ಮಹಿಳೆಯ ಬರ್ಬರ ಹತ್ಯೆ: ದಂಪತಿ ಸೆರೆ

ಮಹಿಳೆಯ ಬರ್ಬರ ಹತ್ಯೆ: ದಂಪತಿ ಸೆರೆ

HSA   ¦    May 15, 2019 02:01:19 PM (IST)
ಮಹಿಳೆಯ ಬರ್ಬರ ಹತ್ಯೆ: ದಂಪತಿ ಸೆರೆ

ಮಂಗಳೂರು: ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಅಂಗಾಂಗಗಳನ್ನು ಬೇರ್ಪಡಿಸಿ ವಿವಿಧೆಡೆ ಬಿಸಾಕಿದ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ.

ಬುಧವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು, ನಗರದ ಅಮರ್ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ(35) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳಾದ ಜೋನಸ್ ಜೂಲಿನ್ ಸ್ಯಾಮ್ಸನ್ ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧನದ ವೇಳೆ ಸ್ಯಾಮ್ಸನ್ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಮತಿ ಶೆಟ್ಟಿ ಅವರಿಂದ ಸ್ಯಾಮ್ಸನ್ ಸಾಲ ಪಡೆದಿದ್ದು, ಅದನ್ನು ಹಿಂದೆ ಕೇಳಿದಾಗ ಜಗಳವಾಗಿದೆ. ಇದರ ಬಳಿಕ ಸ್ಯಾಮ್ಸನ್ ಶೆಟ್ಟಿ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಮತ್ತು ರುಂಡ ಮುಂಡ ಬೇರ್ಪಡಿಸಿ ನಗರದ ವಿವಿಧೆಡೆ ಬಿಸಾಕಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.