`ಪ್ರತಿಯೊಬ್ಬ ನಾಗರಿಕರಿಗೂ ನ್ಯಾಯಯುತ ಸ್ಥಾನಮಾನ ಸಿಗಬೇಕು’

`ಪ್ರತಿಯೊಬ್ಬ ನಾಗರಿಕರಿಗೂ ನ್ಯಾಯಯುತ ಸ್ಥಾನಮಾನ ಸಿಗಬೇಕು’

DA   ¦    Nov 21, 2020 06:03:47 PM (IST)
`ಪ್ರತಿಯೊಬ್ಬ ನಾಗರಿಕರಿಗೂ ನ್ಯಾಯಯುತ ಸ್ಥಾನಮಾನ ಸಿಗಬೇಕು’

ಬೆಳ್ತಂಗಡಿ: ಸರ್ವ ಭಾಷೆ ಪ್ರಧಾನ್ಯತೆ ಜತೆಗೆ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ. ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಈ ದೇಶದ ನಾಗರಿಕರಿಗೆ ನ್ಯಾಯಯುತ ಸ್ಥಾನಮಾನ ಒದಗಿಸುವೆಡೆಗೆ ಸರ್ವರೂ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ತಾ.ಕಾ.ಸೇ.ಸಂಘ ಅಧ್ಯಕ್ಷ ನಾಗೇಶ್ ಮೂರ್ತಿ ಬಿ.ಕೆ. ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಮತ್ತು ತಾ.ಪಂ. ಆಶ್ರಯದಲ್ಲಿ ನ.21ರಂದು ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡ ಭಾಷಾ ಸೌಹಾರ್ದತ ದಿನ ಮತ್ತು ದುರ್ಬಲ ವರ್ಗಗಳ ದಿನ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ 1635 ಭಾಷೆಗಳಿವೆ. ಅವುಗಳಲ್ಲಿ 22 ಭಾಷೆಗಳು ಅಧಿಕೃತವಾಗಿ ಬಳಕೆಯಲ್ಲಿದೆ. ಎಲ್ಲಾ ಭಾಷೆಯನ್ನು ಗೌರವಯುತವಾಗಿ ಕಾಣಬೇಕಾಗಿರುವುದು ನಮ್ಮ ಧರ್ಮ. ಇದರೊಂದಿಗೆ ದುರ್ಬಲ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಸರಕಾರ ಹತ್ತು‌ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳು ದುರ್ಬಲ ವರ್ಗವನ್ನು ನೇರವಾಗಿ ತಲುಪಿದಾಗ ದುರ್ಬಲ ವರ್ಗದ ಅಭಿವೃದ್ಧಿ ಮಾಡುವ ಕಾರ್ಯವಾಗಬೇಕು ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ., ಉಪ ತಹಶಿಲ್ದಾರ್ ಶಂಕರ್, ಮುಂಡಾಜೆ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ಮುರಳಿಧರ್ ಅವರು ಸರಕಾರಿ ಯೋಜನೆಗಳ ಮಾಹಿತಿ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾ.ಕಾ.ಸೇ.ಸಂಘದ ಕಾರ್ಯದರ್ಶಿ ಸತೀಶ್ ಕೆ.ಜಿ., ತಹಶೀಲ್ದಾರ್ ಮಹೇಶ್ ಜೆ., ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಎಲೋಶಿಯಸ್ ಲೋಬೋ, ಸಹಾಯಕ ಸರಕಾರಿ ಅಭಿಯೋಜಕರಾದ ಕಿರಣ್ ಕುಮಾರ್, ದಿವ್ಯರಾಜ್, ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ಸ್ವಾಗತಿಸಿದರು.

ಉಪ ತಹಶೀಲ್ದಾರ್ ಸರಕಾರಿ ಯೋಜನೆಗಳ ಮಾಹಿತಿ ನೀಡಿದರು.

ಬೆಳ್ತಂಗಡಿ ನ್ಯಾಯಾಲಯ ಆದೇಶ ಜಾರಿಕಾರ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.