News Kannada
Wednesday, July 06 2022

ಕರ್ನಾಟಕ

ಆನ್ ಲೈನ್ ಔಷಧಿ ವಿತರಣೆಯಿಂದ ವ್ಯಾಪಾರಕ್ಕೆ ಧಕ್ಕೆ - 1 min read

Photo Credit :

ಆನ್ ಲೈನ್  ಔಷಧಿ ವಿತರಣೆಯಿಂದ ವ್ಯಾಪಾರಕ್ಕೆ ಧಕ್ಕೆ

ಗೋಣಿಕೊಪ್ಪ: ಹಲವು ವರ್ಷಗಳಿಂದ ಔಷಧಿ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿರುವ ವ್ಯಾಪಾರಸ್ಥರು ಇತ್ತೀಚಿನ ಆನ್ಲೈನ್ ಔಷಧಿ ವಿತರಣೆಯಿಂದ ವ್ಯಾಪಾರಸ್ಥರಿಗೆ ತೀವ್ರ ಧಕ್ಕೆಯಾಗಿದೆ. ಸರ್ಕಾರವು ಆನ್ ಲೈನ್ ಔಷಧಿಯನ್ನು ರದ್ದು ಪಡಿಸುವಂತೆ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗೋಣಿಕೊಪ್ಪಲುವಿನ ಸಿಲ್ವರ್ಸ್ಕೈ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕಾಂಚನ ಮೆಡಿಕಲ್ಸ್ನ ಮಾಲೀಕ ಬಿ.ಯು.ದೇವೇಂದ್ರ ಅಧ್ಯಕ್ಷತೆಯಲ್ಲಿ ದಕ್ಷಿಣ ಕೊಡಗಿನ ಔಷಧಿ ವ್ಯಾಪಾರಿಗಳ ಸಂಘದ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಪ್ತಗಿರಿ ಮೆಡಿಕಲ್ಸ್ ನ ಮಾಲೀಕ ಸಂಘದ ಕಾರ್ಯದರ್ಶಿ ಹೆಚ್.ವಿ.ಕೃಷ್ಣಪ್ಪ ಸಂಘದ ವಾರ್ಷಿಕ ವರದಿ ಮಂಡಿಸಿ ಇತ್ತೀಚೆಗೆ ದೇಶದಾದ್ಯಂತ ಏಕಕಾಲಕ್ಕೆ ಔಷಧಿ ಅಂಗಡಿ ಮಳಿಗೆ ಮುಚ್ಚುವುದರ ಮೂಲಕ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯ ಹೇರಲಾಗಿದೆ. ಸರ್ಕಾರ ಸ್ಪಂದಿಸುವ ಆಶಾಭಾವನೆ ವ್ಯಕ್ತಪಡಿಸಿದರು.. ಜಿಲ್ಲೆಯಿಂದ ಪ್ರತಿಭಟನೆಗೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪಾಲ್ಗೊಂಡಿದ್ದ ಬಗ್ಗೆ ವಿವರ ನೀಡಿದರು. ಸಂಘ ಒಂದು ವರ್ಷ ಪೂರೈಸಿದ್ದು ಉತ್ತಮವಾಗಿ ಸಂಘವು ನಡೆಯುತ್ತಿದ್ದು ಮಾಲೀಕರ ಹಿತವನ್ನು ಕಾಪಾಡುವ ಪ್ರಯತ್ನ ಸಂಘದಿಂದ ನಡೆಯುತ್ತಿದೆ ಎಂದರು.

ಜಂಟಿ ಕಾರ್ಯದರ್ಶಿ ವೈಷ್ಣವಿ ಮೆಡಿಕಲ್ಸ್ನ ಮಾಲೀಕ ಕೆ.ಡಿ.ಶಾಂತಕುಮಾರ್ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಸಂಘದ ಅಧ್ಯಕ್ಷ ಬಿ.ಯು.ದೇವೇಂದ್ರ ಮಾತನಾಡಿ ಗೋಣಿಕೊಪ್ಪ, ಪೊನ್ನಂಪೇಟೆ, ತಿತಿಮತಿ, ಬಾಳೆಲೆ, ಕುಟ್ಟ, ಶ್ರೀಮಂಗಲದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವು ಇತರ ಜಿಲ್ಲೆಗೆ ಮಾದರಿಯಾಗಿದ್ದು ಜಿಲ್ಲಾ ಸಂಘವು ಮಡಿಕೇರಿಯಲ್ಲಿ ನಿರ್ಮಿಸುತ್ತಿರುವ ಸಂಘದ ಕಟ್ಟಡಕ್ಕೆ ಮೆಡಿಕಲ್ ನ ಮಾಲೀಕರು ಸಹಾಯ ನೀಡುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ  ಉಪಾಧ್ಯಕ್ಷ ವಿಷ್ಣು ಮೆಡಿಕಲ್ಸ್ ನ ಕೆ.ಎಂ.ರವಿಕುಮಾರ್, ಮಾನಸ ಮೆಡಿಕಲ್ಸ್ ನಪೂರ್ಣಚಂದ್ರ, ವೈಷ್ಣವಿ ಮೆಡಿಕಲ್ಸ್ ನ ರವಿ, ಮಹಾಗುರು ಮೆಡಿಕಲ್ಸ್ ನ ಬೋಪಣ್ಣ, ಕಿರಣ್, ಪೊನ್ನಂಪೇಟೆ ವಿಷ್ಣು ಮೆಡಿಕಲ್ಸ್ ನ ರವಿ, ಗಿರಿ, ಕುಟ್ಟ ಮೆಡಿಕಲ್ಸ್ನ ಡೇವಿಡ್, ಶ್ರೀಮಂಗಲ ಗಣೇಶ ಮೆಡಿಕಲ್ಸ್ನ ಲಕ್ಷ್ಮಣ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.

See also  ಮತೀಯ ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು