ಮಡಿಕೇರಿ: ಕೊಡಗು ಪ್ರಾಕೃತಿಕ ಸೌಂದರ್ಯದ ತವರು, ದಕ್ಷಿಣದ ಕಾಶ್ಮೀರ, ಗಿರಿ-ಕಂದರಗಳ ನಾಡು, ನಿತ್ಯಹರಿದ್ವರ್ಣದ ಬೀಡು, ಅಪರೂಪದ ಸಸ್ಯ ಸಂಪತ್ತನ್ನು ತನ್ನ ಒಡಲೊಳಗೆ ಇರಿಸಿಕೊಂಡಿರುವ ಕನರ್ಾಟಕದ ಅತ್ಯಂತ ವಿಶಿಷ್ಟವಾದ ಜಿಲ್ಲೆ ಕೊಡಗು.
ವೀರ ಸೇನಾನಿಗಳ ನಾಡು, ಕಾಫಿಯ ಸೀಮೆ, ದಕ್ಷಿಣದ ಗಂಗೆ ಎಂದೆಲ್ಲ ಕರೆಯಲ್ಪಡುವ ಜೀವನದಿ ಕಾವೇರಿಗೆ ಜನ್ಮ ನೀಡಿದ ಕೊಡಗು, ಭಾರತದಲ್ಲಿಯೇ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆ ದಿಸೆಯಲ್ಲಿ ಇದೇ ಜನವರಿ, 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಕಾಫಿ ಬೆಳೆಗೆ ಸಂಬಂಧಿಸಿದಂತೆ ಸ್ತಬ್ಧಚಿತ್ರ ನಿಮರ್ಾಣವಾಗುತ್ತಿದ್ದು, ‘ದೆಹಲಿಯ ರಾಜಪಥದಲ್ಲಿ ಕೊಡಗಿನ ಕಾಫಿ ಪರಿಮಳ’ ಇಡೀ ವಿಶ್ವಕ್ಕೆ ಪಸರಿಸಲಿದೆ.
ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಳೆದ 6 ವರ್ಷಗಳಿಂದ ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ಪ್ರತಿಬಿಂಬಿಸುತ್ತಾ ಬರಲಾಗಿದ್ದು, ಆ ನಿಟ್ಟಿನಲ್ಲಿ ಈ ವರ್ಷ ಕೊಡಗಿನ ಕಾಫಿ ಸ್ತಬ್ಧಚಿತ್ರ ನಿಮರ್ಾಣವಾಗುತ್ತಿರುವುದು ವಿಶೇಷವಾಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುತ್ತಿರುವ ಪ್ರದೇಶಗಳಲ್ಲಿ ಕೊಡಗಿಗೆ 6ನೇ ಸ್ಥಾನ. ಹಲವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಫಿ ಬೆಳೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉದ್ಯಮದಲ್ಲಿ ಮಹಿಳೆಯರದ್ದೇ ಹೆಚ್ಚಿನ ಪಾಲು ಇರುವುದು ಗಮನಾರ್ಹವಾಗಿದೆ. ಕಾಫಿ ಉತ್ಪಾದನೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ಲಾಭ ಮತ್ತು ಸ್ಥಳೀಯರು ಕಾಫಿ ಜೊತೆಗಿನ ಸಾಂಸ್ಕೃತಿಕ ನಂಟು, ಹೀಗೆ ಕೊಡಗಿನ ವೈಶಿಷ್ಟ್ಯತೆ ಬಗ್ಗೆ ವಿವರಿಸಲಾಗಿದೆ.
ಸ್ತಬ್ಥಚಿತ್ರದಲ್ಲಿ ಏನಿದೆ: ಕಾಫಿ ಬೀಜ ಬಿತ್ತನೆ, ಕಾಫಿ ಬೆಳೆಯುವುದು, ಕಾಫಿ ಹುಡಿ ತಯಾರಿಕೆ ಸೇರಿದಂತೆ ಕಾಫಿ ಉತ್ಪಾದನೆಯ ವಿವಿಧ ಹಂತಗಳು ಸ್ತಬ್ಧಚಿತ್ರದಲ್ಲಿ ಬಿಂಬಿತವಾಗಲಿವೆ. ಮುಂಭಾಗದಲ್ಲಿ ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಕಾಫಿ ಬೆರೆಸುತ್ತಿರುವ ದೃಶ್ಯವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ವಿಶ್ವದ 60 ರಾಷ್ಟ್ರಗಳು ಬಳಸುತ್ತಿರುವ ಕಾಫಿ ಹೇಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬ ವಿವರಣೆಯೂ ಇರಲಿದೆ. ಜೊತೆಗೆ, ಕೊಡಗಿನ 8 ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಂಪ್ರದಾಯಿಕ ಕೊಡವ ನೃತ್ಯದ ಮೂಲಕ ಸ್ತಬ್ಧಚಿತ್ರಕ್ಕೆ ಕಳೆ ತುಂಬಲಿದ್ದಾರೆ. ಸ್ತಬ್ಧಚಿತ್ರ ಸಾಗುವ ವೇಳೆ ಕಾಫಿಯ ಸುಗಂಧವನ್ನು ಜನರಿಗೆ ತಲುಪಿಸಲು ಬೃಹತ್ ಗಾತ್ರದ ಗ್ಯಾಸ್ ಕಂಟೇನರ್ ಮೂಲಕ ಕಾಫಿಯ ಪರಿಮಳ ಹೊರಸೂಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳು ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿದರ್ೇಶಕರಾದ ಎನ್.ಆರ್.ವಿಶುಕುಮಾರ್ ಅವರ ನೇತೃತ್ವದಲ್ಲಿ ನಡೆದಿದೆ.
ಕಲಾ ನಿದರ್ೇಶಕರಾದ ಶಶಿಧರ ಅಡಪ ಮತ್ತು ಸತೀಶ್ ಸ್ತಬ್ಧಚಿತ್ರ ವಿನ್ಯಾಸ ಮಾಡುತ್ತಿದ್ದು, ಪ್ರವೀಣ್ ಡಿ.ರಾವ್ ಕೊಡಗು ಶೈಲಿಯ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.