News Kannada
Friday, December 02 2022

ಹೊರನಾಡ ಕನ್ನಡಿಗರು

ದುಬೈಯಲ್ಲಿ ಅದ್ಧೂರಿಯಾಗಿ ನಡೆದ ಯು.ಎ.ಇ. ಬಂಟರ 45ನೇ ವಾರ್ಷಿಕ ಸ್ನೇಹಮಿಲನ

Photo Credit :

ದುಬೈಯಲ್ಲಿ ಅದ್ಧೂರಿಯಾಗಿ ನಡೆದ ಯು.ಎ.ಇ. ಬಂಟರ 45ನೇ ವಾರ್ಷಿಕ ಸ್ನೇಹಮಿಲನ

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟರ ಸಂಘಟನೆಯ 45ನೇ ವಾರ್ಷಿಕ ಸ್ನೇಹಮಿಲನ ಹಾಗೂ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ ಸಮಾರಂಭ ಅತ್ಯಂತ ವರ್ಣ ರಂಜಿತವಾಗಿ ನೆರವೇರಿತು.

2019 ಮೇ 3ನೇ ತಾರೀಕು ಶುಕ್ರವಾರ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ದುಬೈ ಇಂಡಿಯನ್ ಸ್ಕೂಲ್, ಶೇಖ್ ರಾಶೀದ್ ಸಭಾಂಗಣದಲ್ಲಿ ಏರ್ಪಡಿಸಿದ್ದು ಯು.ಎ.ಇ. ಯ ಎಲ್ಲಾ ಭಾಗಗಳಿಂದ ಬಂಟ ಬಾಂಧವರು ಹಾಗೂ ಆಹ್ವಾನಿತ ಅತಿಥಿಗಳು ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದರು.

ಮುಖ್ಯ ಅತಿಥಿಗಳನ್ನು ಸಭಾಂಗಣದ ಮಹಾಧ್ವಾರದಿಂದ ವೇದಿಕೆಯವರೆಗೆ ಕೇರಳದ ಪಂಚವಾದ್ಯ ಚೆಂಡೆವಾದನದೊಂದಿಗೆ ಬಂಟ್ಸ್ ಸುಮಂಗಲೆಯರು ಪೂರ್ಣ ಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಸಾಂಪ್ರದಾಯಿಕವಾಗಿ ಸರ್ವವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯು.ಎ.ಇ. ಬಂಟ್ಸ್ ಮಹಾ ಪೋಷಕರಾದ ಡಾ. ಚಂದ್ರಕುಮಾರಿ ಬಿ. ಆರ್. ಶೆಟ್ಟಿ ಅವರು ಹಾಗೂ ಅಲ್ ಕಾರ್ಗೊ ಲಾಜಿಸ್ಟಿಕ್ ಗ್ಲೋಬಲ್ ಸಿ.ಇ.ಒ. ಮತ್ತು ವ್ಯವಸ್ಥಾಪಕ ನಿರ್ದೇಶಕರು ಡಾ. ಶಶಿಕಿರಣ್ ಶೆಟ್ಟಿ, ಕರ್ನಾಟಕ ಚಂದನವನದ ಪ್ರಖ್ಯಾತ ನಿರ್ದೇಶಕರು, ನಿರ್ಮಾಪಕರು, ಸಾಹಿತಿ ಮತ್ತು ನಾಯಕ ನಟರಾದ ರಿಶಬ್ ಶೆಟ್ಟಿಯವರು, “ಬಂಟ ವಿಭೂಷಣ ಪ್ರಶಸ್ತಿ” ಪುರಸ್ಕೃತರು ಡಾ ಇಂದಿರಾ ಹೆಗ್ಡೆ, ಎನ್. ಎಂ. ಸಿ. ಟ್ರೇಡಿಂಗ್ ಸಿ.ಇ.ಒ. ನಿರ್ಮನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಅದಿಕೃತ ಚಾಲನೆ ನೀಡಲಾಯಿತು.

ಸಂಗೀತ ಶೆಟ್ಟಿಯವರ ತಂಡದಿಂದ ಪ್ರಾರ್ಥನೆ, ಸುಷ್ಮಾ ಶೆಟ್ಟಿ ನಿರ್ದೇಶನದಲ್ಲಿ ಮಕ್ಕಳ ಸ್ವಾಗತ ನೃತ್ಯ ಹಾಗೂ ನಿತ್ಯಾನಂದ ಶೆಟ್ಟಿಯವರಿಂದ ಸ್ವಾಗತದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿನುತಾ ರೈ ನಿರ್ದೇಶನದ ಬಂಟ್ಸ್ ರಾಕರ್,  ಕೀರ್ತಿ ಶೆಟ್ಟಿ ನಿರ್ದೇಶನದ ಜಂಪಿನ್ ಜಿಲ್ಲ್ಸ್,  ರಮ್ಯಾ ಶೆಟ್ಟಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 2,  ವಿದ್ಯಾ ಶೆಟ್ಟಿ ನಿರ್ದೇಶನದ ಚುರುಕ್ ಪಾರ್ಟಿ, ದೇವಿಕಾ ಮಲ್ಲಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 1, ಪ್ರಿಯ ಶೆಟ್ಟಿ ನಿರ್ದೇಶನದ ಸಮರ್ಪಣ್ ಈ ಎಲ್ಲಾ ತಂಡ ಮಕ್ಕಳಿಂದ ಆಕರ್ಷಕ ಸಮೂಹ ನೃತ್ಯ ಸರ್ವರ ಮನ ಸೆಳೆಯಿತು.

ಪ್ರಖ್ಯಾತ ಯುವ ಗಾಯಕ ನಿಶಾನ್ ರೈ ಅವರ ಸುಮಧುರ ಕಂಠಸಿರಿಯಲ್ಲಿ ಸುಶ್ರಾವ್ಯ ಗಾಯನ ಕಾರ್ಯಕ್ರಮ ಸರ್ವ ಮೆಚ್ಚುಗೆಯನ್ನು ಪಡೆಯಿತು.

ಊರಿನಿಂದ ಆಗಮಿಸಿದ ನಿತೇಶ್ ಶೆಟ್ಟಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಟ್ಟರು.

ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಗೌರವ ಸಮರ್ಪಣೆ
ಸರ್ವೋತ್ತಮ ಶೆಟ್ಟಿ ಅವರು 2018-19ನೇ ಸಾಲಿನ ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯ ದಂಪತಿಗಳನ್ನು ವೇದಿಕೆಗೆ ಬರಮಾಡಿಕೊಂಡು ವಿವಿದ ಕಾರ್ಯಕ್ರಮಗಳ ಮೂಲಕ ತಮ್ಮ ವಿಸ್ವಾರ್ಥ ಸೇವೆಯನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. 2019-20 ನೇ ಸಾಲಿನ ನೂತನ ಸಮಿತಿಯವರನ್ನು ವೇದಿಕೆಗೆ ಬರಮಾಡಿಕೊಂಡು ನೂತನ ಸಾಲಿನ ಜವಬ್ಧಾರಿಯನ್ನು ನೀಡಲಾಯಿತು.

ಯು.ಎ.ಇ. ಬಂಟ್ಸ್ ನ ಪ್ರಾಯೋಜಕರುಗಳಿಗೆ ಗೌರವ ಸಮರ್ಪಣೆ
ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ಪ್ರೋತ್ಸಾಹ, ಪ್ರಾಯೊಜಕತ್ವವನ್ನು ನೀಡಿರುವ ಉಧ್ಯಮಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

See also  ಯಕ್ಷಪ್ರಿಯ ಬಳಗದ 3ನೇ ವಾರ್ಷಿಕೋತ್ಸವ ಸಮಾರಂಭ

ಪ್ಲಾಟಿನಂ ಪ್ರಾಯೋಜಕರು ನಿಹಾಲ್ ಅಬ್ದುಲ್ಲಾ- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಶ್ರೇಯಾ ಶೆಟ್ಟಿ – ಅಲ್ಫಾ ಗ್ಳೊಬಲ್ ಕನೆಕ್ಟ್, ಸುದೇಶ್ ಗಿರಿಯನ್ – ಸಿ.ಇ.ಒ. ಎಕ್ಸ್ ಪ್ರೆಸ್ಸ್ ಮನಿ -ಗ್ಲೋಬಲ್ ಟ್ರಾನ್ಸ್ ಫರ್, ವಿನೋದ್ ನಂಬಿಯಾರ್- ಯು.ಎ.ಇ. ಎಕ್ಸೆಂಜ್. ಗೋಲ್ಡ್ ಸ್ಪಾನರ್ಸ್ : ರವಿ ರೈ ಎನ್.ಎಂ.ಸಿ.ಗ್ರೂಪ್, ದಿವಾಕರ್ ಶೆಟ್ಟಿ- ರಾಯಲ್ ವಿಶನ್ ಗ್ಲಾಸ್, ಸತೀಶ್ ಹೆಗ್ಡೆ ವೈಟ್ ಫೀಲ್ದ್ ಜೆನರಲ್ ಟ್ರಾನ್ಸ್ ಪೋರ್ಟ್ ಅಬುಧಾಬಿ, ರವಿ ಶೆಟ್ಟಿ ಸ್ಟ್ರಕ್ಟನ್ ಕನ್ಸ್ಟ್ರಕ್ಶನ್, ಕಾರ್ತೀಕೆಯನ್-ಯೂನಿಯನ್ ಇನ್ಸೂರೆನ್ಸ್ ಕಂಪೆನಿ.

ಸಿಲ್ವರ್ ಸ್ಪಾನ್ಸರ್ಸ್: ದಿನೇಶ್ ಶೆಟ್ಟಿ – ಡ್ಯೂಮೆಕ್ ಇಂಜಿನಿಯರಿಂಗ್, ಪ್ರತಾಪ್ ಕಿರಣ್ ಶೆಟ್ಟಿ- ರಿಯಾ ಫೈನಾನ್ಸಿಯಲ್ ಸರ್ವಿಸಸ್, ಸ್ತೈರ್ಯ ಕರುಣಾಕರ್ ಎಸ್. ಫ್ಯೂಚರ್ ಹೆವಿ ಎಕ್ಯೂಪ್ಮೆಂಟ್ ದುಬಾಯಿ, ದೀವೆಶ್ ಆಳ್ವ- ವುಡ್ ಲ್ಯಾಂಡ್ಸ್ ರೆಸ್ಟೊರೆಂಟ್, ರತ್ನಾಕರ್ ಶೆಟ್ಟಿ- ಮಹೆಂದ್ರ ಅಶೆರ್ ಅಂಡ್ ಕಂಪೆನಿ, ಸುಂದರ್ ಶೆಟ್ಟಿ ನಿಹಾಲ್ ರೆಸ್ಟೊರೆಂಟ್, ಪ್ರೇಮನಾಥ್ ಶೆಟ್ಟಿ – ಹೀಟ್ ಶೀಲ್ಡ್, ಗುಣಶೀಲ್ ಶೆಟ್ಟಿ ಏಸ್ ಕ್ರೇನ್ / ಉಪಾಸನ ಕುದುರೆಮುಖ್, ಪ್ರವೀಣ್ ಕುಮಾರ್ ಶೆಟ್ಟಿ- ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ಸ್ ಯು.ಎ.ಇ. ಮತ್ತು ಜಾರ್ಜೀಯ,

ಶುಭಹಾರೈಸಿದವರು: ಸರ್ವೋತ್ತಮ್ ಶೆಟ್ಟಿ – ಸಿರಿನ್ ಆಟೋ ಸರ್ವಿಸಸ್, ಶೇಖರ್ ಶೆಟ್ಟಿ – ಸಾಯಿಬಾ ಕ್ಯಾಟರಿಂಗ್.

ಉಡುಗೊರೆ ಪ್ರಾಯೋಜಕರು: ಜಯರಾಂ ರೈ – ಬಿನ್ ಫರ್ದಾನ್ ಗ್ರೂಪ್, ಬಾಲಕೃಷ್ಣ ಶೆಟ್ಟಿ – ಮುಂಬೈ ಎಕ್ಸ್ ಪ್ರೆಸ್ಸ್ ರೆಸ್ಟೊರೆಂಟ್, ಶಿವ ಶೆಟ್ಟಿ-ಹಿಮಾಲಯ, ವಾಸು ಶೆಟ್ಟಿ -ಬ್ರಿಟಾನಿಯ, ನಿಕಾನ್ ಕ್ಯಾಮೆರಾ, ಶಶಿ ಶೆಟ್ಟಿ ಎಸ್ಕಾಟ್ ವೋಚರ್ ಒಮಾನ್ ಮತ್ತು ಟರ್ಕಿ.

ಡಾ| ಇಂದಿರಾ ಹೆಗ್ಡೆಯವರಿಗೆ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ
ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರೀಯವಾಗಿರುವ ಪ್ರತಿಭಾವಂತ ಹಿರಿಯರಾದ ಡಾ| ಇಂದಿರಾ ಹೆಗ್ಡೆಯವರಿಗೆ ಯು.ಎ.ಇ. ಬಂಟ್ಸ್ ಕೊಡಮಾಡುವ 2018-19ನೇ ಸಾಲಿನ “ಬಂಟ ವಿಭೂಷಣ ಪ್ರಶಸ್ತಿ” ಯನ್ನು ಪ್ರದಾನಿಸಲಾಯಿತು ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು ಹಾಗೂ ಡಾ| ಶಶಿಕಿರಣ್ ಶೆಟ್ಟಿ ಯವರು ಸನ್ಮಾನ ಪ್ರಕ್ರಿಯೆಯನ್ನು ನೆರವೇರಿಸಿಕೊಟ್ಟರು. ಸಂಪತ್  ಶೆಟ್ಟಿ ಅವರು ಸನ್ಮಾನ ಪತ್ರ ವಾಚಿಸಿದರು.

ಯು.ಎ.ಇ. ಬಂಟ್ಸ್ ಸ್ಥಾಪಕರು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶಂಕರ್ ಶೆಟ್ಟಿ ಮತ್ತು ಮಲ್ಲಿಕಾ ಶೆಟ್ಟಿ ದಂಪತಿಗಳನ್ನು ಸನ್ಮಾನಿ ಗೌರವಿಸಲಾಯಿತು.

ಕ್ರೀಯಾತ್ಮಕ ಕಲಾ ನಿರ್ದೇಶಕ ಬಿ. ಕೆ. ಗಣೇಶ್ ರೈಯವರಿಗೆ ಸನ್ಮಾನ
ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಬಿ. ಕೆ. ಗಣೇಶ್ ರೈ ಅವರು ಯು.ಎ.ಇ. ಬಂಟ್ಸ್ ಗೆ ಆಕರ್ಷಕ ಲಾಂಚನ ವಿನ್ಯಾಸ, ವೇದಿಕೆಯ ಚಿತ್ರಪಟ ವಿನ್ಯಾಸ, ಡಿಜಿಟಲ್ ಡಿಸ್ ಪ್ಲೆ ವಿನ್ಯಾಸ, ಯು.ಎ.ಇ. ಬಂಟ್ಸ್ ಡೈರಕ್ಟರಿ ವಿನ್ಯಾಸ, ಸಾಮೂಹಿಕ ಸತ್ಯನಾರಾಯಣ ಪೂಜಾ ವೇದಿಕೆ ವಿನ್ಯಾಸ, ರಕ್ತದಾನ ಶಿಬಿರ ಆಯೋಜನೆ, ಎಲ್ಲಾ ಕಾರ್ಯಕ್ರಮಗಳ ಆಮಂತ್ರಣ ವಿನ್ಯಾಸ ಹಾಗೂ ಸನ್ಮಾನ ಪತ್ರಗಳ ವಿನ್ಯಾಸ ಹಾಗೂ ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳ ಲೇಖನಗಳನ್ನು ಮಾಧ್ಯಮಗಳಲ್ಲಿ ಪ್ರಕಟಣೆಗಳ ಮೂಲಕ ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿರುವುದನ್ನು ಅಭಿನಂದಿಸಿ, ಧರ್ಮ ಪತ್ನಿ, ಮಂಜುಳಾ ಗಣೇಶ್ ರೈ, ಮಕ್ಕಳು ಮೋನಿಶ್ ರೈ ಮತ್ತು ಐಶ್ವರ್ಯ ರೈ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಪತ್  ಶೆಟ್ಟಿ ಅವರು  ಸನ್ಮಾನ ಪತ್ರ ವಾಚಿಸಿದರು.

See also  ಕುವೈತ್,ಸೋಶಿಯಲ್ ಫೋರಮ್ ನೆರವು: ಇಬ್ಬರು ಭಾರತೀಯರು ಸುರಕ್ಷಿತ ತವರಿಗೆ

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಹರೈನ್ ನಿಂದ ಆಗಮಿಸಿದ ಅಮರನಾಥ್ ಶೆಟ್ಟಿ, ಆಸ್ಟೀನ್ ಸಂತೋಷ್, ಪ್ರದೀಪ್ ಶೆಟ್ಟಿ ಹಾಗೂ ತಂಡದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯು.ಎ.ಇ. ಬಂಟ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಬಿಲ್ಲವಾಸ್ ದುಬಾಯಿ ಅಧ್ಯಕ್ಷರಾದ ಸತೀಶ್ ಪೂಜಾರಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ನೇಹಮಿಲನ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವಿಶ್ವಕ್ಕೆ ಮುಟ್ಟಿಸಿರುವ “ನಮ್ಮ ಕುಡ್ಲ” ವಾಹಿನಿಯ ಸುಜಿತ್ ಲಯೊನಿಲ್ ಹಾಗೂ ಮಾಧ್ಯಮ ಕ್ಷೇತ್ರದ ಇನ್ನಿತರ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ಗೌರವ ಅತಿಥಿಯಾಗಿ ಆಗಮಿಸಿದ ರಿಶಬ್ ಶೆಟ್ಟಿಯವರ ನೂತನ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಾಯಕ ನಿಶಾನ್ ರೈ ಮತ್ತು ಕಾರ್ಯಕ್ರಮ ನಿರೂಪಕ ನಿತೇಶ್ ಶೆಟ್ಟಿಯವರನ್ನು ಸನ್ಮಾನಿ ಗೌರವಿಸಲಾಯಿತು.

ಯು.ಎ.ಇ. ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜೆಯ ಜವಾಬ್ಧಾರಿಯನ್ನು ವಹಿಸಿಕೊಂಡಿರುವ ರವಿರಾಜ್ ಶೆಟ್ಟಿ ದಂಪತಿಗಳು, ರಕ್ತದಾನ ಶಿಬಿರದ ರುವಾರಿ ಉದಯ ಶೆಟ್ಟಿ ದಂಪತಿಗಳು, ಕ್ರೀಡಾ ಕೂಟದ ವ್ಯಸ್ಥೆ ಯ ಜವಾಬ್ಧಾರಿಯ ಕಿರಣ್ ಶೆಟ್ಟಿ ದಂಪತಿಗಳು ಹಾಗೂ ವೇದಿಕೆಯ ಹಿಂಬದಿಯ ಶಕ್ತಿಗಳಾದ ವಾಸು ಶೆಟ್ಟಿ, ವಿಶ್ವನಾಥ್ ಶೆಟ್ಟಿ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು

ಆಶಾ ಜಯರಾಂ ರೈ ನಿರ್ದೇಶನದ “ಗುಂಗುರು’ ನೃತ್ಯ ಪ್ರದರ್ಶನ,  ಸೀಮಾ ಶೆಣವಾ ನಿರ್ದೇಶನದ “ರಕ್ತಬೀಜಾಸುರ ವದಾ” ನೃತ್ಯ ರೂಪಕ, ಡಾ| ಪ್ರೀತಿ ಶೆಟ್ಟಿ ನಿರ್ದೇಶನದ ಅಭುಧ್ಯಯ ತಂಡದ ನೃತ್ಯ, ಸುಶ್ಮಾ ಪ್ರಕಾಶ್ ಶೆಟ್ಟಿ ನಿರ್ದೇಶನದ ಕಾಳಿಕಾ ತಾಂಡವ ನೃತ್ಯ, ನಿತ್ಯಾನಂದ ಶೆಟ್ಟಿ ನಿರ್ದೇಶನದ ಕ್ರಿಕೆಟ್ ನೃತ್ಯ ಕಾರ್ಯಕ್ರಮ ನಡೆಯಿತು.

ಮಕ್ಕಳ ಛದ್ಮ ವೇಷ  ಸ್ಪರ್ಧಾ ವಿಜೆತರಿಗೆ ಬಹುಮಾನ ವಿತರಣೆ

7 ರಿಂದ 12 ವಯೋಮಿತಿ – ಪ್ರಥಮ – ಸಾನ್ವಿ ಸುಕುಮಾರ್ ಶೆಟ್ಟಿ, ದ್ವಿತೀಯಾ – ಸ್ಥೈರ್ಯ ಕರುಣಾಕರ್ ಶೆಟ್ಟಿ, ತೃತಿಯ -ಮನಸ್ವಿ ಮಹೇಶ್ ಶೆಟ್ಟಿ
12 ರಿಂದ 16 ವಯೋಮಿತಿ – ಪ್ರಥಮ – ಸಾಹನಿಯ ಸದಾನಂದ ಶೆಟ್ಟಿ, ದ್ವಿತೀಯಾ – ಭೌತಿಕ್ ಧನ್ಪಾಲ್ ಶೆಟ್ಟಿ, ತೃತಿಯಾ – ಸ್ಪರ್ಶಾ ಶೆಟ್ಟಿ.

ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅದೃಷ್ಟ ಚೀಟಿ ವಿಜೇತರಿಗೆ ಬಹುಮಾನ ನೀಡಿದ ನಂತರ ಸರ್ವೋತ್ತಮ ಶೆಟ್ಟಿಯವರು ಸರ್ವರಿಗೂ ವಂದನೆ ಸಲ್ಲಿಸಿದರು.

ಬಿ. ಕೆ. ಗಣೆಶ್ ರೈ – ಯು.ಎ.ಇ.
ಛಾಯ ಚಿತ್ರಗಳು: ಸಮೀಹಾ ಸ್ಟುಡಿಯೊ ಅಬುಧಾಬಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು