News Kannada
Tuesday, February 07 2023

ಕರ್ನಾಟಕ

ಬಂಡೀಪುರ ಉದ್ಯಾನದಲ್ಲಿ ಹೆಣ್ಣಾನೆ ಸಾವು

Photo Credit :

ಬಂಡೀಪುರ ಉದ್ಯಾನದಲ್ಲಿ ಹೆಣ್ಣಾನೆ ಸಾವು

ಮೈಸೂರು: ಅನಾರೋಗ್ಯದಿಂದ ಬಳಲಿ ಹೆಣ್ಣಾನೆಯೊಂದು ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆಡಿಯಾಲ ಅರಣ್ಯ ವಲಯದಲ್ಲಿ ನಡೆದಿದೆ.

ಸುಮಾರು 25 ವರ್ಷದ ಹೆಣ್ಣಾನೆಯ ಮೃತದೇಹ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳಿಗೆ ದೊರೆತಿದೆ. ಅವರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆದರಿಸಿ ಆರ್.ಎಫ್.ಓ ಪರಮೇಶ್ ಅವರು ವೈದ್ಯರಾದ ನಾಗರಾಜು ಮತ್ತು ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸುತ್ತಲಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದು ಕಾದಾಟದಿಂದಾಗಲೀ ಇನ್ಯಾವುದೇ ದುರಂತದಿಂದ ಸಾವನ್ನಪ್ಪದೆ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಈ ಆನೆ ಮೂರು ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಳೇಬರವನ್ನು ಸುಡಲಾಗಿದೆ.

ಹುಲಿಗೆ ಚಿಕಿತ್ಸೆ:  ಕಾಡೆಮ್ಮೆಯೊಂದಿಗೆ ಕಾದಾಡಿ ಗಾಯಗೊಂಡು ಬಳಲುತ್ತಿದ್ದ ಹುಲಿಯೊಂದಕ್ಕೆ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೊಳೆಯೂರು ಅರಣ್ಯ ವಲಯದ ಎಂ.ಸಿ. ತಳಲು ಬೀಟಿನ ನುಗು ಜಲಾಶಯದ ಹಿನ್ನೀರಿನಲ್ಲಿ ಕಾಡೆಮ್ಮೆಯೊಂದಿಗೆ ಕಾದಾಡಿ ಗಾಯಗೊಂಡು ಏಳು ವರ್ಷದ ಗಂಡು ಹುಲಿ ನೋವಿನಿಂದ ಒದ್ದಾಡುತ್ತಿತ್ತು.

ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಆರ್.ಎಫ್.ಓ ಹರೀಶ್ ಅವರು ಮೇಲಾಧಿಕಾರಿ ಎಸಿಎಫ್ ಪರಮೇಶ್ ಅವರಿಗೆ ಮಾಹಿತಿ ನೀಡಿದ್ದರು. ಆ ನಂತರ ವೈದ್ಯರಾದ ಡಾ. ನಾಗರಾಜು, ಆರ್.ಎಫ್.ಓ ಸಂದೀಪ್ ಮತ್ತು ಸಿಬ್ಬಂದಿ ತೆರಳಿ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದು ಪರೀಕ್ಷಿಸಿದಾಗ ಮುಂದಿನ ಬಲಗಾಲಿನ ಮೂಳೆ ಮುರಿರುವುದು ಕಂಡು ಬಂದಿತ್ತು. ಹೀಗಾಗಿ ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮೈಸೂರಿನಲ್ಲಿ ಸೂಕ್ತ ಚಿಕಿತ್ಸೆ ನೀಡಿದ ನಂತರ ಬನ್ನೇರುಘಟ್ಟಕ್ಕೆ ಬಿಡುವ ಚಿಂತನೆ ನಡೆದಿದೆ.

See also  ಮತ್ತೊಮ್ಮೆ ಅಮೇರಿಕಾದಿಂದ ಭಾರತಕ್ಕೆ ಬೆಂಬಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು