News Kannada
Tuesday, November 29 2022

ಹೊರನಾಡ ಕನ್ನಡಿಗರು

ಮುಂಬೈನಲ್ಲಿ 2020ರಲ್ಲಿ “ಚಿಣ್ಣರ ಚಿಲಿಪಿಲಿ-4′: ವಿಶೇಷ ಸಮಿತಿ ರಚನೆ - 1 min read

Photo Credit :

ಮುಂಬೈನಲ್ಲಿ 2020ರಲ್ಲಿ “ಚಿಣ್ಣರ ಚಿಲಿಪಿಲಿ-4′: ವಿಶೇಷ ಸಮಿತಿ ರಚನೆ

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಆಶ್ರಯದಲ್ಲಿ 2020ರ ಫೆಬ್ರವರಿ 8ರಂದು ನಡೆಯುವ ನಾಲ್ಕನೇ ವರ್ಷದ ಬಂಟರವಾಣಿ “ಚಿಣ್ಣರ ಚಿಲಿಪಿಲಿ-4′ ಫ್ಯಾಶನ್‌ ಶೋ ಪ್ರತಿಭಾ ಸ್ಪರ್ಧೆ ಹಾಗೂ ಸಮೂಹ ನೃತ್ಯ ಸ್ಪರ್ಧೆ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಯಿತು.

ಕಾರ್ಯಕ್ರಮವು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಲಿದೆ.

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಮಾರ್ಗದರ್ಶನದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ಮತ್ತು ಸಮಿತಿಯ ಪ್ರೋತ್ಸಾಹ, ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಸಭೆಯಲ್ಲಿ ಕಾರ್ಯಕ್ರಮ ಬಗ್ಗೆ ಚರ್ಚೆ ಹಾಗೂ ಸಮಿತಿಯೊಂದನ್ನು ರಚಿಸಲಾಯಿತು.

 

See also  ಡಾ. ಸುನಿತಾ ಶೆಟ್ಟಿಯವರಿಗೆ ಯು.ಎ.ಇ. ಬಂಟ್ಸ್ ನ ಪ್ರತಿಷ್ಟಿತ `ಬಂಟ ವಿಭೂಷಣ ಪ್ರಶಸ್ತಿ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು