ಅನಿವಾಸಿ ಕನ್ನಡ ವೈದ್ಯರಿಂದ ದುಬೈನಲ್ಲಿ ವೈದ್ಯರ ದಿನಾಚರಣೆ

ಅನಿವಾಸಿ ಕನ್ನಡ ವೈದ್ಯರಿಂದ ದುಬೈನಲ್ಲಿ ವೈದ್ಯರ ದಿನಾಚರಣೆ

YK   ¦    Jul 02, 2019 03:01:07 PM (IST)
ಅನಿವಾಸಿ ಕನ್ನಡ ವೈದ್ಯರಿಂದ ದುಬೈನಲ್ಲಿ ವೈದ್ಯರ ದಿನಾಚರಣೆ

ದುಬೈ: ವೈದ್ಯರ ದಿನಾಚರಣೆಯನ್ನು ಅನಿವಾಸಿ ಕನ್ನಡ ವೈದ್ಯರುಗಳು ಸೇರಿ ದುಬೈನಲ್ಲಿ ಆಚರಿಸಿದರು. ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ. ಗುರುಮಾಧವ ರಾವ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈ ವೇಳೆ ಕೊಡಗಿಗೆ ‘ಮಲ್ಟಿ ಸೆಷ್ಯಾಲಿಟಿ ಆಸ್ಪತ್ರೆ ಅಭಿಯಾನ’ಕ್ಕೆ ರಾಜ್ಯ ಸರ್ಕಾರಕ್ಕೆ ತಲುಪುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ತಿಳಿಸಬೇಕು.

ಡಾ.ಹ್ಯಾರಿಸ್ ಮಾತನಾಡಿ, ದುಬೈ ಕನ್ನಡ ವೈದ್ಯರ ಸಂಘದಿಂದ ಕೊಡಗಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಸಲಹೆ ನೀಡಿದರು.

ನಂತರ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 100 ಕ್ಕಿಂತಲೂ ಹೆಚ್ಚು ಕರುನಾಡ ವೈದ್ಯರು ಹಿರಿಯ ವೈದ್ಯರಾದ ಡಾ ಶಾಂತಿ , ಡಾ.ಮಮತಾ ರಡಾರ್, ಡಾ.ವಸಂತ್, ಡಾ. ಅನಿಲ್ ಕುಮಾರ್ ಡಾ. ರಾಘವೇಂದ್ರ ಭಟ್ ಡಾ. ಗಾಡ್ಫ್ರೆಡ್ ಮುಂತಾದವರು ಒಟ್ಟಿಗೆ ಸೇರಿ ಸಂಭ್ರಮಾಚರಿಸಿದರು.

ಡಾ. ಸಂತೋಷ್,ಡಾ. ಮಂಜುನಾಥ್, ವಿಷ್ಣುಮೂರ್ತಿ ಮೈಸೂರು, ಡಾ.ಸವಿತಾ ಮೈಸೂರು ಮತ್ತು ಡಾ. ಲೇಖಾ ಕೊಡಗು, ಡಾ.ಸವಿತಾ ಮೋಹನ್, ಸುದೀಪ್ ದಾವಣಗೆರೆ, ಸೆಂತಿಲ್ ಬೆಂಗಳೂರು, ಮಮತಾ ಶಾರ್ಜಾ, ಪಲ್ಲವಿ ಬಸವರಾಜ್, ಶಶಿಧರ್ ಭಾಗವಹಿಸಿದ್ದರು.

 

More Images