ಪವರ್ ಲಿಪ್ಟಿಂಗ್ ಸ್ಪರ್ಧೆ: ಬೆಳ್ತಂಗಡಿಯ ಹೇಮಚಂದ್ರಗೆ ಚಿನ್ನದ ಪದಕ

ಪವರ್ ಲಿಪ್ಟಿಂಗ್ ಸ್ಪರ್ಧೆ: ಬೆಳ್ತಂಗಡಿಯ ಹೇಮಚಂದ್ರಗೆ ಚಿನ್ನದ ಪದಕ

DA   ¦    Dec 02, 2019 09:54:03 AM (IST)
ಪವರ್ ಲಿಪ್ಟಿಂಗ್ ಸ್ಪರ್ಧೆ: ಬೆಳ್ತಂಗಡಿಯ ಹೇಮಚಂದ್ರಗೆ ಚಿನ್ನದ ಪದಕ

ಬೆಳ್ತಂಗಡಿ: ನವದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಪ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯ 74 ಕೆ.ಜಿ. ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಹೇಮಚಂದ್ರ ಬಬ್ಬುಕಟ್ಟೆ ಅವರು ಚಿನ್ನದ ಪದಕ ಹಾಗೂ ಕಂಚಿನ ಪದಕವನ್ನು ಗಳಿಸಿದ್ದಾರೆ.

ಇವರು ಸತತ ನಾಲ್ಕನೇ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದು,

ಮಂಗಳೂರಿನ ತೊಕ್ಕೊಟ್ಟು ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಖೆಯ ಸದಸ್ಯರಾಗಿದ್ದಾರೆ.