ದಿಲ್ಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆ : ಕರ್ನಾಟಕದಲ್ಲಿ ಹರ್ಷ

ದಿಲ್ಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆ : ಕರ್ನಾಟಕದಲ್ಲಿ ಹರ್ಷ

MS   ¦    Jan 09, 2021 08:11:16 PM (IST)
ದಿಲ್ಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆ : ಕರ್ನಾಟಕದಲ್ಲಿ ಹರ್ಷ

ಮಂಗಳೂರು: ರಾಷ್ಟ್ರ ರಾಜಧಾನಿಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾದ ದಿಲ್ಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿರುವುದನ್ನು ಕರ್ನಾಟಕ ಕೊಂಕಣಿ ಸಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಕೆ . ಜಗದೀಶ್ ಪೈ ಸ್ವಾಗತಿಸಿದ್ದಾರೆ.

ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿದ್ದು ಸಂವಿಧಾನದ 8 ನೇ ಪರಿಚ್ಛೇದ ದಲ್ಲೂ ಸ್ಥಾನ ಪಡೆದಿರುವ ಕೊಂಕಣಿ ಭಾಷೆಯನ್ನು ಅಭ್ಯುದಯದ ದಿಸೆಯಲ್ಲಿ ರಾಜಧಾನಿ ದಿಲ್ಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಯಾಗುತ್ತಿರುವುದು ಕರ್ನಾಟಕದ ಸಮಸ್ತ ಕೊಂಕಣಿ ಮತೃಭಾಷಿಕರಿಗೆ ಸಂತಸ ತಂದಿದೆ ಎಂದು ಡಾ. ಜಗದೀಶ್ ವ್ಯಕ್ತಪಡಿಸಿದ್ದಾರೆ.

ಕೊಂಕಣಿ ಭಾಷೆಯ ಬೆಳವಣಿಗೆಗಾಗಿ ಹೊಸ ಆಯಾಮ ನೀಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ದಿಲ್ಲಿ ಕೊಂಕಣಿ ಅಕಾಡೆಮಿಯ ಸಹಯೋಗದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಉತ್ಸುಕವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.