News Kannada
Saturday, October 08 2022

ಕರ್ನಾಟಕ

ಚೆನ್ನಿಪುರ ಮೋಳೆ ಶಾಲೆಯಲ್ಲಿ ಗಿಡಗಳಿಗೆ ಹುಟ್ಟುಹಬ್ಬ - 1 min read

Photo Credit :

ಚೆನ್ನಿಪುರ ಮೋಳೆ ಶಾಲೆಯಲ್ಲಿ ಗಿಡಗಳಿಗೆ ಹುಟ್ಟುಹಬ್ಬ

ಚಾಮರಾಜನಗರ: ಗಿಡನೆಟ್ಟು ಮಾರುದ್ದ ಭಾಷಣ ಮಾಡಿ ಫೋಟೋಗಳಿಗೆ ಫೋಸ್ ಕೊಟ್ಟು ಮತ್ತೆ ಆ ಗಿಡ ಬದುಕಿದೆಯಾ, ಸತ್ತಿದೆಯಾ ಎಂದು ತಿರುಗಿ ನೋಡದ ಮಂದಿ ಚಾಮರಾಜನಗರದ ಚೆನ್ನಿಪುರ ಮೋಳೆ ಸ.ಹಿ.ಪ್ರಾ. ಶಾಲೆಗೆ ಭೇಟಿ ನೀಡಿ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಪರಿಸರ ದಿನಾಚರಣೆ ಕೇವಲ ಗಿಡನೆಡುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ. ಆದರೆ ನೆಟ್ಟ ಗಿಡಕ್ಕೆ ಗೊಬ್ಬರ, ನೀರು ಹಾಕಿ ಜತನದಿಂದ ಬೆಳೆಸುವ ಗೋಜಿಗೆ ಯಾರೂ ಹೋಗದ ಕಾರಣದಿಂದಾಗಿ ಪ್ರತಿ ವರ್ಷವೂ ಅದೇ ಜಾಗದಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಮಾಡುತ್ತಾ ಪರಿಸರದ ಬಗ್ಗೆ, ಗಿಡನೆಡುವ ಮಹತ್ವದ ಬಗ್ಗೆ ಹೇಳಿ ಕೃತಾರ್ಥರಾಗುತ್ತಿದ್ದೇವೆ. ಬದಲಿಗೆ ನೆಟ್ಟ ಗಿಡವನ್ನು ಪೋಷಿಸುವುದು ಹೇಗೆ? ಮತ್ತು ಪೋಷಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚಿಂತಿಸುವುದೇ ಇಲ್ಲ. ಗಿಡನೆಟ್ಟ ಬಗ್ಗೆ ಲೆಕ್ಕ ನೀಡುವ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅದು ಬದುಕುಳಿದ ಬಗ್ಗೆ ವಿವರಗಳನ್ನು ನೀಡುವುದೇ ಇಲ್ಲ.

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಗಿಡ ಯಾರೂ ಬೇಕಾದರೂ ನೆಡಬಹುದು. ಆದರೆ ಅದನ್ನು ಪೋಷಿಸಿ ಬೆಳೆಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಹೀಗಾಗಿಯೇ ನಮ್ಮ ನಡುವೆ ಸಾಲು ಮರದ ತಿಮ್ಮಕ್ಕೆ ಆದರ್ಶರಾಗಿ ಉಳಿಯುತ್ತಾರೆ. ಗಿಡಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಅದನ್ನು ಪ್ರೀತಿಸುವ ಗುಣ ನಮ್ಮಲ್ಲಿರಬೇಕು.

ಇದನ್ನು ಚಾಚೂ ತಪ್ಪದೆ ಚೆನ್ನಿಪುರ ಮೋಳೆ ಪ್ರಾಥಮಿಕ ಶಾಲೆಯ ಮಕ್ಕಳು ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಶಾಲೆಯಲ್ಲಿ ನೆಟ್ಟ ಮರಗಿಡಗಳನ್ನು ಪೋಷಿಸುತ್ತಾ ಬರುತ್ತಿರುವ ಮಕ್ಕಳು ಅವುಗಳಿಗೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮಾಡುತ್ತಿದ್ದಾರೆ. ಈಗಾಗಲೇ ಶಾಲಾವರಣದಲ್ಲಿ ನೆಟ್ಟ ಗಿಡಗಳಿಗೆ ಏಳು ವರ್ಷಗಳು ತುಂಬಿವೆ. ಅವು ವರ್ಷದಿಂದ ವರ್ಷಕ್ಕೆ ಹುಲುಸಾಗಿ ಎತ್ತರಕ್ಕೆ ಬೆಳೆಯುತ್ತಿವೆ.

ಶಾಲೆಯನ್ನು ಸ್ವಚ್ಛಗೊಳಿಸಿ, ಗಿಡಗಳನ್ನು ಅಲಂಕರಿಸಿ ವರ್ಷಕ್ಕೊಮ್ಮೆ ಶಾಲಾ ಮಕ್ಕಳು ಹುಟ್ಟುಹಬ್ಬ ಮಾಡುತ್ತಿರುವುದಕ್ಕೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಗ್ರಾಮಸ್ಥರು ಸಾಥ್ ನೀಡುತ್ತಾರೆ.  ಅವತ್ತು  ಕೇಕ್ ಕತ್ತರಿಸಿ ಅದನ್ನು ನೆರೆದವರಿಗೆ ಹಂಚಿ ಸಂತಸಪಡುತ್ತಾರೆ. ಈ ಸಂದರ್ಭ ನಡೆಯುವ ಕಾರ್ಯಕ್ರಮಕ್ಕೆ ಗಣ್ಯರನ್ನು ಕರೆಯಿಸಲಾಗುತ್ತದೆ. ಈ ಸಂದರ್ಭ ನೂತನವಾಗಿ ನೆಡಬೇಕಾಗಿರುವ ಗಿಡಗಳಿಗೂ ಅಲಂಕಾರ ಮಾಡಿ ಗಣ್ಯರ ಮೂಲಕ ಶಾಲಾವರಣದಲ್ಲಿ ನೆಡಲಾಗುತ್ತದೆ. ಮುಂದೆ ಅದನ್ನು ಪೋಷಿಸುವ ಕಾಯಕವನ್ನು ವಿದ್ಯಾರ್ಥಿಗಳೇ ಮಾಡುತ್ತಾರೆ.

ಒಟ್ಟಾರೆ ಈ  ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ ವಿಭಿನ್ನವಾಗಿದ್ದು ಪರಿಸರ ದಿನಾಚರಣೆಯನ್ನು ಹೀಗೂ ಆಚರಿಸಬಹುದು ಎಂಬುದನ್ನು ಮಕ್ಕಳು ತೋರಿಸಿಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

See also  ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಶಿಲಾನ್ಯಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು