News Kannada
Thursday, September 29 2022

ಕರ್ನಾಟಕ

ಟಿಪ್ಪು ಜಯಂತಿ ಆಚರಣೆಗೆ ತಾಪಂ ಸಭೆಯಲ್ಲಿ ವಿರೋಧ - 1 min read

Photo Credit :

ಟಿಪ್ಪು ಜಯಂತಿ ಆಚರಣೆಗೆ ತಾಪಂ ಸಭೆಯಲ್ಲಿ ವಿರೋಧ

ಸೋಮವಾರಪೇಟೆ: ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ತಾಲೂಕು ಪಂಚಾಯಿತಿ ವಿಶೇಷ ಸಭೆಯಲ್ಲಿ ವಿರೋಧ ನಿರ್ಣಯ ಕೈಗೊಳ್ಳಲಾಯಿತು. ಬುಧವಾರ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಡಳಿತರೂಡ ಭಾರತೀಯ ಜನತಾ ಪಕ್ಷದ ಹದಿಮೂರು ಸದಸ್ಯರು ಜಯಂತಿಗೆ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಮೂವರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು. ಜೆಡಿಎಸ್ ನ ಇಬ್ಬರು ತಟಸ್ಥರಾದರು.

ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಿತು. ಕಳೆದ  ಬಾರಿ ಟಿಪ್ಪು ಜಯಂತಿ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಗಲಭೆಗಳು ನಡೆದಿದ್ದು ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೊಡಗಿನ ಐನ್ಮನೆಗಳು, ದೇವಾಲಯಗಳು, ಟಿಪ್ಪುವಿನ ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಕೊಡಗಿನ ಜನತೆಗೆ ಸಾಕಷ್ಟು ಅನ್ಯಾಯವೆಸಗಿರುವ ಟಿಪ್ಪು ಜಯಂತಿ ಆಚರಣೆಯನ್ನು ನಡೆಸುವುದು ಬೇಡ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.  ಇದಕ್ಕೆ ಬಿಜೆಪಿ ಸದಸ್ಯರಾದ ತಂಗಮ್ಮ, ಧರ್ಮಪ್ಪ, ಸಬಿತಾ ಚನ್ನಕೇಶವ, ಸವಿತ ಈರಪ್ಪ, ಜಯಣ್ಣ, ಕುಶಾಲಪ್ಪ, ಲೀಲಾವತಿ, ವಿಜು ಚಂಗಪ್ಪ, ವಿಮಲಾವತಿ, ಆರ್ ಪುಷ್ಪ, ಮಣಿ, ಗಣೇಶ್ ಇದಕ್ಕೆ ಸಹಮತ ವ್ಯಕ್ತ ಪಡಿಸಿ ವಿರೋಧಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಸರಕಾರದ ಕಾರ್ಯಕ್ರಮವನ್ನು ವಿರೋಧಿಸುವ ಹಕ್ಕು ಆಡಳಿತ ಮಂಡಳಿಗೆ ಇಲ್ಲ. ಚುನಾಯಿತ ಜನಪ್ರತಿನಿಧಿಗಳು ಸರಕಾರದ ಆದೇಶವನ್ನು ವಿರೋಧಿಸಬಾರದು. ಟಿಪ್ಪು ಜಯಂತಿ ಆಚರಣೆಗೆ ಕೇವಲ ಒಂದು ಪಕ್ಷ ಮತ್ತು ಒಂದು ವರ್ಗ ಮಾತ್ರ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದೆ. ವಿರೋಧಿ ನಿರ್ಣಯ ಕೈಗೊಳ್ಳಲು ನಮ್ಮ ಸಹ ಮತ ಇಲ್ಲ ಎಂದು ಕಾಂಗ್ರೆಸ್ ಸದಸ್ಯರಾದ ಬಿ.ಬಿ. ಸತೀಶ್ ಸಭೆಗೆ ಹೇಳಿದರು. ಇವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರಾದ ಅನಂತ ಕುಮಾರ್, ಸುಹಾದ ಆಶ್ರಫ್, ಸಹ ಮತ ವ್ಯಕ್ತ ಪಡಿಸಿದರು. ಪಂಚಾಯಿತಿ ಅಧ್ಯಕ್ಷರಾದ ಪುಷ್ಪ ರಾಜೇಶ್ ಮತ್ತು ಜೆಡಿಎಸ್ ಸದಸ್ಯರಾದ ಕುಸುಮ ಪರ ಹಾಗೂ ವಿರೋಧ ಎರಡು ನಿರ್ಣಯಕ್ಕೂ ಸಹಮತ ವ್ಯಕ್ತ ಪಡಿಸದೆ ಮೌನಕ್ಕೆ ಶರಣಾದರು.

ಸಭೆಯ ಪ್ರಾರಂಭದಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವುದಕ್ಕೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಜನಪ್ರತಿನಿಧಿಗಳಿಗೆ ತಾಲೂಕು ಪಂಚಾಯಿತಿ ವತಿಯಿಂದ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು. ಇದೇ ಸಂದರ್ಭ ಕೊಡ್ಲಿಪೇಟೆ, ಶನಿವಾರಸಂತೆ ವ್ಯಾಪ್ತಿಯಲ್ಲಿ ಬರಗಾಲ ಹೆಚ್ಚಾಗಿ ಆವರಿಸಿಕೊಂಡಿದ್ದು, ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಈ ಭಾಗಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ ಮೇರೆಗೆ ನಿರ್ಣಯವನ್ನು ಕೈಗೊಂಡು ಸರಕಾರಕ್ಕೆ ಕಳುಹಿಸುವಂತೆ ತೀರ್ಮಾನಿಸಲಾಯಿತು.
ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಧರ್ಮಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಉಪಸ್ಥಿತರಿದ್ದರು.

See also  ಕಾಲು ತುಂಡಾಗಿರುವ ವ್ಯಕ್ತಿ ಆಸ್ಪತ್ರೆ ಹೊರಗೆ ನರಳಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು