ಚಿಕ್ಕಮಗಳೂರು: ಸತ್ತ ಹೆಣ ಯಾವತ್ತಿದ್ರೂ ಸ್ಮಶಾನಕ್ಕೆ ಅನ್ನೋ ಗಾದೆ ಇದೆ. ಆದರೆ ನಾವೀಗ ಹೇಳ ಹೊರಟಿರೋ ಸ್ಟೋರಿ ಹೆಣವನ್ನು ಹೂಳದೆ ಸುಡಲೂ ಆಗದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಪೂರ್ವಜರ ಕಾಲದಿಂದ ಇದ್ದ ಸ್ಮಶಾನವನ್ನು ಆಟದ ಮೈದಾನ ಮಾಡಲು ಮುಂದಾಗಿರೋ ಕಥೆ ಇದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿರೋ ಜನ, ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರೋ ಮಹಿಳೆಯರು. ನ್ಯಾಯಾ ಬೇಕು ಅಂತ ಆಕ್ರೋಷ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು. ಎಸ್.. ಈಗೇ ಶವವನ್ನು ಮುಂದಿಟ್ಟಿಕೊಂಡು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸುತ್ತಿರೊ ಇವರೆಲ್ಲ ಚಿಕ್ಕಮಗಳೂರು ತಾಲೂಕಿನ ಗಡಬನಹಳ್ಳಿ ಗ್ರಾಮದವರು.
ಏನಪ್ಪ ಇವರೆಲ್ಲಾ ಶವವಿಟ್ಕೊಂಡು ಪ್ರತಿಭಟನೆ ನಡೆಸುತ್ತಿದ್ದಾರಲ್ಲ ಅಂದಕೊಂಡ್ರ? ಅಂದಹಾಗೆ ಇವೆರೆಲ್ಲಾ ದಲಿತ ಕುಟುಂಬಕ್ಕೆ ಸೇರಿರುವವರು. ಊರಿನ ಅನ್ಯ ವರ್ಗದ ಜನ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತೆ. ತಮ್ಮ ಪೂರ್ವಜರ ಕಾಲದಿಂದ ಇದ್ದ ಒಂದೇ ಒಂದು ಸ್ಮಶಾನವನ್ನು ಆಟದ ಮೈದಾನ ಪಾಲಾಗುವ ವಿಷಯ ತಿಳಿದು ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೇ ಗ್ರಾಮದ ಮೃತ ಹುಚ್ಚಮ್ಮ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ ಕಳೆದ ತಿಂಗಳಷ್ಟೇ ಗಡಬನಹಳ್ಳಿಯ ಗ್ರಾಮಪಂಚಾಯ್ತಿ ಸದಸ್ಯೆ ಮೃತಪಟ್ಟಾಗಲು ಶವಸಂಸ್ಕಾರ ಅವಕಾಶ ನೀಡದ ಕಾರಣ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿಲಾಗಿತ್ತು.
ಆ ವೇಳೆ ಜಿಲ್ಲಾಧಿಕಾರಿ ಸತ್ಯಾವತಿ ಅವರು ಸಮಸ್ಯೆಯನ್ನ ಬಗೆಹರಿಸಿ ಮೃತದೇಹವನ್ನ ಶವಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿದ್ರು. ಆದ್ರೀಗ ಗ್ರಾಮದ ಶಂಕರೇಗೌಡ ಹಾಗೂ ತಂಡದವರು ಸಶ್ಮಾನ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದಾರೆ ಅಂತ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಈಗೀರುವ ಸ್ಮಶಾನ ಜಾಗದಲ್ಲೆ ದಾಖಲೆಯ ಪ್ರಕಾರ ಪೂರ್ವಜರಿಂದ ಶವಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ… ಗಡಬನಹಳ್ಳಿಯ ಸರ್ವೆ ನಂ 350 ಕ್ಕೆ 2 ಎಕರೆ 36 ಗುಂಟೆ ಜಾಗದಲ್ಲಿ ದಲಿತ ಕುಟಂಬಗಳು ಮೃತದೇಹಗಳನ್ನ ಮಣ್ಣು ಮಾಡುತ್ತಿದಾರೆ. ಆದ್ರೇ ಅನ್ಯ ವರ್ಗದ ಜನ ವಿರೋಧ ಮಾಡಿದ್ದು ಅದೇ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಗ್ರಾಮದ ದಲಿತ ಕುಟುಂಬದವರು ಈಗೆ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ತಮ್ಮ ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಗ್ರಾಮದಲ್ಲಿ 400 ದಲಿತ ಕುಟುಂಬಗಳಿದ್ದು. ಅದೇ ಊರಿನಲ್ಲಿ 4 ಎಕರೆ ಸಶ್ಮಾನ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಸೂಚನೆ ನೀಡಿದ್ದಾರೆ. ಆದ್ರೂ ಸಹ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುವ ಬದಲು ಪೂವರ್ಜರಿಂದ ಬಂದ ಜಾಗವನ್ನ ನಮಗೆ ಬಿಟ್ಟುಕೊಡಬೇಕೆಂದು ಆಗ್ರಹಿಸುತ್ತಿದಾರೆ.
ಒಟ್ಟಾರೆಯಾಗಿ ದಾಖಲೆಗಳ ಪ್ರಕಾರ ದಲಿತರ ಕುಟುಂಬಳಿಗೆ ಜಾಗ ಸೇರಬೇಕು ಅನ್ನೋದು ಇವೆರೆಲ್ಲರ ಆಕ್ರೋಷ…ಸಶ್ಮಾನ ಜಾಗದಲ್ಲಿ ಶವಸಂಸ್ಕಾರಕ್ಕೂ ಅವಕಾಶ ಮಾಡಿಕೊಡದೇ ಇರೋದು ದುರಂತವೇ ಸರಿ, ಸತ್ತ ದೇಹ ಸ್ಮಶಾನದ ಪಾಲಾಗಬೇಕು ಆದ್ರೇ ಈ ರೀತಿ ಬೀದಿಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿರೋದಕ್ಕೆ ಅದೇನ್ ಹೇಳ್ಬೇಕೊ… ಇನಾದ್ರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟೂ ಬೇಗ ಸಮಸ್ಯೆ ಬಗೆಹರಿಸಲಿ ಅನ್ನೋದೆ ನಮ್ಮ ಆಶಯ ಕೂಡ.