ಕಂಟೇನ್ಮೆಂಟ್ ಝೋನ್ ಆದೇಶ ಉಲ್ಲಂಘನೆ: ಪ್ರಕರಣ ದಾಖಲು

ಕಂಟೇನ್ಮೆಂಟ್ ಝೋನ್ ಆದೇಶ ಉಲ್ಲಂಘನೆ: ಪ್ರಕರಣ ದಾಖಲು

MV   ¦    May 23, 2020 11:31:57 AM (IST)
ಕಂಟೇನ್ಮೆಂಟ್ ಝೋನ್ ಆದೇಶ ಉಲ್ಲಂಘನೆ: ಪ್ರಕರಣ ದಾಖಲು

ಬಂಟ್ವಾಳ : ಇಲ್ಲಿನ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಪೇಟೆಯ ಕಸ್ಬಾ ಗ್ರಾಮದ ಕಂಟೇನ್ಮೆಂಟ್ ಝೋನ್ ನಲ್ಲಿ ಮೇ 21ರಂದು ಆದೇಶ ಉಲ್ಲಂಘಿಸಿ ಸೇರಿದ್ದ 6 ಮಂದಿಯ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ.

ಮೇ 21ರ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಸ್ಬಾ ಗ್ರಾಮದ ಕಂಟೇನ್ಮೆಂಟ್ ಝೋನ್ ನ ಇನ್ಸಿಡೆಂಟ್ ಕಮಾಂಡರ್ ಆಗಿರುವ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಪರಿಶೀಲನೆಗೆ ತೆರಳಿದಾಗ ಸ್ಥಳೀಯರು ಕಂಟೇನ್ಮೆಂಟ್ ಝೋನ್ ನ ಒಳಗೆ ಸುಮಾರು 7 ಮಂದಿಯ ಗುಂಪು ಸೇರಿದ್ದು, ಕಂಡುಬಂದಿದ್ದು, ಅದರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯರು ಗುಂಪು ಸೇರಿ ಕಂಟೇನ್ಮೆಂಟ್ ಝೋನ್ ನ ಸಡಿಲಿಕೆಗೆ ಆಗ್ರಹಿಸಿ ಗುಂಪು ಸೇರಿದ್ದರು.