ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜಮ್ಮುಕಾಶ್ಮೀರ ಪೊಲೀಸ್ ಹುತಾತ್ಮ

ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜಮ್ಮುಕಾಶ್ಮೀರ ಪೊಲೀಸ್ ಹುತಾತ್ಮ

HSA   ¦    May 21, 2020 04:49:35 PM (IST)
ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜಮ್ಮುಕಾಶ್ಮೀರ ಪೊಲೀಸ್ ಹುತಾತ್ಮ

ನವದೆಹಲಿ: ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಜಮ್ಮುಕಾಶ್ಮೀರದ ಪೊಲೀಸರೊಬ್ಬರು ಹುತಾತ್ಮರಾದರೆ, ಇತರ ಇಬ್ಬರು ಗಾಯಗೊಂಡಿದ್ದಾರೆ.

ಉಗ್ರರು ಜಮ್ಮುಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಮೇಲೆ ದಾಳಿ ಮಾಡಿದ್ದಾರೆ.

ಪುಲ್ವಾಮಾದ ಪ್ರಿಚೂ ಪ್ರದೇಶದಲ್ಲಿ ಪೊಲೀಸರು ನಾಕಾಬಂಧಿಯಲ್ಲಿ ಇದ್ದ ವೇಳೆ ಉಗ್ರರು ಏಕಾಏಕಿ ಗುಂಡಿ ಸುರಿಮಳೆಗೆರೆದಿದ್ದಾರೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಗಾಯಗೊಂಡಿರುವ ಇತರ ಇಬ್ಬರಿಗೆ ಶ್ರೀನಗರದಲ್ಲಿ ಇರುವ ಎಸ್ ಎಂಎಚ್ ಎಸ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ. ಈ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿರುವರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.