ಸುರತ್ಕಲ್‌ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಮೃತದೇಹ ಅದಲು ಬದಲು

ಸುರತ್ಕಲ್‌ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಮೃತದೇಹ ಅದಲು ಬದಲು

May 17, 2021 12:25:56 PM (IST)
ಸುರತ್ಕಲ್‌ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಮೃತದೇಹ ಅದಲು ಬದಲು

ಮಂಗಳೂರು: ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್‌ ಮೃತರ ಮೃತದೇಹವನ್ನು ಅದಲು ಬದಲಾಗಿ ಸಂಬಂಧಿಕರಿಗೆ ನೀಡಿದ ಘಟನೆ ಸೋಮವಾರ ನಡೆದಿದೆ. ಸುರತ್ಕಲ್‌ನ ರೀಜೆಂಟ್‌ ಪಾರ್ಕ್‌ನ ಜಗದೀಶ್‌ ಶೆಟ್ಟಿ(೬೫) ಅವರು ಕೋವಿಡ್ ನಿಂದ ಮೃತರಾಗಿದ್ದು, ಆಸ್ಪತ್ರೆಯಲ್ಲಿ ನೀಡಿದ ಮೃತದೇಹದಲ್ಲಿ ಕಾರ್ಕಳದ ಸುಧಾಕರ ಶೆಟ್ಟಿ ಅವರ ಹೆಸರಿತ್ತು. ತಕ್ಷಣ ಮನೆಯವರು ಆಸ್ಪತ್ರೆಯವರ ಗಮನಕ್ಕೆ ತಂದಿದ್ದಾರೆ. ಈ ನಡುವೆ ಜಗದೀಶ್‌ ಶೆಟ್ಟಿ ಅವರ ಮೃತದೇಹವನ್ನು ಕಾರ್ಕಳಕ್ಕೆ ತೆಗೆದುಕೊಂಡು ಹೋಗಿದ್ದು, ಸದ್ಯ ಮನೆಯವರು ವಾಪಾಸು ಸುರತ್ಕಲ್‌ನ ಆಸ್ಪತ್ರೆಗೆ ತಂದು ನಂತರ ಬದಲಾಯಿಸಿ ಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಸುರತ್ಕಲ್‌ ಠಾಣೆ ಪೊಲೀಸರು ಭೇಟಿ ನೀಡಿದ್ದರು.