News Kannada
Sunday, September 25 2022

ಕರ್ನಾಟಕ

ಕೊಡಗು ಸ್ತಬ್ದ: ಬಂದ್ ಗೆ ವ್ಯಾಪಕ ಬೆಂಬಲ - 1 min read

Photo Credit :

ಕೊಡಗು ಸ್ತಬ್ದ: ಬಂದ್ ಗೆ ವ್ಯಾಪಕ ಬೆಂಬಲ

ಮಡಿಕೇರಿ: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಈ ಪ್ರಕರಣದಲ್ಲಿ ಸರ್ಕಾರ ನಡೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕೊಡಗು ಬಂದ್ ಯಶಸ್ವಿಯಾಗಿದೆ.

ಇಡೀ ಕೊಡಗಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ನೀಡುವ ಮೂಲಕ ಬೆಂಬಲ ನೀಡಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಗಳು  ಹಾಗೂ ಬಿಜೆಪಿ ಕಾರ್ಯಕರ್ತರು, ನಾಗರಿಕರು ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್ ನಲ್ಲಿ ಸಮಾವೇಶಗೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿದರಲ್ಲದೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ಪ್ರತಿಭಟನೆಗೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ. ಇನ್ನು ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ಬಂದ್ ಗೆ ವ್ಯಾಪಕ ಬೆಂಬಲ ದೊರೆತಿದೆ. ಇಲ್ಲಿನ ಕೊಪ್ಪ ಗೇಟ್ ನಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅಲ್ಲಿದೆ ಅಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್ ನಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬೆಳಿಗ್ಗೆ 6 ಗಂಟೆಯಿಂದಲೇ ಬಂದ್ ಗೆ ಬೆಂಬಲ ದೊರೆತಿದ್ದು, ಖಾಸಗಿ ಬಸ್ ಮಾಲಿಕರ, ಚಾಲಕರ ಸಂಘ, ಆಟೋ ಚಾಲಕರ, ಮಾಲೀಕರ ಸಂಘ ಬಂದ್ಗೆ ಬೆಂಬಲ ನೀಡಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಮಕ್ಕಳು ಬಾರದ ಕಾರಣ ಶಾಲೆಗಳು ಬಂದ್ ಆಗಿವೆ. ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಕೊಡವ ಸಮಾಜ, ಮಾಜಿಸೈನಿಕರ ಸಂಘ ಸೇರಿದಂತೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಈಗಾಗಲೇ ಬಂದ್ ಗೆ ಕೊಡವ ಸಮಾಜ, ಗೌಡ ಸಮಾಜ, ವಾಹನ ಚಾಲಕರ ಸಂಘ, ಚೇಂಬರ್ ಆಫ್ ಕಾಮರ್ಸ್, ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಆಟೋ ಘಟಕ, ಕೊಡಗು ಜಿಲ್ಲಾ ಜಯಕರ್ನಾಟಕ ಸಂಘಟನೆ, ವೀರಾಜಪೇಟೆ ಜಾ.ವೇದಿಕೆ, ಅಖಿಲ ಕೊಡವ ಸಮಾಜ, ಜಿಲ್ಲಾ ಬೆಳೆಗಾರರ ಒಕ್ಕೂಟ, ಬಿಎಂಎಸ್ ಸಂಘಟನೆಯ ಕಟ್ಟಡ ಕಾರ್ಮಿಕರ ಸಂಘ, ಸ್ವಾಗತ ಯುವಕ ಸಂಘ,  ಜನ ಸೇವಾ ಸಂಘ, ಸ್ವಾಮಿ ವಿವೇಕಾನಂದ ಜನ ಸೇವಾ ಸಂಘ, ಕುಶಾಲನಗರ ಕೊಡವ ಸಮಾಜ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿರುವುದರಿಂದ ಬಂದ್ ಯಶಸ್ವಿಗೊಂಡಿದೆ.

ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಖಾಕಿ ಕಾವಲು ಹಾಕಲಾಗಿದೆ. 1200 ಪೊಲೀಸ್ ಸಿಬ್ಬಂದಿಗಳು, 150 ಪೊಲೀಸ್ ಅಧಿಕಾರಿಗಳು, 25 ಕೆ.ಎಸ್.ಆರ್.ಪಿ ಹಾಗೂ 3 ಗಸ್ತು ವಾಹನಗಳನ್ನು ನಿಯೋಜಿಸಿದ್ದು,  100 ರಿಂದ 150 ವಾಹನಗಳು ತಪಾಸಣೆ ನಡೆಸಲಿವೆ. ಅಗತ್ಯವಿರುವೆಡೆ ವೃತ್ತಿಪರ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಫರನ್ನು ನಿಯೋಜಿಸಲಾಗಿದೆ.

See also  ಗ್ರಾಹಕರ ಸಂರಕ್ಷಣೆಯ ರಾಜ್ಯ ಸರ್ಕಾರದ ಅಧಿಕಾರ ಕಡಿತಗೊಳಿಸಬಾರದು: ಪಿ.ತಿಲೋತ್ತಮನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು