆಯ್ಕೆಗೆ ಚಾಲನೆ ನೀಡಿದರು.
ನೂತನ 2016-17 ರ ಸಾಲಿನ ಪಧಾಧಿಕಾರಿಗಳಾಗಿ
ಗೌರವಾಧ್ಯಕ್ಷರಾಗಿ : ರಫೀಕ್ ಅತೂರ್
ಅಧ್ಯಕ್ಷರು : ನವಾಝ್ ಬಿ ಸಿ ರೋಡ್
ಕಾರ್ಯಾಧ್ಯಕ್ಷರು : ಅಸೀಫ್ ಮರೀಲ್
ಉಪಾಧ್ಯಕ್ಷರು : ಜಬ್ಬಾರ್ ಬೈತಡ್ಕಶಾಹುಲ್ ಬಿ ಸಿ ರೋಡ್ ರೌಫ್ ಪುತ್ತೂರು
ಪ್ರಧಾನ ಕಾರ್ಯದರ್ಶಿ : ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ
ಕಾರ್ಯದರ್ಶಿ : ಅಝೀಝ್ ಸೊಂಪಾಡಿ ಹಾರಿಸ್ ಪಾಪೆತ್ತಡ್ಕ , ಇಸಾಕ್ ಸಾಲೆತ್ತೂರು ,
ಕೋಶಾಧಿಕಾರಿ : ನಾಸೀರ್ ಬಪ್ಪಲಿಗೆ
ಲೆಕ್ಕ ಪರಿಶೋಧಕರು : ಜಲೀಲ್ ವಿಟ್ಲ ರಿಫಾಯಿ ಅರಂತೋಡ್
ಸಂಘಟನಾ ಕಾರ್ಯದರ್ಶಿ : ಅನ್ಸಾಫ್ ಪಾತೂರ್ , ಇಫ್ತಿಕಾರ್ ಅಡ್ಯಾರ್ ಕನ್ನೂರ್ , ಅಝೀಝ್ ಸೊಂಪಾಡಿ
ಸಂಚಾಲಕರು : ಜಾಬೀರ್ ಬಪ್ಪಳಿಗೆ, ನವಾಝ್ ಕುಕ್ಕಾಜೆ , ಜಲೀಲ್ ಉಕ್ಕುಡ ಸಿನಾನ್ ಪೆರ್ಲಂಪಾಡಿ ಸಾಬಿತ್ ಪರ್ಲಡ್ಕ ಸಮೀರ್ ಪರ್ಲಡ್ಕ ಸಲೀಂ ಕೂರ ನಸೀರ್ ವಲತ್ತಡ್ಕ , ತಯ್ಯಿಬ್ ಹೆಂತಾರ್ ಆರಿಫ್ ಕೂರ್ನಡ್ಕ , ಆರಿಫ್ ಮುಕ್ವೆ , ಆಶಿಕ್ ಕೂರ್ನಡ್ಕ, ತಾಹಿರ್ ಹೆಂತಾರ್ , ಜಾಫರ್ ಸವನೂರ್, , ಸಿರಾಜ್ ಬಂಟ್ವಾಳ. ಮುಹಮ್ಮದ್ ಶಾಮ್
ಸಲಹೆಗಾರರು : ಅಶ್ರಫ್ ಪರ್ಲಡ್ಕ , ರಫೀಕ್ ಮುಕ್ವೆ
ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧೀನದಲ್ಲಿ ನಡೆಸಿದ ಕೆಐಸಿ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮದ ಚೈರ್ಮ್ಯಾನ್ ಅಶ್ರಫ್ ಪರ್ಲಡ್ಕ ಹಾಗೂ ಕಳೆದ ಮೂರು ವರ್ಷಗಳಿಂದ ಯೂತ್ ವಿಂಗ್ ಗೌರವಾದ್ಯಕ್ಷರಾಗಿ ಸೇವೆ ಸಲ್ಲಿಸಿದ ರಫೀಕ್ ಅತೂರ್ ರವರನ್ನು ಯೂತ್ ವಿಂಗ್ ಪಧಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು . ಅಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಐಸಿ ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ, ಕಾರ್ಯಧ್ಯಕ್ಷರಾದ ಶರೀಫ್ ಕಾವು , ದುಬೈ ಸಮಿತಿ ಕಾರ್ಯದರ್ಶಿ ಮುಸ್ತಫಾ ಗೂನಡ್ಕ , ಅಬ್ಬಾಸ್ ಕೇಕುಡೆ, ಲತೀಫ್ ಕೌಡಿಚ್ಚಾರ್ , ಮೊದಲಾದವರು ಸಂಧಬೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ರವರು ವಂದಿಸಿ ಅಶ್ರಫ್ ಪರ್ಲಡ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು.