ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಐದು ತಿಂಗಳು ಜೈಲು ಶಿಕ್ಷೆ

ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಐದು ತಿಂಗಳು ಜೈಲು ಶಿಕ್ಷೆ

HSA   ¦    Aug 13, 2020 07:35:42 PM (IST)
ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಐದು ತಿಂಗಳು ಜೈಲು ಶಿಕ್ಷೆ

ಕೌಲಾಲಂಪುರ: ಕ್ವಾರಂಟೈನ್ ಉಲ್ಲಂಘನೆ ಮಾಡಿದ ಭಾರತೀಯನೊಬ್ಬನಿಗೆ ಮಲೇಶಿಯಾದ ನ್ಯಾಯಾಲಯವು ಐದು ತಿಂಗಳು ಜೈಲು ಹಾಗೂ ಮೂರು ಲಕ್ಷ ರೂಪಾಯಿ ದಂಡ ಹೇರಿದೆ.

ಜುಲೈನಲ್ಲಿ ಭಾರತದಿಂದ ಮರಳಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದ ವೇಳೆ ನೆಗೆಟಿವ್ ಬಂದಿತ್ತು. ಇದರ ಬಳಿಕ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗಿತ್ತು.

ರೆಸ್ಟೋರೆಂಟ್ ನಡೆಸುತ್ತಿದ್ದ ಈ ವ್ಯಕ್ತಿ ಪದೇ ಪದೇ ಅಲ್ಲಿಗೆ ಹೋಗಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದು ಕಂಡುಬಂದಿದೆ ಮತ್ತು ಪರೀಕ್ಷೆ ವೇಳೆ ಕೂಡ ಪಾಸಿಟಿವ್ ಬಂದಿದೆ. ರೆಸ್ಟೋರೆಂಟ್ ಸಹಿತ ಅವರ ಮನೆಯಲ್ಲಿದ್ದ ಸುಮಾರು 12 ಮಂದಿಗೂ ಕೊರೋನಾ ಪಾಸಿಟಿವ್ ಆಗಿದೆ.

ಭಾರತೀಯ ಪ್ರಜೆ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನಿಗೆ ಐದು ತಿಂಗಳು ಜೈಲು ಹಾಗೂ ಮೂರು ಲಕ್ಷ ದಂಡ ಹೇರಿದೆ.