ಕುಶಾಲನಗರ: ಕುಶಾಲನಗರ ಸಮೀಪ ಹೊಸಪಟ್ನದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಭಂದ ಪಟ್ಟ ಹಾಗೆ ಅಧಿಕೃತವಾಗಿ ನಾಲ್ಕು ಜನರನ್ನು ಕೊಟ್ಟ ಮಾಹಿತಿಯ ಆಧಾರದ ಮೇಲೆ ಈ ಕೃತ್ಯದಲ್ಲಿ ಪಾಲ್ಗೊಂಡ ಅಪರಾಧಿಗಳೆಂದು ನಿರ್ಧರಿಸಿ ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ಹೇಳಿದರು.
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದರೋಡೆ ಪ್ರಕರಣದ ವಿವರಗಳನ್ನು ತಿಳಿಸಿ ಹೊಸಪಟ್ನ ಗ್ರಾಮದ ಹೆಚ್.ಡಿ ಶಿವಕುಮಾರ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಭಂದಪಟ್ಟ ಸುಮಾರು 9 ಜನ ಅಪರಾಧಿಗಳಲ್ಲಿ 4 ಜನರನ್ನು ಬಂಧಿಸಲಾಗಿದ್ದು ಅವರು ಅಬ್ದುಲ್ ರೆಹಮಾನ್(ಜಿಯಾ)(24), ತಂದೆ ಮೊಹಮ್ಮದ್, ಲಾರಿ ಚಾಲಕನಾಗಿದ್ದು ಉಪ್ಪನಂಗಡಿ ನಿವಾಸಿ. ಮೊಹಮ್ಮದ್ ಅಲೀಫ್(28), ತಂದೆ ಉಮರಬ್ಬಿ ಗುಜರಿ ವ್ಯಾಪಾರಿ ಉಳ್ಳಾಲ ನಿವಾಸಿಯಾಗಿದ್ದಾನೆ ಇವನು ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 19 ಮನೆಗಳವು, ಕೊಲೆ, ಪ್ರಕರಣಗಳಲ್ಲಿ ಇದ್ದಾನೆ. ಮೊಹಮ್ಮದ್ ಫಯಾಸ್(28), ತಂದೆ ಅಬುಬಕ್ಕರ್ ಮೀನು ವ್ಯಾಪಾರಿಯಾಗಿದ್ದು ತೊಕ್ಕೊಟ್ಟು ನಿವಾಸಿ ಇವನ ಮೇಲೆ 13 ಕೊಲೆ, ಕಳವು ದಕಾಯಿತಿ ಪ್ರಕರಣಗಳು ಉಳ್ಳಾಲ ಠಾಣೆಯಲ್ಲಿವೆ. ಜಾಫರ್ ಸಾಧಿಕ್ (25) ತಂದೆ ಅಬ್ಬಾಸ್ ಟೈಲರ್ ಕೆಲಸ ಮಾಡುತ್ತಿದ್ದು ಹಂಪನ್ ಕಟ್ಟದ ಮಂಗಳೂರು ನಿವಾಸಿ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣದಲ್ಲಿ ಇದ್ದಾನೆ ಎಂದು ವಿವರ ನೀಡಿದರು.
ಈ ಎಲ್ಲಾ ಆರೋಪಿಗಳನ್ನು ವಿಚಾರ ಮಾಡಿದಾಗ ಇನ್ನೊಬ್ಬ ತಲೆಮರೆಸಿಕೊಂಡಿರುವ ನಿಜಾಮ್(ನಿಜ್ಜು), ಮಜೀದ್, ಸಲಿಯಾತ್(ಸಲಿತ್), ಜಲಾಲ್ ಅವರೊಂದಿಗೆ ಸೇರಿ ಇನ್ನೋವ ಕಾರನ್ನು ತಮಗೆ ಪರಿಚಯವಿರುವ ಆಲಿ ಎಂಬುವವರಿಂದ ಪಡೆದು ಮಂಗಳೂರಿನಿಂದ ಮಡಿಕೇರಿಗೆ ಬಂದು ಆಟೋ ಚಾಲಕ ಕೃಷ್ಣನನ್ನು ಭೇಟಿ ಮಾಡಿ ಎಲ್ಲರೂ ಒಟ್ಟಿಗೆ ಸೇರಿ ಸಂಚು ರೂಪಿಸಿ ಕುಶಾಲನಗರದ ಲಾಡ್ಜೊಂದರಲ್ಲಿ ತಂಗಿದರು. ಕೃಷ್ಣನ ಮಾರ್ಗದರ್ಶದಲ್ಲಿ ಕುಶಾಲನಗರದಲ್ಲಿ ಇನ್ನೋವ ಕಾರಿನಲ್ಲಿ ಹೊಸಪಟ್ನಕ್ಕೆ ಹೊರಟು ಮಾರ್ಗ ಮಧ್ಯೆ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಪೂರ್ವ ಯೋಜನೆಯಂತೆ ಶಿವಕುಮಾರ್ ಅವರ ಮನೆಯ ಬಾಗಿಲು ತೆಗೆಯುವವರೆಗೆ ಕಾಫಿ ತೋಟದಲ್ಲಿ ಕಾದು ಕುಳಿತು ಅಲೀಫ್ ಮತ್ತು ಜಲಾಲ್ ಮಂಕಿ ಕ್ಯಾಪ್ ಧರಿಸಿ ಮುಂದೆ ಹೊರಟರು ಈ ಸಂದರ್ಭದಲ್ಲಿ ಶಿವಕುಮಾರ್ ಮನೆಗೆ ಅವರ ಸೋದರ ಸಂಭಂದಿ ವಿಶ್ವನಾಥ್ ಮುಂಬಾಗಿಲಿನಿಂದ ಬೆಲ್ ಮಾಡಿ ಪ್ರವೇಶ ಮಾಡುತ್ತಾರೆ. ವಿಶ್ವನಾಥ್ ಅವರಿಗೆ ಹೂವನ್ನು ತರಲು ಹೇಳಿ ಶಿವಕುಮಾರ್ ಸ್ನಾನಕ್ಕೆ ಹೋಗುತ್ತಾರೆ ವಿಶ್ವನಾಥ್ ಹೂ ಗಿಡಗಳ ಬಳಿ ಇದ್ದಾಗ ಏಕಾ ಏಕಿ ಎಲ್ಲಾ ಆರೋಪಿಗಳು ವಿಶ್ವನಾಥ್ ಗೆ ಮಾರಕಾಸ್ತ್ರ ತೋರಿಸಿ ಅವರನ್ನು ಮನೆ ಒಳಗೆ ಎಳೆದೊಯ್ದು ಕೈಯಿಂದ ಕಾಲಿಂದ ಹಲ್ಲೆ ಮಾಡಿ ಕೈ ಕಾಲು ಕಟ್ಟಿ ಪ್ಯಾಕಿಂಗ್ ಟೇಪ್ನಿಂದ ಬಾಯಿಗೆ ಹಾಕಿ ಚಾಕುವಿನಿಂದ ಇರಿಯುತ್ತಾರೆ ಹಾಗೆಯೆ ಮುಂಬಾಗಿಲಿಗೆ ಬೀಗ ಹಾಕಿ ಮನೆ ಸುತ್ತಿ ಹಿಂಬಾಗಿಲಿನಿಂದ ಮನೆ ಪ್ರವೇಶ ಮಾಡುತ್ತಾರೆ. ಆ ಸಂಧರ್ಭಕ್ಕೆ ಸರಿಯಾಗಿ ಶಿವಕುಮಾರ್ ದೇವರ ಕೋಣೆಯಿಂದ ಹಾಲ್ ಗೆ ಬರುತ್ತಿದ್ದಂತೆ ಹಲ್ಲೆ ಮಾಡಿ ಕಾಲಿನಿಂದ ಒದ್ದು ಬಟ್ಟೆ ಹಾಗೂ ಪ್ಯಾಕಿಂಗ್ ಟೇಪ್ ನಿಂದ ಬಾಯಿಗೆ ಹಾಕಿ ಕೈಗಳನ್ನು ಕಟ್ಟಿ ಹಾಕುತ್ತಾರೆ.
ನೆರೆ ಮನೆಯ ಶಿವಕುಮಾರ್ ಸ್ನೇಹಿತ ಈಶ್ವರ್ ಬೆಂಗಳೂರಿಗೆ ಅವರೊಂದಿಗೆ ಹೋಗಲು ಮನೆ ಬಳಿ ಬಂದಾಗ ಮುಂಬಾಗಿಲ ಬೀಗ ಹಾಕಿರುವುದನ್ನು ಗಮನಿಸಿ ಅನುಮಾನಗೊಂಡು ಮನೆಯ ಸುತ್ತಿ ಹಿಂದಕ್ಕೆ ಬರುತ್ತಿದ್ದಂತೆ ಅವರ ಮೇಲೂ ದರೋಡೆಕೋರರು ಹಲ್ಲೆ ನಡೆಸುತ್ತಾರೆ. ಮನೆ ಒಳಗೆ ಲಾಕರ್, ಕಪಾಟ್ ತಡಕಾಡಿ ಚಿನ್ನಾಭರಣ ಹಾಗೂ ಹಣವನ್ನು ಕೃಷ್ಣ ಹಾಗೂ ನಿಜಾಮ್ ತಮ್ಮೊಂದಿಗೆ ತಂದಿದ್ದ(40 ಲಕ್ಷ ಬೆಲೆಬಾಳುವ ವಜ್ರ, ಚಿನ್ನಾಭರಣ, ಬೆಳ್ಳಿ ಹಾಗೂ ಚಿನ್ನದ ನಾಣ್ಯಗಳು ಹಾಗೂ ರಿವಾಲ್ವಾರ್ ತೆಗೆದುಕೊಂಡು ಶಿವಕುಮಾರ್ ರವರ ಮೇಲೆ ಮತ್ತಷ್ಟು ಹಣಕ್ಕಾಗಿ ಹಲ್ಲೆ ಮಾಡಿ, ಹೊರ ಬಂದಾಗ ಈಶ್ವರ್ ಇಲ್ಲದ್ದನ್ನು ಗಮನಿಸಿ ಜನರೊಂದಿಗೆ ಬರಬಹುದೆಂದು ಭಾವಿಸಿ ತೋಟದ ಒಳಗಡೆ ಆಭರಣದ ಬ್ಯಾಗಿನೊಂದಿಗೆ ದಿಕ್ಕಾ ಪಾಲಾಗಿ ಓಡಿದರು.
ನಂತರ ಪೋಲಿಸ್ ಠಾಣೆಗೆ ವಿಷಯ ತಿಳಿದು ಪೋಲಿಸರು ಹೊಸಪಟ್ನ, ನಂಜರಾಯಪಟ್ನ, ರಂಗಸಮುದ್ರ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶ್ವಾನ ಪತ್ತೆ ದಳ, ನಕ್ಸಲ್ ನಿಗ್ರಹ ದಳ ಎಲ್ಲರ ಪರಿಶ್ರಮದಿಂದ ಮೇಲ್ಕಂಡ ನಾಲ್ಕು ಜನರನ್ನು ಬಂಧಿಸಲಾಯಿತು ಅವರಿಂದ 42,700 ನಗದು, 4 ಚಿನ್ನದ ಉಂಗುರ, 2ಚಿನ್ನದ ಚೈನ್, 1ನೆಕ್ಲೆಸ್, 1 ಕರಿಮಣಿ ಪದಕ, 2 ಚಿನ್ನದ ಬಳೆಗಳು ಕಪ್ಪು ಮಣಿಗಳ್ಳುಳ್ಳ ಬಳೆ, 1 ರಿವಾಲ್ವರ್, 2 ಲಾಂಗ್ ಕತ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣವನ್ನು ಭೇದಿಸಿ ಕೆಲವು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೂ, ಪೋಲಿಸ್ ಅಧಿಕಾರಿಗಳಿಗೂ, ಸಿಬ್ಬಂದಿಗಳಿಗೂ ಕೊಡಗು ಜಿಲ್ಲಾ ಪೋಲೀಸ್ ಇಲಾಖಾ ವತಿಯಿಂದ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ ಎಂದು ಪೋಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಈ ಸಂಧರ್ಭದಲ್ಲಿ ಡಿವೈಎಸ್ಪಿ ಸಂಪತ್ ಕುಮಾರ್, ಸಿ ಐ ಕ್ಯಾತೇ ಗೌಡ, ಎಸ್ ಐ ಮಹೇಶ್, ಅನೂಪ್ ಮಾದಪ್ಪ, ಅಪರಾಧ ಪತ್ತೆ ದಳದ ಅಧಿಕಾರಿ ಎಂ. ಮಹೇಶ್ ಹಾಗೂ ಸಿಬ್ಬಂಧಿಗಳಾದ ಲೋಕೇಶ್, ಯೋಗೇಶ್, ರಾಜೇಶ್, ಹಮೀದ್, ಸಂಪತ್, ಸುಜಿತ್, ಅನಿಲ್,