ದೇಶ ಭಕ್ತಿಯ ಭಾವನೆ ಉದ್ದೀಪನವಾದರೆ ಲೋಕ ಕಲ್ಯಾಣ: ಶಾಸಕ ಅಂಗಾರ

ದೇಶ ಭಕ್ತಿಯ ಭಾವನೆ ಉದ್ದೀಪನವಾದರೆ ಲೋಕ ಕಲ್ಯಾಣ: ಶಾಸಕ ಅಂಗಾರ

GK   ¦    Oct 08, 2019 04:04:19 PM (IST)
ದೇಶ ಭಕ್ತಿಯ ಭಾವನೆ ಉದ್ದೀಪನವಾದರೆ ಲೋಕ ಕಲ್ಯಾಣ: ಶಾಸಕ ಅಂಗಾರ

ಸುಳ್ಯ: ದೇಶವು ಅಭಿವೃದ್ಧಿಯಾಗಿ ಲೋಕ ಕಲ್ಯಾಣ ಸಾಧ್ಯವಾಗಲು ನಮ್ಮೆಲ್ಲರಲ್ಲಿ ದೇಶ ಭಕ್ತಿ ಎಂಬ ಭಾವನೆ ಉದ್ದೀಪನಗೊಳ್ಳಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.

ಸುಳ್ಯದ ಪೈಚಾರು ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಏಳನೇ ನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಇದರ ಸಹಯೋಗದಲ್ಲಿ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಭಾವನೆಗಳು ಒಟ್ಟಾಗುವುದರ ಜೊತೆ ಕೊಡುವ ಗುಣ, ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದರೆ ಮಾತ್ರ ಪರಿವರ್ತನೆ ಸಾಧ್ಯ.  ಭಜನೆ ನಮ್ಮ ಜೀವನದ ಭಾಗವಾಗಬೇಕು. ಭಕ್ತಿ ಭಾವದ ಭಜನೆಯಿಂದ ಮುಕ್ತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ರಾಮಕೃಷ್ಣ ಕಾಟುಕುಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆಯವರಿಗೆ ಗುರುವಂದನೆ ಸಲ್ಲಿಸಲಾಯಿತು.