ಕೊರೋನಾ ಗಾಳಿಯಲ್ಲಿ ಹರಡಲ್ಲ, ಭೀತಿ ಬೇಡ: ರಮಾಕಾಂತ ಕುಂಟೆ

ಕೊರೋನಾ ಗಾಳಿಯಲ್ಲಿ ಹರಡಲ್ಲ, ಭೀತಿ ಬೇಡ: ರಮಾಕಾಂತ ಕುಂಟೆ

DA   ¦    Mar 13, 2020 08:05:04 PM (IST)
ಕೊರೋನಾ ಗಾಳಿಯಲ್ಲಿ ಹರಡಲ್ಲ, ಭೀತಿ ಬೇಡ: ರಮಾಕಾಂತ ಕುಂಟೆ

ಬೆಳ್ತಂಗಡಿ: ಯಾವುದೇ ಕಾರಣಕ್ಕೂ ಕೊರೋನಾ ಗಾಳಿಯಿಂದ ಹರಡುವುದಿಲ್ಲ. ಆದ್ದರಿಂದ ಭಯ ಬೇಡ, ಜನಸಾಮಾನ್ಯರು ಮುಂಜಾಗೃತೆ ಕ್ರಮ ವಹಿಸಿ ಸ್ವಚ್ಛತೆ ಕಾಪಾಡಿ ಎಂದು ಮಂಗಳೂರು ವೃತ್ತ 1 ಸಹಾಯಕ ಔಷಧ ನಿಯಂತ್ರಕ ರಮಾಕಾಂತ ಕುಂಟೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಪ ಔಷಧ ನಿಯಂತ್ರಕರ ಕಚೇರಿ ಮತ್ತು ತಾಲೂಕು ಔಷಧ ವ್ಯಾಪಾರಸ್ಥರ ಸಂಘ ನೇತೃತ್ವದಲ್ಲಿ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮತ್ತು ಕ್ಷಯ ರೋಗ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಮ್ಮ, ನೆಗಡಿ, ಒಂದೆಡೆ ಶೇಖರಿತಗೊಂಡರೆ ಅಥವಾ ವ್ಯಕ್ತಿಯ ಸ್ಪರ್ಷದಿಂದ ಹರಡುವಂತಹದ್ದಾದ್ದರಿಂದ ಕೈಗಳನ್ನು ಸ್ವಚ್ಛವಾಗಿಡುವುದು ಮೊದಲ ಆದ್ಯತೆಯಾಗಿದೆ. ರೋಗಿಗಳು ಆರಂಭದಲ್ಲಿ ಹೆಚ್ಚಾಗಿ ಔಷಧ ಮಳಿಗೆಗಳಲ್ಲಿ ಬರುವುದರಿಂದ ಔಷಧ ವ್ಯಾಪಾಸ್ಥರು ರೋಗಿಗಳ ಲಕ್ಷಣ ಗಮನಿಸಿ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದ ಅವರು ದೇಶದಲ್ಲಿ ಕ್ಷಯ ರೋಗ ಮಾಸುವ ಸಂದರರ್ಭದಲ್ಲಿ ಕೊರೋನಾ ಆವರಿಸಿದೆ ಎಂದರು.

ಮಂಗಳೂರು ವೃತ್ತ 2ರ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯಕ್ ಮಾತನಾಡಿ, ಕ್ಷಯರೋಗಿಗಳು ಇದ್ದಲ್ಲಿ ಕಡ್ಡಾಯವಾಗಿ ಕ್ಷಯ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು ವಿಶ್ವದಾದ್ಯಂತ ಹರಡುತ್ತಿರುವ ಈ ಕೊರೊನ ಕಾಯಿಲೆ ಕುರಿತು ಜಾಗೃತಿ ಮೂಡಿಸಬೇಕೆ ಹೊರತು ಔಷಧ ಮಳಿಗೆಗಳು ಹೆಚ್ಚು ದರಕ್ಕೆ ಮಾಸ್ಕ್ ವ್ಯಾಪಾರ ಮಾಡುವುದು ಸಲ್ಲ. ಮಾನವೀಯತೆ ಮರೆತು ಪರಿಸ್ಥಿತಿಯ ಲಾಭ ಪಡೆಯಬೇಡಿ. ಹೆಚ್ಚಾಗಿ ದೇಹ ಸಂಪೂರ್ಣ ಮುಚ್ಚುವಂತೆ ಬಟ್ಟೆ ಧರಿಸಿ, ವ್ಯಕ್ತಿಗಳ ಮಧ್ಯೆ ಅಂತರವಿರಲಿ ಎಂದು ಹೇಳಿದರು.

ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ ಕರೊನಾ ವೈರಸ್ ಕುರಿತು ಮುಂಜಾಗ್ರತೆ ವಿಚಾರವಾಗಿ ಮಾತನಾಡಿ, ವೈರಾಣುಗಳು ನಮ್ಮ ಪರಿಸರದಲ್ಲೇ ಇರುವಂತಹದು. ನಮ್ಮ ದೇಹದಲ್ಲಿ ರೋಗನಿಯಂತ್ರಕ ಅಂಶ ಕುಂಠಿತಗೊಂಡಾಗ ಆಕ್ರಮಣ ಮಾಡುತ್ತವೆ. ರೋಗಿಗಳು ಮಾಸ್ಕ್ ಧರಿಸುವುದರಿಂದ ಮತ್ತೊಬ್ಬರಿಗೆ ಹರಡುವುದು ತಪ್ಪುತ್ತದೆ. ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಕಾಯಿಲೆ ವಿಚಾರವಾಗಿ ಭಯ ಪಡದೆ ಕೈ ಹಾಗೂ ದೇಹವನ್ನು ಸ್ವಚ್ಛತೆಯಿಂದ ಕಾಪಾಡಿ. ಬಿಸಿ ನೀರು ಬಳಸಿ, ತಂಪು ಪಾನೀಯ ಆದಷ್ಟು ಮಿತವಾಗಿ ಬಳಸಿ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನ.ಪಂ. ಮುಖ್ಯಾಧಿಕಾರಿ ಸುಧಾಕರ್, ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಗೌರವಾಧ್ಯಕ್ಷ ಕೇಶವ ಭಟ್, ಕಾರ್ಯದರ್ಶಿ ಸುಜಿತ್ ಭಿಡೆ, ಕೊಶಾಧಿಕಾರಿ ಗಣಪತಿ ಭಟ್ ಉಪಸ್ಥಿತಿರದ್ದರು.

ಬೆಳ್ತಂಗಡಿ ಔಷಧ ವ್ಯಾಪಾರಾಸ್ಥರ ಸಂಘ ಅಧ್ಯಕ್ಷ ಡಿ.ಜಗದೀಶ ಸ್ವಾಗತಿಸಿ, ನಿರೂಪಿಸಿದರು.