ಶಿರ್ಲಾಲು ಮಹಿಳೆಗೆ ಕೊರೋನಾ ಪಾಸಿಟಿವ್

ಶಿರ್ಲಾಲು ಮಹಿಳೆಗೆ ಕೊರೋನಾ ಪಾಸಿಟಿವ್

DA   ¦    May 23, 2020 08:08:54 PM (IST)
ಶಿರ್ಲಾಲು ಮಹಿಳೆಗೆ ಕೊರೋನಾ ಪಾಸಿಟಿವ್

ಬೆಳ್ತಂಗಡಿ: ತಾಲೂಕಿನ ಆರಂಬೋಡಿಯಲ್ಲಿ ಮಹಿಳೆಯೊಬ್ಬಳಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಇದೀಗ ತಾಲೂಕಿನ‌ ಶಿರ್ಲಾಲು ಎಂಬ ಗ್ರಾಮದಲ್ಲಿ‌ ಮಹಿಳೆಯೊಬ್ಬಳಿಗೆ ಪಾಸಿಟಿವ್ ಕಾಣಿಸಿಕೊಂಡ ಇನ್ನೊಂದು ಪ್ರಕರಣ ಸಂಭವಿಸಿದೆ.

ಗ್ರಾಮದ ಮಜಲುಪಲ್ಕೆ ಎಂಬಲ್ಲಿನ ಮಹಿಳೆ(42)ಗೆ ಪಾಸಿಟಿವ್ ದೃಢವಾಗಿದೆ. ಹೀಗಾಗಿ ಅಲ್ಲಿನ 18 ಮನೆಗಳ‌ ವ್ಯಾಪ್ತಿಯನ್ನು ಸೀಲ್ ಡೌನ್ ಮಾಡಲಾಗಿದ್ದು ಕಂಟೈನ್ ಮೆಂಟ್ ವಲಯ ಎಂದು ಪ್ರಕಟಿಸಲಾಗಿದೆ.

ಸೋಂಕಿತ ಮಹಿಳೆಯನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಿಳೆಗೆ ಅಸ್ತಮಾ ಕಾಯಿಲೆ ಇತ್ತೆಂದು ಹೇಳಲಾಗಿದೆ. ಆಕೆಯ ಟ್ರಾವೆಲ್ ಹಿಸ್ಟರಿಯನ್ನು ಪಡೆದುಕೊಳ್ಳಲಾಗುತ್ತಿದೆ. ಈಕೆಯ ತವರು ಮನೆ ಉಜಿರೆ ಸನಿಹದ ಗುರಿಪಳ್ಳ ಎಂಬಲ್ಲಿದ್ದು ಅಲ್ಲಿಗೆ ಹೋಗಿದ್ದ ಸಂದರ್ಭ, ಮುಂಬಯಿಯವರು ಬಂದಿದ್ದು ಅವರಿಂದ ಈಕೆಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಶಾಸಕ ಹರೀಶ ಪೂಂಜ, ತಹಸೀಲ್ದಾರ್ ಗಣಪತಿ ಶಾಸ್ತ್ರೀ, ತಾಲೂಕು‌ ವೈದ್ಯಾಧಿಕಾರಿಗಳು ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸೋಂಕಿತೆ ಭೇಟಿ ನೀಡುತ್ತಿದ್ದ ಸ್ಥಳಗಳಾದ ಹಾಲಿನ ಡೈರಿ, ಸೊಸೈಟಿ, ಬ್ಯಾಂಕ್ , ಅಂಗಡಿಗಳನ್ನು‌ ವಾರ ಕಾಲ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಶಿರ್ಲಾಲು ಸಹಿತ ಕರಂಬಾರು, ಕಾಜಿಮುಗೇರು ಪರಿಸರದವರು ಭಯಭೀತರಾಗಿದ್ದಾರೆ.