ಹೊಸತನದೊಂದಿಗೆ ಆಳ್ವಾಸ್ ನುಡಿಸಿರಿಗೆ ಚಾಲನೆ

ಹೊಸತನದೊಂದಿಗೆ ಆಳ್ವಾಸ್ ನುಡಿಸಿರಿಗೆ ಚಾಲನೆ

Nov 27, 2015 11:07:17 AM (IST)

ಮೂಡುಬಿದಿರೆ: ಸಾವಿರಾರು ಕನ್ನಡ ಮನಸ್ಸುಗಳ ಹರ್ಷೋದ್ಘಾರ ನಡುವೆ ಭತ್ತದ ತೆನೆಗೆ ಹಾಲು ಎರೆಯುವ ಮೂಲಕ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ 12ನೇ ವರ್ಷದ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್  ನುಡಿಸಿರಿ 2015ಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಇಂತಹದೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದದ್ದು ಪುತ್ತಿಗೆಪದವಿನ ವಿವೇಕಾನಂದ ನಗರ.  ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ 12ನೇ ವರ್ಷದ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯನ್ನು ಹಿರಿಯ ಸಾಹಿತಿ ಡಾ. ವೀಣಾ ಉದ್ಘಾಟಿಸಿದರು. ನುಡಿಸಿರಿಯ ವಿಶೇಷ ಸಂಚಿಕೆ ವಾಂಙ್ಮಯ, ಅಂಧ ವಿದ್ಯಾರ್ಥಿ ನಿರಂಜನ ಕಡ್ಲಾರು ಅವರ ಕತ್ತಲ ಬೆಳಕು ಪುಸ್ತಕ ಸಂಚಿಕೆ, ಆಳ್ವಾಸ್ ಟುಡೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸಮ್ಮೇಳನದ ಅಧ್ಯಕ್ಷ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಏರ್ಯ ಲಕ್ಷ್ಮಿನಾರಾಯಣ ಆಳ್ವ, ವಿದ್ವಾಂಸ. ಬಿ.ಎ. ವಿವೇಕ ರೈ, ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಮಿಜಾರುಗುತ್ತು ಆನಂದ ಆಳ್ವ, ಎಸ್ ಡಿಎಂ ಶಿಕ್ಷಣ ಸಂಸ್ಥೆ ಮಾಜಿ ಕಾರ್ಯದರ್ಶಿ ಪ್ರಭಾಕರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮೂಡುಬಿದರೆ ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್ ಅತಿಥಿಗಳಾಗಿದ್ದರು.