News Kannada
Wednesday, October 05 2022

ಕರ್ನಾಟಕ

ಬಂಡೀಪುರಕ್ಕೆ ಬಂದ ಮಣಿಪುರ ಅರಣ್ಯ ಸಚಿವರು - 1 min read

Photo Credit :

ಬಂಡೀಪುರಕ್ಕೆ ಬಂದ ಮಣಿಪುರ ಅರಣ್ಯ ಸಚಿವರು

ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಯೋಜನೆ ಅರಣ್ಯಕ್ಕೆ ಆಗಮಿಸಿದ ಮಣಿಪುರ ರಾಜ್ಯದ ಅರಣ್ಯ ಮತ್ತು ಕಂದಾಯ ಸಚಿವ ಹೇಮಚಂದರ್ ಸಿಂಗ್ ಮತ್ತು ಕುಟುಂಬ ಇಲ್ಲಿನ ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ ಸಂತಸಪಟ್ಟರು.


ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯವರು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ದ್ರೋಣ್ ನೆರವಿನಿಂದ ಅರಣ್ಯ ಪಾಲನೆ, ರಾಣಾ ಶ್ವಾನದಿಂದ ಅಪರಾಧಿಗಳನ್ನು ಪತ್ತೆ ಹಚ್ಚು ಕಾರ್ಯದ ಬಗ್ಗೆ ತಿಳಿದು ಅಚ್ಚರಿಪಟ್ಟರಲ್ಲದೆ ಪ್ರಶಂಸೆ ವ್ಯಕ್ತಪಡಿಸಿದರು.

ಇಲ್ಲಿನ ಕಾರ್ಯವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾವು ಮಣಿಪುರ ರಾಜ್ಯಕ್ಕೆ ಹಿಂತಿರುಗಿದ ಬಳಿಕ ಅಲ್ಲಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ಬಂಡೀಪುರಕ್ಕೆ ಕಳುಹಿಸಿ, ಅಧ್ಯಯನ ಮಾಡಿ ಇಲ್ಲಿ ಅಳವಡಿಸಿರುವ ತಂತ್ರಜ್ಞಾನ ಇನ್ನಿತರ ಕ್ರಮಗಳನ್ನು ಅಲ್ಲಿಯೂ ಬಳಕೆ ಮಾಡುವುದಾಗಿ ತಿಳಿಸಿದರು. ಮಣಿಪುರ ಅರಣ್ಯ ಸಚಿವರು ಭೇಟಿ ನೀಡಿದ ಸಂದರ್ಭ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಿ.ಬಿ.ಮಲ್ಲೇಶ್, ಎಸಿಎಫ್ ಮರಡಿಮನಿ, ಆರ್ಎಫ್ಓ ಗೋವಿಂದರಾಜು ಉಪಸ್ಥಿತರಿದ್ದರು.

See also  ಮಡಿಕೇರಿಯಲ್ಲಿ ಮನಸೂರೆಗೊಳ್ಳುತ್ತಿರುವ ಕ್ಯಾಲಿಗ್ರಫಿ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು