ಶಿಕ್ಷಕನಿಂದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಬಂಧನ

ಶಿಕ್ಷಕನಿಂದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಬಂಧನ

Nov 26, 2015 10:39:38 AM (IST)

ಮಂಗಳೂರು: ಪ್ರಾಥಮಿಕ ಶಾಲೆ ಶಿಕ್ಷಕನೋರ್ವ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿರುವ ಘಟನೆ ಬಬ್ಬುಕಟ್ಟೆಯ ನಿತ್ಯಾಧರ್ ನಗರದ ಖಾಸಗಿ ಶಾಲೆಯಲ್ಲಿ ಬುಧವಾರ ಬೆಳಕಿಗೆ ಬಂದಿದ್ದು, ಘಟನೆ ಸಂಬಂಧ ಶಿಕ್ಷಕನನ್ನು ಉಳ್ಳಾಲ ಪೊಲೀಸರು  ಬಂಧಿಸಿದ್ದಾರೆ.

ಪ್ರಾಥಮಿಕ ಶಾಲೆಯ 6 ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಮಾಜವಿಜ್ಞಾನ ಕಲಿಸುತ್ತಿದ್ದ ಶಿಕ್ಷಕ ಚೆಂಬುಗುಡ್ಡೆ ನಿವಾಸಿ ಡಾಲ್ಫಿ ಸಿಕ್ವೇರಾ(33) ಬಂಧಿತ.  ಕಳೆದ ಎರಡು ವರ್ಷಗಳಿಂದ  ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕ ಶಾಲೆಯ ಸಿಸಿಟಿವಿ ಇಲ್ಲದ ಪ್ರಾಜೆಕ್ಟ್ ರೂಮಿಗೆ ವಿದ್ಯಾರ್ಥಿಗಳನ್ನು ಕೊಂಡೊಯ್ದು ಲೈಂಗಿಕವಾಗಿ ಬಳಸುತ್ತಿದ್ದನು. ಬುಧವಾರದಂದು ವಿದ್ಯಾರ್ಥಿಯೋರ್ವನನ್ನು ಕರೆದೊಯ್ದು  ಆ ತಡೆಯೊಡ್ಡಿದ್ದರೂ ಶಿಕ್ಷಕ ಕೃತ್ಯ ಎಸಗಿದ್ದನು. ಈ ಬಗ್ಗೆ 12ರ ಹರೆಯದ ವಿದ್ಯಾರ್ಥಿ ಹೆತ್ತವರಲ್ಲಿ ದೂರಿಕೊಂಡಿದ್ದನು.  ಹೆತ್ತವರು ಮತ್ತೊಂದು ವಿದ್ಯಾರ್ಥಿಯ ಹೆತ್ತವರನ್ನು ಸಂಪರ್ಕಿಸಿದಾಗ ಶಿಕ್ಷಕನ ಕೃತ್ಯ ಬಹಿರಂಗಗೊಂಡಿದೆ.

ಅವರು ಉಳ್ಳಾಲ ಪೊಲೀಸರಿಗೆ ನೀಡಿದ ದೂರಿನ ಆಧಾರದಂತೆ ಶಿಕ್ಷಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಶಿಕ್ಷಕ ಡಾಲ್ಫಿ ವಿದ್ಯಾರ್ಥಿಯನ್ನು ಟ್ಯೂಷನ್ ನೆಪದಲ್ಲಿ ಮನೆಗೆ ಕೊಂಡೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ತಿಳಿದುಬಂದಿದೆ. ಸತತ ಎರಡು ವರ್ಷದಿಂದ ಕೃತ್ಯ ಎಸಗುತ್ತಿದ್ದು, ವಿದ್ಯಾರ್ಥಿ ಹೆದರಿ ಹೆತ್ತವರಿಗೆ ವಿಷಯ ತಿಳಿಸಿರಲಿಲ್ಲ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಶಿಕ್ಷಕನನ್ನ ಬಂಧಿಸಲಾಗಿದೆ.