News Kannada
Saturday, October 01 2022

ಕರ್ನಾಟಕ

ಮೈಸೂರು ಗ್ರಾಮಾಂತರದಲ್ಲಿ ಗಾಂಜಾ ಕಮಟು ವಾಸನೆ - 1 min read

Photo Credit :

ಮೈಸೂರು ಗ್ರಾಮಾಂತರದಲ್ಲಿ ಗಾಂಜಾ ಕಮಟು ವಾಸನೆ

ಪಿರಿಯಾಪಟ್ಟಣ: ಗಾಂಜಾ ಮಾರಾಟ ದಂಧೆ ಮೈಸೂರು ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಹುಣಸೂರು ವ್ಯಾಪ್ತಿಯಲ್ಲಿ ಮಾರಾಟ ಜಾಲ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಗಾಂಜಾ ಸಹಿತ ಕೆಲವರು ಸಿಕ್ಕಿ ಬಿದ್ದಿರುವುದನ್ನು ಗಮನಿಸಿದರೆ, ಈ ವ್ಯಾಪ್ತಿಯಲ್ಲಿ ಗಾಂಜಾದ ಕಮಟು ವಾಸನೆ ವ್ಯಾಪಿಸಿರುವುದು ಗೋಚರಿಸುತ್ತದೆ. ಆದರೆ ಇಲ್ಲಿಗೆ ಗಾಂಜಾ ಎಲ್ಲಿಂದ ಸರಬರಾಜಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಮಾತ್ರ ರಹಸ್ಯವಾಗಿ ಉಳಿದಿದೆ. ಕೆಲವರು  ಮೈಸೂರು ನಗರದಿಂದಲೇ ವಿವಿಧೆಡೆಗೆ ಸರಬರಾಜಾಗುತ್ತಿದೆ ಎಂದು ಹೇಳಿದರೆ ಮತ್ತೆ ಕೆಲವರು  ಕೇರಳದಿಂದ ಬರುತ್ತಿದೆ ಎಂದು ಹೇಳುತ್ತಾರೆ.

ಮೈಸೂರಿನ ಕೆಲವು ಏರಿಯಾದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇಲ್ಲಿ ವೃತ್ತಿನಿರತ ಮಾರಾಟಗಾರರಿದ್ದು, ಅವರಿಗೆ ಅದರ ಮಾರಾಟದ ಒಳ ಮತ್ತು ಹೊರ ಸುಳಿಗಳು ಗೊತ್ತಿರುವುದರಿಂದ ಎಲ್ಲೆಲ್ಲಿ ಹೇಗೆ ಮಾರಾಟ ಮಾಡಬೇಕೆಂಬ ಅರಿವಿದೆ. ಅವರು ಎಲ್ಲಿಯೂ ಸಿಕ್ಕಿ ಬೀಳದಂತೆ ತಮ್ಮ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಪೆಟ್ಟಿಗೆ ಅಂಗಡಿ ಸೇರಿದಂತೆ ಕೆಲವು ಆಯ್ದ ಅಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದ್ದು, ಪರಿಚಿತರಿದ್ದರೆ ಮಾತ್ರ ಮಾಲ್ ದೊರೆಯುತ್ತಿದೆ.

ಮೈಸೂರಿಗೆ ಕೇರಳದ ಕಡೆಯಿಂದ ಮಾಲ್ ಬರುತ್ತಿದೆ ಎನ್ನುವುದು ಕೆಲವರದ್ದಾದರೆ, ಇನ್ನು ಬಾಳೆ ಶುಂಠಿ ಕೃಷಿಗಾಗಿ ಹತ್ತಾರು ಎಕರೆ ಪ್ರದೇಶವನ್ನು ಗುತ್ತಿಗೆ ಪಡೆಯುವ ಕೇರಳದ ಕೆಲವು ಕೃಷಿಕರು ಅದರ ಸುತ್ತ ಬಂದೋಬಸ್ತ್ ಮಾಡಿ ಯಾರನ್ನೂ ಪ್ರವೇಶಿಸಿದಂತೆ ನೋಡಿಕೊಳ್ಳುವ ಮೂಲಕ ಶುಂಠಿ ಮತ್ತು ಬಾಳೆ ಕೃಷಿ ನಡುವೆ ಗಾಂಜಾ ಬೆಳೆಯುತ್ತಾರೆ ಎಂಬ ಆರೋಪವೂ ಇದೆ.

ಇದು ನಿಜವಾಗಿರುವುದರಿಂದಲೇ ಇವತ್ತು ಗಾಂಜಾ ಯಥೇಚ್ಛವಾಗಿ ಸಿಗಲು ಕಾರಣವಾಗಿದೆ. ಗಾಂಜಾಕ್ಕೆ ಬೈಲ್ಕುಪ್ಪೆ ಖರೀದಿ ಕೇಂದ್ರವಾಗಿದೆ. ಇಲ್ಲಿನ ಟಿಬೆಟ್ ಕ್ಯಾಂಪ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗುತ್ತಿದೆ. ಮೈಸೂರಿನಿಂದ ಹುಣಸೂರು, ಪಿರಿಯಾಪಟ್ಟಣ ಕುಶಾಲನಗರ ತನಕವೂ ಗಾಂಜಾಕ್ಕೆ ಗಿರಾಕಿಗಳಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳು ಟಿಬೆಟಿಯನ್ ಕ್ಯಾಂಪ್ ನಲ್ಲಿ ಮಾರಾಟ ಮಾಡಲು ಬಂದು ಸಿಕ್ಕಿಬಿದ್ದಿದ್ದರು.

ಪೊಲೀಸರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಮೈಸೂರಿಗೆ ಗಾಂಜಾ ಎಲ್ಲಿಂದ ಸರಬರಾಜಾಗುತ್ತಿದೆ. ಇದರ ಹಿಂದೆ ಇರುವ ಜಾಲವನ್ನು ಜಾಲಾಡಿ ಬ್ರೇಕ್ ಹಾಕಬೇಕಿದೆ. ಇಲ್ಲದಿದ್ದರೆ ಹಲವರು ಗಾಂಜಾದ ಸುಳಿಗೆ ಸಿಕ್ಕಿ ಬದುಕನ್ನೇ ನಾಶ ಮಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

See also  ಬಂಡೀಪುರದಲ್ಲಿ ಆನೆ ಸಫಾರಿಗೆ ನಡೆದಿದೆಯಾ ಸಿದ್ಧತೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು