News Kannada
Wednesday, July 06 2022

ಕರ್ನಾಟಕ

ಸಾಮಾಜಿಕ ಬದ್ಧತೆಯ ಸುತ್ತೂರು ಜಾತ್ರೆ: ನ್ಯಾ. ಸುಭಾಷ್ ಬಿ.ಆಡಿ - 1 min read

Photo Credit :

ಸಾಮಾಜಿಕ ಬದ್ಧತೆಯ ಸುತ್ತೂರು ಜಾತ್ರೆ: ನ್ಯಾ. ಸುಭಾಷ್ ಬಿ.ಆಡಿ

ನಂಜನಗೂಡು: ಸುತ್ತೂರಿನಲ್ಲಿ ಜರುಗುವ ಜಾತ್ರೆಯಲ್ಲಿ ಸಾಮಾಜಿಕ ಬದ್ಧತೆ ಮತ್ತು ಜನರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಬೇಕಾಗಿರುವ ಎಲ್ಲ ಅಂಶಗಳನ್ನು ಜಾತ್ರೆಯಲ್ಲಿ ಕಾಣಬಹುದು ಎಂದು ರಾಜ್ಯ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ.ಆಡಿ ತಿಳಿಸಿದರು.

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ, ಚಿತ್ರಸಂತೆ ಹಾಗೂ ಗಾಳಿಪಟ ಸ್ಪರ್ಧೆಗಳನ್ನು ಉದ್ಘಾಟಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ಭಾರತ ಇತಿಹಾಸ ಕಂಡ ದೇಶ. ಸಾಕಷ್ಟು ಪುಣ್ಯ ಪುರುಷರಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದರು. ಅವರು ಹಾಕಿದ ಭದ್ರ ಬುನಾದಿ ನಾವು ಇಂದಿಗೂ ನೋಡುತ್ತಿರುವುದು ಸುತ್ತೂರಿನಲ್ಲಿ ಮಾತ್ರ ಎಂದರು.

ಸಮಾಜದಲ್ಲಿ ಹಿಂದುಳಿದವರು ದುರ್ಬಲರು ಇತರೆ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಕ್ರೈಸ್ತನ ಹೆಸರಿನಲ್ಲಿರುವ ಉತ್ತಮ ಗುರುಗಳು ಇದನ್ನು ತಡೆಯಲು ಮುಂದಾಗಬೇಕು, ಆಯಾ ಧರ್ಮದ ಗುರುಗಳು, ಮತಾಂತರದ ಬಗ್ಗೆ ಗಮನ ಹರಿಸಿದರೆ ಮತಾಂತರವನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಸುತ್ತೂರು ರಥೋತ್ಸವಕ್ಕೆ ಹರಿದು ಬಂದ ಜನಸಾಗರ
ನಂಜನಗೂಡು: ಸುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಯಾದ ರಥೋತ್ಸವ ಅದ್ಧೂರಿ ಹಾಗೂ ವೈಭವದಿಂದ ನಡೆಯಿತು.

ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು  ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು-ಜವನ ಎಸೆದು ಭಕ್ತಿಭಾವದಿಂದ ನಮಿಸಿ ಪುನೀತರಾದರು. ಶ್ರೀ ಗದ್ದಿಗೆಗೆ ಅಗ್ರಪೂಜೆ ವಿವಿಧ ಅಭಿಷೇಕ, ಬಿಲ್ವಾರ್ಛನೆ, ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ ಶ್ರೀಗಳ ಉತ್ಸವಮೂರ್ತಿಯನ್ನು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಿ ಬಳಿಕ ವಿಶೇಷ ಹೂವಿನ ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಸಾಂಪ್ರದಾಯಿಕ ಪದ್ಧತಿಯಂತೆ ರಥದ ಚಕ್ರಗಳಿಗೆ ಪೂಜೆ,  ಈಡುಗಾಯಿ ಒಡೆದು ಮಹಾಮಂಗಳಾರತಿ ಮಾಡಿದ ನಂತರ ಶಿವರಾತ್ರೀದೇಶಿಕೇಂದ್ರಗಳ ಸಮ್ಮುಖದಲ್ಲಿ ವಿವಿಧ ಮಠದ ಸ್ವಾಮಿಗಳು ಪುಷ್ವಾರ್ಚನೆ ಮಾಡಿದ ಆ ನಂತರ ರಥವನ್ನು ಹಗ್ಗದಿಂದ ಎಳೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥ ಚಲಿಸುತ್ತಿದ್ದಂತೆಯೇ ರಥದ ಮುಂಭಾಗ ವೀರಗಾಸೆ, ಡೊಳ್ಳುಕುಣಿತ, ನವಿಲಿ ಕುಣಿತ, ಹುಲಿವೇಷ,  ನಾದಸ್ವರ, ಗಾರುಡಿಗೊಬ್ಬೆ, ಸೇರಿದಂತೆ 33 ಕ್ಕೂ ಹೆಚ್ಚು  ಕಲಾ ತಂಡಗಳು ಸಾಂಪ್ರದಾಯಿಕವಾಗಿ ನರ್ತನ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದ್ದು ರಥೋತ್ಸವಕ್ಕೆ ಕಳೆಕಟ್ಟಿತು.

See also  ಹತ್ಯೆ, ಕಳ್ಳತನ ಪ್ರಕರಣ : ಮೂವರಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು