ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿರುವ ಕರಾವಳಿಗರನ್ನು ಕರೆತರುವಂತೆ ಸಿಎಂಗೆ ಶಾಸಕ ಹರೀಶ್ ಪೂಂಜ ಮನವಿ

ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿರುವ ಕರಾವಳಿಗರನ್ನು ಕರೆತರುವಂತೆ ಸಿಎಂಗೆ ಶಾಸಕ ಹರೀಶ್ ಪೂಂಜ ಮನವಿ

DA   ¦    May 21, 2020 08:40:22 AM (IST)
ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿರುವ ಕರಾವಳಿಗರನ್ನು ಕರೆತರುವಂತೆ ಸಿಎಂಗೆ ಶಾಸಕ ಹರೀಶ್ ಪೂಂಜ ಮನವಿ

ಬೆಳ್ತಂಗಡಿ: ಕೊರೋನಾ ಮಹಾಮಾರಿಯಿಂದಾಗಿ ಹೊರರಾಜ್ಯದಿಂದ ತವರೂರಿಗೆ ಬರಲಾಗದೆ ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಸಿಲುಕಿಹಾಕಿಕೊಂಡ ಕರಾವಳಿಗರು ಮತ್ತು ಇತರ ಜಿಲ್ಲೆಗಳ ಕನ್ನಡಿಗರನ್ನು ತವರಿಗೆ ಕರೆತರಲು ಸಹಕರಿಸುವಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಲ್ಲಿ ಮನವಿ ಮಾಡಿದ್ದಾರೆ.

ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರ ಜಿಲ್ಲೆಗಳ ಗರ್ಭಿಣಿ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವಾರು ಮಂದಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ನಿಪ್ಪಾಣಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

ಈ ಕುರಿತಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ, ಅಲ್ಲಿರುವ ಜನರ ಸಮಸ್ಯೆಗಳ ಕುರಿತಾಗಿ ಮನವರಿಕೆ ಮಾಡಿಕೊಡಲಾಯಿತು. ಅವರ ಕ್ಷೇಮ ಕಾಪಾಡಲು ಸಿಲುಕಿಹಾಕಿಕೊಂಡಿರುವ ನನ್ನ ಬಂಧುಗಳನ್ನು ಕರ್ನಾಟಕಕ್ಕೆ ಬರಲು ಅನುಮತಿ ನೀಡಬೇಕೆಂದು ವಿನಂತಿ ಮಾಡಿದರು