ಕಲ್ಲಪಳ್ಳಿಯಲ್ಲಿ ಆದರ್ಶ ಸಭಾಭವನ ಉದ್ಘಾಟನೆ: ಉಪನ್ಯಾಸ, ಸಾಧಕರಿಗೆ ಗೌರವಾರ್ಪಣೆ

ಕಲ್ಲಪಳ್ಳಿಯಲ್ಲಿ ಆದರ್ಶ ಸಭಾಭವನ ಉದ್ಘಾಟನೆ: ಉಪನ್ಯಾಸ, ಸಾಧಕರಿಗೆ ಗೌರವಾರ್ಪಣೆ

GK   ¦    Dec 09, 2019 06:33:04 PM (IST)
ಕಲ್ಲಪಳ್ಳಿಯಲ್ಲಿ ಆದರ್ಶ ಸಭಾಭವನ ಉದ್ಘಾಟನೆ: ಉಪನ್ಯಾಸ, ಸಾಧಕರಿಗೆ ಗೌರವಾರ್ಪಣೆ

ಸುಳ್ಯ: ಕಲ್ಲಪಳ್ಳಿಯ ಪೆರುಮುಂಡ ಆದರ್ಶ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘದ ನೂತನ ಆದರ್ಶ ಸಭಾಭವನನ್ನು ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ. ನೆರವೇರಿಸಿದರು.

ಕಲ್ಲಪಳ್ಳಿ ಕೂಟುಪಿಲಾವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ಅಧ್ಯಕ್ಷ ಎ.ಕೆ. ಸೋಮನಾಥ ಗೌಡ ಆಲುಗುಂಜ, ಅಯ್ಯಪ್ಪ ಸೇವಾ ಸಮಿತಿಯ ಬಿ.ಕೆ. ಜನಾರ್ದನ ಗುಂಡ್ಯ, ಪ್ರಗತಿಪರ ಕೃಷಿಕ ಬಿ.ಕೆ. ನಾರಾಯಣ ಪೆರುಮುಂಡ ಉಪಸ್ಥಿತರಿದ್ದರು.

ಉಪನ್ಯಾಸ ಸನ್ಮಾನ

ಬಳಿಕ ನಡೆದ ಉದ್ಘಟನಾ ಸಮಾರಂಭದಲ್ಲಿ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಉಪನ್ಯಾಸ ನೀಡಿದರು. ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ., ಪತ್ರಕರ್ತ ಗಂಗಾಧರ ಕಲ್ಲಪಳ್ಳಿ,  ಮೋಹನ್‍ಚಂದ್ರ ನಡುಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್‍ಕುಮಾರ್ ರೈ, ಪನತ್ತಡಿ ಗ್ರಾ.ಪಂ. ಸದಸ್ಯೆ  ನಳಿನಾಕ್ಷಿ ದಾಮೋದರ ಪನೆಯಾಲ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಲ್ಲಪಳ್ಳಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಿ.ಎ ಮುಖ್ಯ ಅತಿಥಿಗಳಾಗಿದ್ದರು. 

ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಜಗದೀಶ ಪಿ.ವಿ., ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ  ಸಾವಿತ್ರಿ ದಾಸಪ್ಪ ಪೆರುಮುಂಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ರವಿಕುಮಾರ್ ಸ್ವಾಗತಿಸಿ, ರಮೇಶ್ ಪೆರುಮುಂಡ ಪ್ರಸ್ತಾವನೆಗೈದರು. ಜಯಪ್ರಕಾಶ್ ಪೆರುಮುಂಡ ವಂದಿಸಿದರು.