ಯುಎಇ ಕನ್ನಡಿಗಾಸ್ ಫೋರಂನ ಎರಡನೇ ವಾರ್ಷಿಕೋತ್ಸವ

ಯುಎಇ ಕನ್ನಡಿಗಾಸ್ ಫೋರಂನ ಎರಡನೇ ವಾರ್ಷಿಕೋತ್ಸವ

HSA   ¦    Apr 22, 2019 01:14:46 PM (IST)
ಯುಎಇ ಕನ್ನಡಿಗಾಸ್ ಫೋರಂನ ಎರಡನೇ ವಾರ್ಷಿಕೋತ್ಸವ

ದುಬೈ: ಕನ್ನಡಿಗರಿಂದ ಸ್ಥಾಪನೆಗೊಂಡಿರುವಂತಹ ಯುಎಇ ಕನ್ನಡಿಗಾಸ್ ಬಿಸಿನೆಸ್ ಫೋರಂ ಇದರ ಎರಡನೇ ವಾರ್ಷಿಕೋತ್ಸವವು ದೇರಾ ದುಬೈಯಲ್ಲಿರುವ ಪರ್ಲ್ ಸಿಟಿ ಸುಯಿಟ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಫೋರಂ ಸದಸ್ಯರಾದ ಮಧು ಗೌಡರ್, ರಫೀಕಲಿ ಕೊಡಗು ಅವರು ಮಾತನಾಡಿ, ಯುಎಇ ಯಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಕನ್ನಡಿಗ ವ್ಯಾಪಾರಸ್ಥ ಕಂಪೆನಿಗಳ ಬಗ್ಗೆ ಮಾಹಿತಿ, ಕೆಲಸ ಹುಡುಕಿ ಬಂದ ಕನ್ನಡಿಗರಿಗೆ ಕೆಲಸಗಳ ಬಗ್ಗೆ ಮಾಹಿತಿ ವೆಬ್ ಸೈಟ್ ನಲ್ಲಿ ಕನ್ನಡಿಗರಿಗಾಗಿ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಯುಎಇ ಕನ್ನಡಿಗರು ಕುಟುಂಬದ ಸದಸ್ಯ ವಿಷ್ಣುಮೂರ್ತಿ ವಂದಿಸಿದರು. ಸೆಂತಿಲ್ , ಸುದೀಪ್, ಶಶಿಧರ್, ಪಲ್ಲವಿ, ಮಮತಾ ಮತ್ತು ಅನಿತಾ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.