ಚಿಕ್ಕಮಗಳೂರು: ಹೇಳಿ ಕೇಳಿ ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಅಂತಾನೆ ಫೇಮಸ್ ಆಗಿದೆ. ವಿಚಿತ್ರ ಅಂದ್ರೇ ಚಿಕ್ಕಮಗಳೂರು ಜಿಲ್ಲೆ ಬಾಲ ಕಾಮಿರ್ಕರಿಗೂ ಅಷ್ಟೇ ಫೇಮಸ್ ಆಗಿದೆ. ಜಿಲ್ಲೆಯಲ್ಲಿ ಸಾವಿರಾರು ಕೋಟಿ ಒಡೆಯರಿದ್ದಾರೆ. ಜೊತೆಗೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಜಿಲ್ಲೆಯಲ್ಲಿದೆ.
ಬಡತನದಿಂದ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರಿಂದ ಕೂಲಿ ಅರಸಿಕೊಂಡು ಕೆಲಸಕ್ಕೆ ಬೇರೆ ಬೇರೆ ಭಾಗದಿಂದ ಬರುತ್ತಿದ್ದಾರೆ. ಹೀಗೇ ಬಂದಿದ್ದ 13 ವರ್ಷದ ಬಾಲಕಾರ್ಮಿಕ ಹುಡುಗಿ ಒಬ್ಬಳು ಅನುಮಾಸ್ಪದವಾಗಿ ಸಾವನಪ್ಪಿದ್ದಾಳೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು, ಹಾಸಿಗೆ ಮೇಲೆ ಸತ್ತು ಮಲಗಿರುವ ಬಾಲಕಿ. ಮೂಗಿನಲ್ಲಿ ರಕ್ತ ಸುರಿಯುತ್ತಿರುವ ದೃಶ್ಯಗಳು. ತಲೆ ಮೇಲೆ ಕೈ ಹೊತ್ತು ದಿಕ್ಕುತೋಚದೆ ಯೋಚಿಸುತ್ತಿರುವ ಸಂಬಂಧಿಕರು. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಅಂತಾಲೆ ಫೇಮಸ್ ಆಗಿರುವ ಜಿಲ್ಲೆ. ಇಲ್ಲಿನ ಮೂಕ ಕೃಷಿ ಕಾಫಿ ಬೆಳೆ. ಇನ್ನು ಇಲ್ಲಿನ ಕಫಿ ಎಸ್ಟೇಟ್ ಮಾಲೀಕರು ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಅದೇ ರೀತಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಜನರು ಎಸ್ಟೇಟ್ ಗಳಲ್ಲಿ ಕೆಲಸ ಮಾಡ್ತಿದಾರೆ.
ಆಶ್ಚರ್ಯ ಅಂದ್ರೇ ಶಾಲೆಗೆ ಹೋಗಬೇಕಾದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾಫಿ ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೂಲಿ ಅರಸಿಕೊಂಡು ಬೇರೆ ಬೇರೆ ಭಾಗದಿಂದ ತಮ್ಮ ಪೋಷಕರೊಟ್ಟಿಗೆ ಕಾಫಿ ಕೀಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಭಾಗದ ಸಂಸಾರವೊಂದು ಚಿಕ್ಕಮಗಳೂರು ಜಿಲ್ಲೆ ಕಳಸ ವ್ಯಾಪ್ತಿಗೆ ಸೇರುವ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡ್ತಿದ್ರು. ವೆಂಕಟೇಶ್ ಎಂಬುವವರಿಗೆ ಸೇರಿದ ಎಸ್ಟೇಟ್ ನಲ್ಲಿ ಕೆಲಸ ಮಾಡ್ತಿದ್ರು. ತೋಟದಲ್ಲಿ ಕೆಲಸ ಮಾಡುತ್ತಿದ್ದ 13 ವರ್ಷದ ವನಜಾಕ್ಷಿ ಅನುಮಾನಸ್ಪದವಾಗಿ ಸಾವನಪ್ಪಿದ್ದಾಳೆ.
ಬಾಲಕಿಯ ಮೂಗಿನಲ್ಲಿ ರಕ್ತ ಸುರಿದಿದೆ ಬಾಯಿಂದ ನೊರೆ ಸಹ ಬಂದಿದೆ. ಇನ್ನು ಬಾಲಕಾರ್ಮಿಕರಿಂದ ಬೆಳಿಗ್ಗೆಯಿಂದ ಸಂಜೆಯರೆಗೂ ಕೆಲಸ ಮಾಡಿಸಿಕೊಳ್ಳುವ ಕಾಫಿ ಎಸ್ಟೇಟ್ ಮಾಲೀಕರು ನೀಡೋದು 100 ರೂಪಾಯಿ. ಇನ್ನು ಕೆಲ ಎಸ್ಟೇಟ್ ಮಾಲೀಕರು ಶಾಲಾ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬಂದು ತಮ್ಮ ತಮ್ಮ ಗ್ರಾಮಗಳಿಗೆ ಬಿಟ್ಟು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಅಪಾರ ಮಕ್ಕಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗ್ತಾ ಇದ್ರು ಬಾಲಕಾರ್ಮಿಕ ಇಲಾಖೆಯಾಗಲಿ, ಶಿಕ್ಷಣ ಇಲಾಖೆಯಾಗಿ ಇಲ್ಲಾ ಜಿಲ್ಲಾಢಳಿತವಾಗಲಿ ಇದುವರೆಗೂ ತಲೆಕೆಡಿಸಿಕೊಂಡಿರುವಂತೆ ಕಾಣುತ್ತಿಲ್ಲ.
ಇಂತಹ ಮಕ್ಕಳನ್ನು ಗುರುತಿಸಿ ಬಾಲ ಕಾರ್ಮಿಕ ಇಲಾಖೆಯವರು ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿಲ್ಲ. ಆದ್ರೀಗ ಇವರೆಲ್ಲ ಮಾಡುವ ತಪ್ಪಿನಿಂದ ಇನ್ನು ಆಡಿ ಬೆಳೆಯಬೇಕಾಗಿದ್ದ 13 ವರ್ಷದ ಬಾಲಕಿ ಸಾವನಪ್ಪಿರೋದು ದುರಂತವೇ ಸರಿ. ಕಾಫಿ ತೋಟದಲ್ಲಿ ಗಿಡಗಳಿಗೆ ಔಷಧಿ ಸಿಂಪಡಿಸುವ ವೇಳೆ ಘಟನೆ ನಡೆದಿದೆ ಅಂತ ಹೇಳಲಾಗುತ್ತಿದೆ. ಆದ್ರೇ ಕೇವಲ ಔಷಧಿ ಸಿಂಪಡಿಸಿದ್ರೆ ಮಾತ್ರ ಈ ರೀತಿ ಸಾವನಪ್ಪುತ್ತಾರ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಒಟ್ಟಾರೆಯಾಗಿ ಏನೂ ಅರಿಯದ ಮುಗ್ದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ತಮ್ಮ ಪೋಷಕರ ಹಿತಕ್ಕಾಗಿ ಶಾಲೆ ಬಿಟ್ಟು ಕೂಲಿ ಮಾಡ್ಕೊಂಡಿದ್ದ ಬಾಲಕಿ ಸಾವನಪ್ಪಿದಾಳೆ. ಇನ್ನು ಮುಂದಾದರೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಯೋಜನೆಗಳನ್ನು ಬಳಸಿಕೊಂಡು, ಈ ರೀತಿ ಮಕ್ಕಳನ್ನು ಬಳಸಿಕೊಳ್ಳುವವರಿಗೆ ಸರಿಯಾದ ಶಿಕ್ಷೆ ಆಗಬೇಕಿದೆ. ಸರಿಯಾದ ತನಿಖೆ ನಡೆಸಿದರೆ ಮಾತ್ರ ಬಾಲಕಿ ಸಾವಿಗೆ ನಿಜವಾದ ಕಾರಣಗಳು ಸತ್ಯಾಸತ್ಯತೆಗಳು ಹೊರ ಬರಲಿದೆ…