News Kannada
Sunday, December 04 2022

ಹೊರನಾಡ ಕನ್ನಡಿಗರು

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನವರಾತ್ರಿ ಉತ್ಸವ

Photo Credit : By Author

ಮುಂಬಯಿ: ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮದಲ್ಲಿ ಬಾಗವಹಿಸಲು ಸಂತೋಷವಾಗುತ್ತಿದೆ. ಪ್ರತೀ ಸಲ ವಿಶೇಷ ರೀತಿಯ ಕಾರ್ಯಕ್ರಮವನ್ನು ನೀಡುತ್ತಿರುವ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ ಇಂದು ಮಹಿಳಾ ವಿಭಾಗದ ಸದಸ್ಯೆಯರಿಂದ “ಮಹಿಷಾಸುರ ಮರ್ಧಿನಿ” ಯಕ್ಷಗಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ, ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ನುಡಿದರು.

ಸೆ.30 ರಂದು ದಹಿಸರ್ ಪೂರ್ವ ಕಾಶೀಮಠದ ಶ್ರೀ ರುಕುಮಾಯಿ ದೇವಸ್ಥಾನದ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಯ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಬಾಗದ ನವರಾತ್ರಿ ಉತ್ಸವ – ಯಕ್ಷಗಾನ -ಹಳದಿ ಕುಂಕುಮ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಂದ್ರಹಾಸ ಕೆ. ಶೆಟ್ಟಿ ಯವರು ಬಂಟರ ಸಂಘ ಮುಂಬಯಿಯ ಬಗ್ಗೆ ಮಾತನಾಡುತ್ತಾ ಬಂಟರ ಸಂಘವು ಆಧುನಿಕ ಸೌಲಭ್ಯವನ್ನು ಹೊಂದಿನ ನೂತನ ಶಿಕ್ಷಣ ಸಂಸ್ಥೆಯನ್ನು ಈ ಪರಿಸರದ ಬೋರಿವಲಿ ಪಶ್ಚಿಮದ ಐ. ಸಿ. ಕಾಲೋನಿಯಲ್ಲಿ ಪ್ರಾರಂಭಿಸಲಿದ್ದು ಇದರ ಕೆಲಸವು ತೀವ್ರ ಗತಿಯಲ್ಲಿ ಸಾಗುತ್ತಿದೆ. ಈ ಕಾರ್ಯವನ್ನು ನಿಗದಿತ ಅವದಿಯೊಳಗೆ ಗುರಿಮುಟ್ಟಿಸುವಲ್ಲಿ ಈ ಪರಿಸರದ ಗಣ್ಯರು ಇದರಲ್ಲಿ ಉನ್ನತ ಜವಾಬ್ಧಾರಿಯೊಂದಿಗೆ ಕೆಲಸವನ್ನು ಮಾಡುತ್ತಿದ್ದಾರೆ.ನಮ್ಮ ಸಮಾಜದ ದಾನಿಗಳ ಸಹಾಯವನ್ನು ನಾವು ಎಂದೂ ಮರೆಯುವಂತಿಲ್ಲ. ನಮ್ಮ ಎಲ್ಲಾ ಯೋಜನೆಗಳಿಗೆ ಸಮಾಜದ ಬಂಧುಗಳು ತಾವಾಗಿಯೇ ಮುಂದೆ ಬಂದು ಸಹಕರಿಸುತ್ತಿದ್ದಾರೆ. ನಮ್ಮ ಸಂಘಕ್ಕೆ ನೀಡುವ ಎಲ್ಲಾ ಸಹಾಯವು ಉತ್ತಮ ಕೆಲಸಕ್ಕೆ ಸದ್ವಿನಿಯೋಗವಾಗುತ್ತಿದೆ ಎಂಬುದನ್ನು ಅವರೆಲ್ಲರೂ ಅರಿತಿದ್ದಾರೆ. ಅದಕ್ಕಾಗಿ ನಾವೆಲ್ಲರೂ ದಾನಿಗಳಿಗೆ ಸದಾ ಚಿರಋಣಿಗಳು.ನಾವು ಬೊರಿವಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ನಮ್ಮ ಸಂಘವು ಇನ್ನೊಂದು ಇತಿಹಾಸವನ್ನು ನಿರ್ಮಿಸಲಿದೆ. ಬಂಟರ ಸಮಾಜದ ಯಾವನೇ ವ್ಯಕ್ತಿ ತನ್ನ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದಲ್ಲಿ ಆತ ಮೊದಲು ತನ್ನ ಸಮಾಜದ ಬಗ್ಗೆ ಚಿಂತಿಸುತ್ತಿದ್ದು ತಾನು ಯವುದಾದರೂ ರೀತಿಯಲ್ಲಿ ನಮ್ಮ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದು ನಮ್ಮ ಯಾವುದೇ ಯೋಜನೆಗಳಿಗೆ ಸಹಾಯಕ್ಕಾಗಿ ಯಾರ ಹತ್ತಿರವೂ ಹೋಗುವ ಅಗತ್ಯ ಕಂಡುಬರುವುದಿಲ್ಲ, ಸಹಾಯ ಸಹಕಾರ ತಾನಾಗಿಯೇ ಹರಿದು ಬರುತ್ತದೆ. ಇದು ನಮ್ಮ ಸಮಾಜದ ವಿಶೇಷತೆ. ಸಮಾಜದ ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗಲು ಬಂಟರ ಸಂಘ ಮುಂಬಯಿ ಹಲವಾರು ಪ್ರಗತಿಪರ ಯೋಜನೆಗಳನ್ನು ಕೈಗೊಂಡಿದ್ದು ಸಂಘದ ಸದಸ್ಯರ ಹಾಗೂ ಅವರ ಕುಟುಂಬದವರೆಲ್ಲರ ಉದ್ಯೋಗ, ವ್ಯವಹಾರ ಹಾಗೂ ಇನ್ನಿತರ ಎಲ್ಲಾರೀತಿಯ ಮಾಹಿತಿಗಳನ್ನು ಪಡೆದುಕೊಳ್ಳುವುದು, (Updation of Membership portal) , ಬಂಟ್ಸ್ ಮೊಬಾೈಲ್ ಆ್ಯಪ್ ಮಾತ್ರವಲ್ಲದೆ ಬಂಟ ಉದ್ಯಮಿಗಳಿಗೆ ಹಾಗೂ ಬಂಟ ಉದ್ಯೋಗಾಂಕ್ಷಿಗಳಿಗೆ ಬಂಟರಿಂದ ಬಂಟರಿಗೆ (ಬಿ ಟು ಬಿ) ಎಂಬ ಯೋಜನೆ, ಸಮಾಜದ ಯುವ ಜನಾಂಗವನ್ನು ಸಂಘದ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿರಿಸಲು ಪ್ರೌಡ್ ಟು ಬಿ ಬಂಟ್ಸ್ ಮುಂತಾದ ಯೋಜನೆಗಳು ಸೇರಿವೆ. ಸಂಘದ ಪ್ರತಿಯೊಂದು ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹಿಸಿ ಸಹಕರಿಸಬೇಕು ಎಂದರು.

See also  ಗೋಕರ್ಣ: ಮೋಹದ ಕ್ಷಯ ಮೋಕ್ಷಕ್ಕೆ ಕಾರಣ ಎಂದ ರಾಘವೇಶ್ವರ ಶ್ರೀ

ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷರಾದ ಮುಂಡ್ಕೂರು ರತ್ನಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯದ ಸಮನ್ವಯಕ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮತ್ತು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ನಿಟ್ಟೆ ಎಂ. ಜಿ. ಶೆಟ್ಟಿ, ಸಂಚಾಲಕ ರವೀಂದ್ರ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಮಹಿಳಾ ವಿಭಾಗದ ಮುಖ್ಯ ಸಲಹೆಗಾರ್ತಿ ವಿನೋದಾ ಅಶೋಕ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು,

ನವರಾತ್ರಿಯ ಐದನೆಯ ದಿನ ಆಚರಿಸಲ್ಪಡುವ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲು ಪ್ರಾರಂಭದಲ್ಲಿ ಸ್ಕಂದಮಾತಾ ರೂಪಿಣಿಯಾದ ಶ್ರೀ ದುರ್ಗಾಮಾತೆಯ ಮಂಟಪದ ಮುಂದೆ ದೀಪವನ್ನು ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆಯವರು, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಶ್ರೀ ಯಂ.ಜಿ ಶೆಟ್ಟಿಯವರು ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಚಿಯವರು ಹಾಗೂ ಇತರ ಗಣ್ಯರು ಬೆಳಗಿಸಿದರು. ಈ ಸಂದರ್ಭದಲ್ಲಿ ರಜನಿ ರಘುನಾಥ ಶೆಟ್ಟಿಯವರು ಪ್ರಾರ್ಥನಾ ಶ್ಲೋಕವನ್ನು ಹಾಡಿದರು.ಯಕ್ಷಗಾನದ ಬಳಿಕ ದುರ್ಗಾ ಮಾತೆಗೆ ಆರತಿ ಬೆಳಗಿ ಶ್ರೀ ಮುಂಡಪ್ಪ ಎಸ್. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವು ಜರಗಿದ್ದು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜಾ ಅಮರ್ ನಾಥ್ ಶೆಟ್ಟಿ ಯವರು ಎಲ್ಲರನ್ನೂ ಸ್ವಾಗತಿಸುತ್ತಾ ಮಹಾನಗರದಲ್ಲಿ ಅನೇಕತೆಯಿಂದ ಏಕತೆಯನ್ನು ರೂಪಿಸುತ್ತಿರುವ ನಾವು ಪ್ರತೀವರ್ಷ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುತ್ತೇವೆ. ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ಶ್ರೀ ದೇವಿಯು ನಮ್ಮೆಲ್ಲರ ದುಖ ಗಳನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಲಿ ಎಂದು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಂಡಪ್ಪ ಎಸ್. ಪಯ್ಯಡೆಯವರು ಸೂರ್ಯನ ಕಿರಣದಿಂದ ಹೂವು ಅರಳುವಂತೆ ಮಹಿಳೆಯ ಹೃದಯದಲ್ಲಿನ ಪ್ರೀತಿಯಿಂದ ಸಂಸಾರ ಅರಳಲು ಸಾಧ್ಯ. ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಮುಂದೆ ಅವರು ಹಿರಿಯರನ್ನು ಗೌರವಿಸಲು ಸಾಧ್ಯ. ಮಾನವನಲ್ಲಿ ಸತ್ಯ ಸದಾಚಾರ ಇಲ್ಲದಿದ್ದಲ್ಲಿ ಯಾವುದೇ ಪೂಜೆ ಮಾಡಿದರೂ ಅದು ವ್ಯರ್ಥ. ಜೀವನದಲ್ಲಿ ಸಂಬಂಧ ಶಾಶ್ವತವಾಗಿ ಉಳಿಯಬೇಕಾದರೆ ಪ್ರೀತಿ ಅತೀ ಮುಖ್ಯ. ಅದೇ ರೀತಿ ಗಳಿಸಿದ ಸಂಪತ್ತು ಶಾಶ್ವತವಾಗಿ ಉಳಿಯಬೇಕಾದರೆ ಗುರು ಹಿರಿಯರ ಆಶ್ರೀರ್ವಾದ ಸಂಪಾದಿಸುವುದು ಅಗತ್ಯ. ಇದರಿಂದಲೇ ಜೀವನಲ್ಲಿ ಯಶಸ್ವಿಯನ್ನು ಸಾಧಿಸಲು ಸಾಧ್ಯ ಎನ್ನುತ್ತಾ ಸಂಘದ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಶುಭಕೋರಿ ಅಭಿನಂದನೆ ಸಲ್ಲಿಸಿದರು.

ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಿಟ್ಟೆ ಯಂ ಜಿ ಶೆಟ್ಟಿಯವರು, ಅರಸಿನ ಕುಂಕುಮ ಹಾಗೂ ಮಹಿಳಾ ವಿಭಾಗದ ಸದಸ್ಯೆಯರ ಯಕ್ಷಗಾನವು ಉತ್ತಮವಾಗಿ ಪ್ರದರ್ಶನಗೊಂಡಿದ್ದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಇದನ್ನು ಸಂಯೋಜಿಸುವಲ್ಲಿ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ ಶೆಟ್ಟಿಯವರ ಪ್ರಯತ್ನ ಶ್ಲಾಘನೀಯ.ಮುಂದೆಯೂ ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೆ ಸಮಿತಿಯ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆ ಎಂದರು.

See also  ಮಂಗಳೂರು: ಮತಾಂಧ ಶಕ್ತಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದ ಸುನಿಲ್ ಕುಮಾರ್

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಕಲಾ ಪೂಂಜ, ಪ್ರಾದೇಶಿಕ ಸಮಿತಿಯ ಸಂಚಾಲಕರಾದ ರವೀಂದ್ರ ಎಸ್ ಶೆಟ್ಟಿ, ಹಿರಿಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ವಿಜಯ ಆರ್. ಭಂಡಾರಿ, ಕಾರ್ಯದರ್ಶಿ ಅಶೋಕ ವಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ ಶೆಟ್ಟಿ,, ಜೊತೆ ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಲಹೆಗಾರರಾದ ವಿನೋದಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆ, ಕೋಶಾಧಿಕಾರಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ಶುಭಾಂಗಿ ಎಸ್ ಶೆಟ್ಟಿ ಯವರೂ ಇತರ ಗಣ್ಯರೊಂದಿಗೆ ಉಪಸ್ಥಿತರದ್ದರು.

ಅತಿಥಿಗಳನ್ನು ಮಾತ್ರವಲ್ಲದೆ ಬಂಟರ ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ ಸುಜಾತ ಗುಣಪಾಲ ಶೆಟ್ಟಿ ಐಕಳ, ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರುಗಳಾದ ಪದ್ಮಾವತಿ ಬಿ. ಶೆಟ್ಟಿ, ವಿನೋದಾ ಡಿ ಶೆಟ್ಟಿ, ಚಂದ್ರಿಕಾ ಶೆಟ್ಟಿ ಮತ್ತು ಎಲ್ಲಾ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳನ್ನು, ಯಕ್ಷಗಾನದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿಧರನ್ನು, ನೃತ್ಯ ಪ್ರದರ್ಶನ ನೀಡಿದ ಎಲ್ಲರನ್ನು ಹಾಗೂ ಮಾಧ್ಯಮದ ಮಿತ್ರರನ್ನು ಗೌರವಿಸಲಾಯಿತು.

ಸಂಪೂರ್ಣ ಕಾರ್ಯಕ್ರಮಗಳನ್ನು ನಿರ್ವಹಿಸಿದ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ ಯವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ ಮಹಿಳಾ ವಿಭಾಗಕ್ಕೆ ಶುಭ ಕೋರಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ರೇಖಾ ವೈ ಶೆಟ್ಟಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

ಯಕ್ಷಗುರು ಕಟೀಲು ಶ್ರೀ ಸದಾನಂದ ಶೆಟ್ಟಿಯವರ ದಕ್ಷ ನಿರ್ದೇಶನದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರದರ್ಶಿಸಲ್ಪಟ್ಟ“ಮಹಿಷಾಸುರ ಮರ್ಧಿನಿ”ಯಕ್ಷಗಾನದ ಕಲಾವಿದರ ಪರಿಚಯ:

ಹಿಮ್ಮೇಳ: ಭಾಗವತರು : ಜಯಪ್ರಕಾಶ ನಿಡ್ವಣ್ಣಾಯರು ಚೆಂಡೆ : ಇನ್ನ ಆನಂದ ಶೆಟ್ಟಿ ವದ್ದಳೆ : ಹರೀಶ್ ಸಾಲ್ಯಾನ್ ಚಕ್ರತಾಳ : ಕುಶರಾಜ ಪೂಜಾರಿ

ಮುಮ್ಮೇಳ: ಆದಿಮಾಯೆ – ಸುನಂದ ಭುಜಂಗ , ಬ್ರಹ್ಮ – ಸುನೀತಾ ನಿತ್ಯಾನಂದ ಹೆಗ್ಡೆ, ವಿಷ್ಣು – ಜಯಲಕ್ಷ್ಮಿ ಪ್ರಸಾದ ಶೆಟ್ಟಿ, ಮಹೇಶ್ವರ- ಭಾರತಿ ಶೆಟ್ಟಿ, ಮಾಲಿನಿ – ಶುಭಾಂಗಿ ಶೇಕರ ಶೆಟ್ಟಿ, ಸುಪಾರ್ಶ್ವಕ ಮುನಿ- ಚೈತ್ರಾ ಶೆಟ್ಟಿ ಮಾಲಿನಿ ದೂತ – ಶರ್ಮಿಳಾ ಶೇಕರ ಶೆಟ್ಟಿ, ಮಹಿಷಾಸುರ – ರೇಶ್ಮಾ ಶಶಿಕಾಂತ ರೈ, ಶಂಖಾಸುರ – ಮನೀಶಾ ಸದಾಶಿವ ಶೆಟ್ಟಿ, ದುರ್ಗಾಸುರ – ಕೀರ್ತಿಶ್ರೀ ಕರುಣಾಕರ ಶೆಟ್ಚಿ, ದೇವೇಂದ್ರ – ಸರಿತಾ ಮಹೇಶ ಶೆಟ್ಚಿ , ಅಗ್ನಿ – ರಶೀತಾ ಶೆಟ್ಚಿ, ವರುಣ- ರಿಯಾ ಶೆಟ್ಟಿ, ಶ್ರೀ ದೇವಿ – ಶೈಲಜಾ ಅಮರನಾಥ ಶೆಟ್ಟಿ, ಸಿಂಹ – ಶರ್ಮಿಳಾ ಶೆಟ್ಚಿ, ವರ್ಣಾಲಂಕಾರ: ಪ್ರಭಾಕರ ಕುಂದರ್ ಹಾಗೂ ಗೋವಿಂದ ಸಫಲಿಗ.

ವಸ್ತ್ರಾಲಂಕಾರ : ನಂದಿನಿ ಆರ್ಟ್ಸ್, ಮನೋಜ್ ಕುಮಾರ್ ಹೆಜಮಾಡಿ.

-ವರದಿ : ಈಶ್ವರ ಎಂ. ಐಲ್

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು