News Kannada
Tuesday, December 06 2022

ಯುಎಇ

ಭಾರತದಿಂದ ಅಬುಧಾಭಿಗೆ ಹೋದರೆ 12 ದಿನ ಹೋಂ ಕ್ವಾರಂಟೈನ್‌

Photo Credit :

ದುಬೈ ;  ಭಾರತದಿಂದ ಅಬುಧಾಬಿಗೆ ಪ್ರಯಾಣ ಬೆಳೆಸುವ ಯುನೈಟೆಡ್ ಅರಬ್ ಎಮಿರೇಟ್ಸ್ ನಿವಾಸಿಗಳು 12 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್​ ಆಗಬೇಕು ಎಂದು ಎತಿಹದ್ ಏರ್‌ವೇಸ್ ಹೇಳಿದೆ.
ಅಬುಧಾಬಿಗೆ ಬಂದ ನಂತರ, ಜನರು ಕ್ವಾರಂಟೈನ್ ಅವಧಿಯಲ್ಲಿ ವೈದ್ಯಕೀಯವಾಗಿ ಅನುಮೋದಿತ ರಿಸ್ಟ್ ಬ್ಯಾಂಡ್ ಧರಿಸಬೇಕು ಮತ್ತು ಇದು ಕಡ್ಡಾಯವಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಅಬುಧಾಬಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಎಲ್ಲಾ ರೀತಿಯ ಪ್ರಕ್ರಿಯೆ ಮುಗಿಸಿದ ನಂತರ ಈ ರಿಸ್ಟ್ ಬ್ಯಾಂಡ್ ಅನ್ನು ನೀಡಲಾಗುವುದು. ಅಬುದಾಬಿಗೆ ಬಂದ ನಂತರ ಆರನೇ ಮತ್ತು ಹನ್ನೊಂದನೇ ದಿನಗಳಲ್ಲಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.ಯುಎಇಯ ಅತಿದೊಡ್ಡ ವಿಮಾನಯಾನ ಸಂಸ್ಥೆ ಮತ್ತು ಫ್ಲ್ಯಾಗ್ ಕ್ಯಾರಿಯರ್ ಎಮಿರೇಟ್ಸ್, ಟ್ವಿಟರ್‌ನಲ್ಲಿ , “ದುಬೈ ನಿವಾಸ ವೀಸಾ ಹೊಂದಿರುವವರು ಜಿಡಿಆರ್‌ಎಫ್‌ಎ ಅನುಮೋದನೆಯನ್ನು ಪ್ರಸ್ತುತಪಡಿಸುವವರೆಗೆ ಪ್ರಯಾಣಿಸಬಹುದು, ನಿರ್ಗಮನದ 48 ಗಂಟೆಗಳಲ್ಲಿ ನೆಗಿಟಿವ್​ ಪಿಸಿಆರ್ ಪರೀಕ್ಷೆ ಮತ್ತು ಕ್ಷಿಪ್ರ ಪಿಸಿಆರ್ ಪರೀಕ್ಷೆಯನ್ನು ಪ್ರಯಾಣಕ್ಕೆ 04 ಗಂಟೆಗಳ ಮೊದಲು ಮಾಡಲಾಗುವುದು ಹಾಗೂ ಆ ಫಲಿತಾಂಶವನ್ನು ಪರಿಗಣಿಸಲಾಗುವುದು’’ ಎಂದು ಹೇಳಿದೆ.
ಇಂಡಿಗೊ ಏರ್‌ಲೈನ್ಸ್ ಕೂಡ ನವೀಕೃತ ಮಾರ್ಗಸೂಚಿಗಳನ್ನು ವಿವರಿಸುವ ನೋಟಿಸ್ಅನ್ನು ಟ್ರಾವೆಲ್ ಏಜೆಂಟರಿಗೆ ಕಳುಹಿಸಿದೆ.ಏಪ್ರಿಲ್ ಅಂತ್ಯದಲ್ಲಿ, ಕರೋನವೈರಸ್ ಸಾಂಕ್ರಾಮಿಕದ ಮಾರಣಾಂತಿಕ ಎರಡನೇ ಅಲೆ ಭಾರತ ದೇಶದಲ್ಲಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಯುಎಇ ಭಾರತದ ಪ್ರವಾಸಿಗರಿಗೆ ತನ್ನ ದೇಶಕ್ಕೆ ಪ್ರವೇಶಿಸುವುದನ್ನು ನಿಷೇದಿಸಿತ್ತು.

See also  ಒಲಿಂಪಿಕ್ಸ್‌ ನಲ್ಲಿ ಒಟ್ಟು 458 ಜನರಿಗೆ ಕೋವಿಡ್‌ ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು