ಚಿಕ್ಕೋಡಿ: ಶಿಕ್ಷಕಿಯೋರ್ವಳು ತನ್ನ ವಿದ್ಯಾರ್ಥಿಯನ್ನೇ ಮದುವೆಯಾದ ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು, ಇಂದು ಶಾಲೆಯಿಂದ ಅಮಾನತ್ತು ಮಾಡಿರುವುದನ್ನು ಸಂಸ್ಥೆ ಕಾರ್ಯದರ್ಶಿ ಖಚಿತಪಡಿಸಿದ್ದಾರೆ. ವಿವಾಹ ಮಾಡಿಕೊಂಡಿದ್ದ 23 ವರ್ಷದ ಶಿಕ್ಷಕಿ ಕಳೆದ 6 ತಿಂಗಳ ಹಿಂದೆಯೇ ತಾನು ಪ್ರೀತಿಸಿದ 16 ವರ್ಷದ ಪೋರನನ್ನು ವಿವಾಹವಾಗುವುದಾಗಿ ಹಠ ಹಿಡಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಮೂಲಗಳು ತಿಳಿಸಿವೆ. ಬಾಲಕನನ್ನ ವರಿಸಿದ ಶಾಲಾ ಶಿಕ್ಷಕಿ ತನ್ನ ಪಾಲಕರೊಂದಿಗೆ ಅಜ್ಞಾತ ಸ್ಥಳದಲ್ಲಿದ್ದಾಳೆ ಎನ್ನಲಾಗುತ್ತಿದೆ.
ಇವರಿಬ್ಬರ ಪ್ರೇಮ್ ಕಹಾನಿ ಮದುವೆಯಲ್ಲಿ ಮುಕ್ತಾಯವಾಗಿದ್ದು, ವಿವಾಹಕ್ಕೆ ಈ ಜೋಡಿಯ ಮನೆಯಲ್ಲಿ ಯಾವುದೇ ವಿರೋಧವಿಲ್ಲವೆಂದು ಹೇಳಲಾಗುತ್ತಿದೆ. ಇಬ್ಬರನ್ನೂ ಮನೆಯವರೇ ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ.