News Kannada
Tuesday, November 29 2022

ಕರ್ನಾಟಕ

ಪುಂಡರಿಂದ ಶಾಲೆಯಲ್ಲೇ ಪಾನಗೋಷ್ಠಿ - 1 min read

Photo Credit :

ಪುಂಡರಿಂದ ಶಾಲೆಯಲ್ಲೇ ಪಾನಗೋಷ್ಠಿ

ಮಡಿಕೇರಿ: ಕೆಲವು ಪುಂಡಪೋಕರಿಗಳು ಮದ್ಯಪಾನ, ಧೂಮಪಾನ ಸೇವನೆಗಾಗಿ ರಾತ್ರಿ ಹೊತ್ತು ಸರಕಾರಿ ಶಾಲೆಯನ್ನು ಬಳಸಿಕೊಂಡು ಇಡೀ ವಾತಾವರಣವನ್ನೇ ಗಬ್ಬೆಬ್ಬಿಸುತ್ತಿರುವ ಘಟನೆ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದ್ದು, ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಹೆಚ್ಚಿನ ಊರುಗಳಲ್ಲಿ ಇಂತಹ ಪುಂಡರಿರುತ್ತಾರೆ ಇವರು ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳನ್ನೇ ಗುರಿಯಾಗಿಸಿಕೊಂಡು ರಾತ್ರಿಯಾಯಿತೆಂದರೆ ಅಲ್ಲಿ ಜಮಾಯಿಸಿ ಮದ್ಯ, ಸಿಗರೇಟ್ ಸೇವಿಸುತ್ತಾ ಪಾರ್ಟಿ ಮಾಡಿ ಇಡೀ ವಾತಾವರಣವನ್ನೇ ಗಲೀಜು ಮಾಡಿ ಹೋಗುತ್ತಾರೆ. ಮಾರನೆಯ ದಿನ ಶಾಲಾ ಮಕ್ಕಳು ಮದ್ಯದ ಬಾಟಲಿ, ಸಿಗರೇಟ್ ತುಂಡುಗಳನ್ನು ತೆಗೆದು ಸ್ವಚ್ಛಗೊಳಿಸಬೇಕಾಗುತ್ತದೆ. ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತದೆಯಾದರೂ ಕೆಲವೇ ಕೆಲವು ಮಾತ್ರ ಹೊರ ಬರುತ್ತದೆ.

ಮೊನ್ನೆ ಜನವರಿ 26ರಂದು ಇಡೀ ದೇಶ ಪ್ರಜಾಪ್ರಭುತ್ವ ಸಂಭ್ರಮಾಚರಣೆಯಲ್ಲಿದ್ದರೆ, ಸುಂಟಿಕೊಪ್ಪದಲ್ಲಿ ಪುಂಡ ಪೋಕರಿಗಳು ದೇವಾಲಯದಂತಿರುವ ಶಾಲೆಯಲ್ಲೇ ಮದ್ಯ ಸೇವಿಸಿ ಅಕ್ರಮ ಪಾರ್ಟಿ ಮಾಡಿದ್ದಲ್ಲದೆ, ಹೆಂಡದ ಅಮಲಿನಲ್ಲಿ ಶಾಲೆಯ ಕೊಠಡಿಯ ಬಾಗಿಲು ಕಿಟಿಕಿ ಮೇಲೆ ಹೊಡೆದು ಗಾಜನ್ನು ಪುಡಿ ಮಾಡಿ ವಿಕೃತ ಮಜಾ ಉಡಾಯಿಸಿದ್ದಾರೆ.  ಒಂದು ಕಡೆ ಸುಂಟಿಕೊಪ್ಪ ಆಟೋ ರಿಕ್ಷಾ  ಮತ್ತು ಚಾಲಕರ ಸಂಘದಿಂದ ಗಣರಾಜ್ಯೋತ್ಸವದ ಅಂಗವಾಗಿ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ರಾತ್ರಿ ವೇಳೆ ಅದ್ದೂರಿಯ ಡ್ಯಾನ್ಸ್ ಮೇಳ ನಡೆಯುತ್ತಿತ್ತು. ಮತ್ತೊಂದೆಡೆ ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಉಲುಗುಲಿ ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ನಿರ್ಜನ ಪ್ರದೇಶಕ್ಕೆ ದಾಳಿಯಿಟ್ಟು ಕಟ್ಟಡದ ಕಿಟಕಿ ಗಾಜುಗಳನ್ನು ನಾಶಪಡಿಸಿ ಅಲ್ಲೇ ಮದ್ಯ ಸೇವನೆ ಮಾಡಿ, ಬಾಟಲಿ, ಉಪ್ಪಿನಕಾಯಿಯನ್ನೆಲ್ಲ ಅಲ್ಲೇ ಎಸೆದು ಅನಾಗರಿಕರಂತೆ ವರ್ತಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಕೆಆರ್ ಎಸ್ ಹಿನ್ನೀರಲ್ಲಿ ಹೆಲಿ ರೇಡ್- ಬೋಟಿಂಗ್ ಆರಂಭ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು