ಮಡಿಕೇರಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂಬಂಧಿತ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಮೖತ ಗಣಪತಿ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ, ಸಹೋದರಿ ಬಬಿತಾ ಸಲ್ಲಿಸಿದ್ದ ಅಜಿ೯ಯನ್ನು ವಿಚಾರಣೆಗೆ ಸುಪ್ರಿಂಕೋಟ್೯ ಕೈಗೆತ್ತಿಕೊಂಡು ರಾಜ್ಯ ಸಕಾ೯ರಕ್ಕೆ ನೋಟೀಸ್ ನೀಡಿದೆ.
ಜೂನ್ 7 ರಂದು ಮಡಿಕೇರಿಯ ಲಾಡ್ಜ್ ನಲ್ಲಿ ಸಂಶಯಾಸ್ಪದವಾಗಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ ಮಂಗಳೂರು ಡಿವೈಎಸ್ಪಿ ಗಣಪತಿ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ವ್ಯಾಪಕ ಒತ್ತಾಯ ಕೇಳಿಬಂದಿದ್ದವು. ಗೖಹ ಸಚಿವರಾಗಿದ್ದ ಕೆ.ಜೆ.ಜಾಜ್೯ ಅವರನ್ನು ಗಣಪತಿ ಸಾವಿನ ಸಂಬಂಧಿತ ತನಿಖೆ ಮಾಡಬೇಕೆಂದು ರಾಜ್ಯವ್ಯಾಪಿ ಪ್ರತಿಭಟನೆಯೂ ನಡೆದಿತ್ತು. ರಾಜ್ಯ ಸಕಾ೯ರ ಈ ಪ್ರಕರಣವನ್ನು ಸಿಓಡಿ ತನಿಖೆಗೊಪ್ಪಿಸಿತ್ತು. ಸಚಿವ ಜಾಜ್೯ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಿಓಡಿ ಪೊಲೀಸರು ತನಿಖೆ ಕೈಗೊಂಡು ಜಾಜ್೯ಗೆ ಕ್ಲೀನ್ ಚಿಟ್ ನೀಡಿದ್ದ ಹಿನ್ನಲೆಯಲ್ಲಿ ಜಾಜ್೯ ಮತ್ತೆ ಸಂಪುಟದಲ್ಲಿ ಸಚಿವರಾದರು.
ಇದೀಗ ಗಣಪತಿ ತಂದೆ ಕುಶಾಲಪ್ಪ ಮತ್ತು ಸಹೋದರ ಮಾಚಯ್ಯ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಕೋರಿ ಸುಪ್ರಿಂಕೋಟ್೯ ಮೆಟ್ಟಿಲೇರಿದ್ದರು. ಡಿ.27 ರಂದು ಸಲ್ಲಿಸಿದ್ದ ಅಜಿ೯ಯನ್ನು ಗುರುವಾರ ವಿಚಾರಣೆಗೆ ತೆಗೆದುಕೊಂಡ ಸವೋ೯ಚ್ಚ ನ್ಯಾಯಾಲಯದ ಆದಶ್೯ ಕುಮಾರ್ ಗೋಯಲ್ ನೇತೖತ್ವದ ಪೀಠವು ಇದೀಗ ಕನಾ೯ಟಕ ಸಕಾ೯ರಕ್ಕೆ ನೋಟೀಸ್ ನೀಡಿದ್ದು, ಗಣಪತಿ ಸಾವಿನ ಪ್ರಕರಣವನ್ನ ಯಾಕೆ ಸಿಬಿಐ ತನಿಖೆಗೆ ನೀಡಬಾರದು ಎಂದು ಪ್ರಶ್ನಿಸಿದೆ. ಇದರಿಂದಾಗಿ ಗಣಪತಿ ಪ್ರಕರಣ ಮತ್ತೆ ಜೀವ ಪಡೆದಂತಾಗಿದ್ದು ಸವೋ೯ಚ್ಚ ನ್ಯಾಯಾಲಯಕ್ಕೆ ರಾಜ್ಯ ಸಕಾ೯ರ ಈ ನಿಟ್ಟಿನಲ್ಲಿ ಸ್ಪಷ್ಟ ಉತ್ತರ ನೀಡಬೇಕಾಗಿದೆ.
ಅಜಿ೯ದಾರರಾದ ಕುಶಾಲಪ್ಪ, ಮಾಚಯ್ಯ ಮತ್ತು ಸಬಿತಾ ಪರ ಸುಪ್ರಿಂಕೋಟ್೯ ವಕೀಲ ಜಯಂತ್ ಭೂಷಣ್ ವಾದ ಮಂಡಿಸುತ್ತಿದ್ದಾರೆ.