News Kannada
Sunday, October 02 2022

ಕರ್ನಾಟಕ

ಕರ್ನಾಟಕದ ಇಬ್ಬರು ಯೋಧರು ಬಲಿ - 1 min read

Photo Credit :

ಕರ್ನಾಟಕದ ಇಬ್ಬರು ಯೋಧರು ಬಲಿ

ವಿಜಯಪುರ/ಹುಬ್ಬಳ್ಳಿ: ಐದಂತಸ್ತಿನ‌ ಕಟ್ಟಡದ ಮೇಲಿಂದ ಬಿದ್ದು ಯೋಧನೋರ್ವ ಸಾವನ್ನಪ್ಪಿದರೆ, ಇನ್ನೋರ್ವ ಯೋಧ ನಕ್ಸಲ್ ದಾಳಿಗೆ ಬಲಿಯಾದ ಘಟನೆ ಮಹಾರಾಷ್ಟ್ರ ಹಾಗೂ ಛತ್ತೀಸಘಡದಲ್ಲಿ ಸಂಭವಿಸಿದೆ.

ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದ ಯೋಧ ಮಲ್ಲಪ್ಪ ಕಲ್ಲಪ್ಪ‌ ಪೂಜಾರಿ(33) ಐದಂತಸ್ತಿನ‌ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಯೋಧ. ಮೃತ ಮಲ್ಲಪ್ಪ ಮರಾಠಾ ರೆಜಿಮಿಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಲ್ಲಪ್ಪನ ಸಾವನ್ನಪ್ಪಿದ ಸುದ್ದಿ ತಿಳಿದ ಕಾರಜೋಳ ಗ್ರಾಮದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮಲ್ಲಪ್ಪನ ಪಾರ್ಥಿವ ಶರೀರ ವಿಜಯಪುರ ನಗರಕ್ಕೆ ಆಗಮಿಸಿದ್ದು, ಸಕಲ ಸರ್ಕಾರಿ ಗೌರವಗಳಿಂದ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ರವಾನೆಯಾಗಲಿದೆ. ಕಾರಕೋಳ ಗ್ರಾಮದಲ್ಲಿ ಮೃತ ಯೋಧನ ಅಂತ್ಯಕ್ರಿಯೆ ನಡೆಯಲಿದೆ.

ಇನ್ನೋರ್ವ ಯೋಧ ಸತೀಶ ಸೈಯಣ್ಣವರ (31) ದಾಂತೆವಾಡಯಲ್ಲಿ ನಕ್ಸಲ್ ಗುಂಡಿಗೆ ಬಲಿಯಾದ ಯೋಧ. ಹುಬ್ಬಳ್ಳಿಯವರಾದ ಇವರು ಮುಂದಿನ ವಾರ ಮನೆಗೆ ಬರುವುದಾಗಿ ತಿಳಿಸಿದ್ದರು. ಬಡ ಕುಟುಂಬದಿಂದಲೇ ಬಂದಿದ್ದ ಸತೀಶ ತಮ್ಮ ದುಡಿಮೆಯಿಂದ ಇತ್ತೀಚೆಗೆ ಸ್ವಂತ ಮನೆ ಕಟ್ಟಿಸಿದ್ದರು. ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದರು. ಬಿಎ ಪದವಿ ಪಡೆದಿದ್ದ ಯೋಧ ಸತೀಶ ಅವರು, ಜಮ್ಮು ಕಾಶ್ಮೀರದಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದರು. ದಾಂತೇವಾಡದಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸತೀಶ ಅವರಿಗೆ ಬೇರೆ ಸ್ಥಳಕ್ಕೆ ವರ್ಗಾವಣೆಯಾಗಿತ್ತು. ಹೊಸ ಸ್ಥಳದಲ್ಲಿ ಕೆಲಸ ಮಾಡಲು ತೆರಳುವ ಮುನ್ನವೇ ನಕ್ಸಲರ ಗುಂಡಿಗೆ ಬಲಿಯಾಗಿ ವೀರಮರಣವನ್ನಪ್ಪಿದ್ದಾರೆ.

See also  ಮಂಡ್ಯಕ್ಕೆ ಯಾರು ಬಂದು ಹೋದರೇನಂತೆ ನೀರಿಗೆ ಪರದಾಟ ತಪ್ಪಿಲ್ಲ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು