ವಿವೇಕ್ ಟ್ರೇಡರ್ಸ್ ನಿಂದ ಆರೋಗ್ಯ,ಸ್ವಾದ ಮಿಶ್ರಿತ ಆಯುಷ್ ಚಿಕ್ಕಿ ಮಾರುಕಟ್ಟೆಗೆ ಬಿಡುಗಡೆ

ವಿವೇಕ್ ಟ್ರೇಡರ್ಸ್ ನಿಂದ ಆರೋಗ್ಯ,ಸ್ವಾದ ಮಿಶ್ರಿತ ಆಯುಷ್ ಚಿಕ್ಕಿ ಮಾರುಕಟ್ಟೆಗೆ ಬಿಡುಗಡೆ

Aug 10, 2020 12:59:11 PM (IST)
ವಿವೇಕ್ ಟ್ರೇಡರ್ಸ್ ನಿಂದ ಆರೋಗ್ಯ,ಸ್ವಾದ ಮಿಶ್ರಿತ ಆಯುಷ್ ಚಿಕ್ಕಿ ಮಾರುಕಟ್ಟೆಗೆ ಬಿಡುಗಡೆ

 

ಕೇಂದ್ರ ಸರಕಾರದ ಆಯುಷ್ ಇಲಾಖೆ ಪ್ರಮಾಣೀಕೃತ ಆಯುಷ್ ಕ್ವಾಥ್ ಒಳಗೊಂಡ ತುಳಸಿ ಶುಂಠಿ ಮರೀಚ ತ್ವಕ್ ಮಿಶ್ರಿತ ಶೇಂಗಾ ನೆಲಕಡಲೆ ಆಯುಷ್ ಚಿಕ್ಕಿ ಯನ್ನು ಮಂಗಳೂರಿನ ಪ್ರಖ್ಯಾತ ಆಯುರ್ವೇದಿಕ ಉತ್ಪನ್ನಗಳ ಮಾರಾಟ ಸಂಸ್ಥೆ ವಿವೇಕ್ ಟ್ರೇಡರ್ಸ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೇ ಬೀಜ ( ಶೇಂಗಾ) ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳನ್ನು ಒಳಗೊಂಡಿದೆ. ಇದರಲ್ಲಿ ಪಾಶ್ವವಾಯು ಸಂಬಂಧಿತ ರೋಗಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವೂ ಇದ್ದು ಇದರ ಸೇವನೆ ಅತ್ಯಗತ್ಯವಾಗಿದೆ.

ಈಗಾಗಲೇ ಕೇಂದ್ರ ಸರಕಾರದ ಆಯುಷ್ ಇಲಾಖೆ ಅಂಗೀಕೃತ ಆಯುಷ್ ಕ್ವಾಥಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅದರಲ್ಲಿ ಬಳಸಲಾಗುವ ತುಳಸಿ, ದಾಲ್ಚಿನಿ, ಶುಂಠಿ, ಕರಿಮೆಣಸು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊರೋನಾದಿಂದ ದೇಹವನ್ನು ಸಂರಕ್ಷಿಸುತ್ತಿರುವ ಅನುಭವವನ್ನು ನಾಗರಿಕರು ಒಪ್ಪಿಕೊಂಡಿದ್ದಾರೆ. ಈಗ ಆಯುರ್ ಚಿಕ್ಕಿಗಳ ತಯಾರಿಕೆಯಲ್ಲಿ ವಿಶೇಷವಾಗಿ ಆಯುಷ್ ಕ್ವಾಥ್ ಬಳಕೆಯಾಗುತ್ತಿದೆ. ಆದ್ದರಿಂದ ಇದು ಸಾಮಾನ್ಯ ಚಿಕ್ಕಿಯಾಗಿರದೇ ಆರೋಗ್ಯ ವೃದ್ಧಿಸುವ ರುಚಿಯಾದ ತಿಂಡಿಯೂ ಆಗಲಿದೆ. ಮಕ್ಕಳಿಗೆ, ಹಿರಿಯರಿಗೆ ಆಯುಷ್ ಚಿಕ್ಕಿ ನೀಡುವುದರಿಂದ ನಿಸ್ಸಂದೇಹವಾಗಿ ಇದು ಅವರ ದೇಹಕ್ಕೆ ಉಪಯೋಗವಾಗುತ್ತದೆ.

ಇನ್ನು ಚಿಕ್ಕಿಯಲ್ಲಿ ಬಳಕೆಯಾಗುವ ಬೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಉಸಿರಾಟದ ಕೊಳವೆಯನ್ನು, ಶ್ವಾಸಕೋಶವನ್ನು, ಕರುಳಗಳನ್ನು, ಹೊಟ್ಟೆಯನ್ನು ಶುಚಿಗೊಳಿಸುವ ಸತ್ವಾಂಶಗಳನ್ನು ಒಳಗೊಂಡಿದೆ. ಬೆಲ್ಲ ದೇಹದಲ್ಲಿನ ಅನಗತ್ಯ ಲವಣಾಂಶಗಳನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲದೆ ಇದು ಕರುಳಿನ ಕ್ರಿಯಾತ್ಮಕ ಶಕ್ತಿಯನ್ನು ವೃದ್ಧಿಸಿ, ಮಲಬದ್ಧತೆ ಆಗದಂತೆ ನೋಡಿಕೊಳ್ಳುತ್ತದೆ.

ಶೇಂಗಾ ಮತ್ತು ಬೆಲ್ಲದ ಸಮ್ಮಿಲನ ರಕ್ತಹೀನತೆ ಅಥವಾ ಅನೀಮಿಯಾ ರೋಗದಿಂದ ಆಗುವ ನಿಶ್ಯಕ್ತಿಯನ್ನು ನೀಗಿಸಿ, ಹಿಮೋಗ್ಲೋಬಿನ್ ಹೆಚ್ಚಿಸುವ ಕಬ್ಬಿಣ ಮತ್ತು ಫೋಲೇಟ್ ಅಂಶವನ್ನು ಒಳಗೊಂಡಿದ್ದು, ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಸರಿಯಾದ ಪ್ರಮಾಣದಲ್ಲಿ ಇರಿಸುತ್ತದೆ. ನಾವು ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಮೂಳೆಗಳ ಗಟ್ಟಿತನಕ್ಕೂ ಇದು ಸಹಕಾರಿ.

ದೇಹದ ಆಯಸ್ಸು ಹೆಚ್ಚಿಸುವುದು ಮಾತ್ರವಲ್ಲ, ನಾವು ತಾರುಣ್ಯ ಕಾಪಾಡಲು ಸಹಾಯ ಮಾಡುತ್ತದೆ. ಮಾನಸಿಕ ತುಲನೆಯನ್ನು ಕಾಪಾಡಿಕೊಳ್ಳಲು ರಕ್ತನಾಳಗಳಲ್ಲಿ ನಡೆಯುವ ಆಣ್ವಿಕ ಕಾರ್ಯವಿಧಾನಗಳನ್ನು ಬದಲಾಯಿಸುವ ಮೂಲಕ ರೆಸ್ವೆರಾಟ್ರೋಲ್ ಪಾಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.

ಬಾಯಿರುಚಿಗಾಗಿ ದೇಹದ ಆರೋಗ್ಯವನ್ನು ಕೆಡಿಸುವ ಯಾವುದೋ ಆಹಾರವನ್ನು ತಿನ್ನುವ ಬದಲು ದೇಹಕ್ಕೆ ಉಪಯೋಗಕರ ಮತ್ತು ಬಾಯಿಗೂ ರುಚಿಯಿರುವ ಸತ್ವಭರಿತ ಆಯುಷ್ ಚಿಕ್ಕಿ ಯನ್ನು ಸೇವಿಸುವುದು ಬಹಳ ಉತ್ತಮ. ಇಂದೇ ಖರೀದಿಸಿ. ಆರೋಗ್ಯ ಮತ್ತು ರುಚಿ ಎರಡನ್ನೂ ಎಂಜಾಯ್ ಮಾಡಿ