ಚಿಕ್ಕಮಗಳೂರು: ಆಕೆಗಿನ್ನು 13 ವರ್ಷ ಚಿಕ್ಕ ವಯಸ್ಸಿನಲ್ಲೆ ತಂದೆ ತಾಯಿ ಕಳೆದುಕೊಂಡ ನತದೃಷ್ಟೆ.ಅಬ್ಬಾ ಅಂತೂ ಇಂತೂ ನನ್ನನೂ ಸಾಕುವವರು ಸಿಕ್ರೂ ಅಂತ ಖುಷಿ ಪಟ್ಟಿದ್ಲೂ ,ಆದ್ರೇತನ್ನನ್ನು ಸಾಕುತ್ತಾರೆಂದು ನಂಬಿದವರಿಂದಲೇ ಮುಗ್ಧ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿ ನಾಲ್ಕು ತಿಂಗಳ ಗರ್ಭೀಣಿಯಾಗಿದ್ದಾಳೆ.
ಹುಟ್ಟಿನಿಂದ ಸಾಕಿ ಸಲಹಿದವನು ಅಂತ ಹೇಳಿಕೊಳ್ಳುವ ಅವಳ ಸಾಕು ತಂದೆ ಅತ್ಯಾಚಾರವೆಸಗದ್ದಾನೆ. ಹುಟ್ಟಿನಿಂದಲೇ ಸಾಕಿ ಸಲಹಿದವನು ಆಕೆಯ ಬಾಲ್ಯಾವಸ್ಥೆಯಲ್ಲೇ ಅತ್ಯಾಚಾರವೆಸಗಿದ್ದಾನೆ. ಸಾಕು ಮಗಳ ಮೇಲೆ ತಂದೆ 59 ವರ್ಷದ ಕೃಷ್ಣಪ್ಪ ನಿರಂತರವಾಗಿ ಅತ್ಯಾಚಾರ ಮಾಡಿದ ಹಿನ್ನಲೆ ಆಕೆ 4 ತಿಂಗಳ ಗರ್ಭಾವತಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಬಸ್ರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಇನ್ನು ಬಾಲಕಿಗೆ ಅತ್ಯಾಚಾರ ನಡೆದಿರುವ ಕುರಿತು ಯಾರಿಗೆ ಹೇಳದಿರಲು ಸಾಕು ತಂದೆ ಕೃಷ್ಣಪ್ಪ ಬೆದರಿಕೆ ಒಡ್ಡಿದನ್ನು.ನಾಲ್ಕು ತಿಂಗಳ ಗರ್ಭಿಣಿಯಾದ ಆ ಬಾಲಕಿ 7ನೇ ತರಗತಿ ಮುಗಿಸುವುದರೊಳಗೆ ತಾಯಿಯಾಗುವ ದೌರ್ಭಾಗ್ಯ ಅನುಭವಿಸಿದ್ದಾಳೆ. ಚಿಕ್ಕಂದಿನಲ್ಲಿ ತನ್ನ ತಂದೆ ತಾಯಿ ಯಾರೆಂಬುದು ಆಕೆಗೆ ಗೊತ್ತಿರಲಿಲ್ಲ. ಇತ್ತೀಚಿಗೆ ತನ್ನ ತಾಯಿ ತಂದೆ ಯಾರೆಂಬುದು ಆಕೆಗೆ ಗೊತ್ತಿತ್ತು. ಸಂತ್ರಸ್ತ ಬಾಲಕಿಯ ತಾಯಿಯ ಸಂಬಂಧಿಗಳಾದ, ಕೂಲಿ ಕೆಲಸ ಮಾಡುವ ಕೃಷ್ಣಪ್ಪ ಮತ್ತು ಶಾಂತ ದಂಪತಿ ಹಸುಗೂಸನ್ನು ತಂದು ಸಾಕಿದ್ದರು. ಆದ್ರೇ ಕಾಲಕ್ರಮೇಣ ಸಾಕುತಾಯಿ ಶಾಂತ ಅನಾರೋಗ್ಯದಿಂದ ಕಣ್ಣು ಕಾಣುತ್ತಿರಲಿಲ್ಲ. ಕುಡುಕನಾದರೂ ಸಾಕು ತಂದೆ ತನ್ನನ್ನು ಕಾಮತೃಷೆಗೆ ಬಳಸಿಕೊಳ್ಳುವ ಅರಿವಿಲ್ಲದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದಾಳೆ. ಇನ್ನು ಅತ್ಯಾಚಾರ ಆರೋಪದಡಿ ಬಂಧಿತನಾಗಿರುವ ಕೃಷ್ಣಪ್ಪ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.
ಬಾಲಕಿ 6 ನೇ ತರಗತಿಯಲ್ಲಿದಾಗ ಮಂಗಳೂರು ಮೂಲದವರಿಂದ ಹಣ ಪಡೆದು ಆಕೆಯನ್ನು ಮನೆಕೆಲಸಕ್ಕೆ ಬಿಟ್ಟಿದ್ದ. ಶಿಕ್ಷಕರು, ಪೊಲೀಸರ ನೆರವಿನಿಂದ ಆಕೆ ಪುನಃ ಶಾಲೆಗೆ ಸೇರಿದ್ದಳು. ಮಗಳ ಭವಿಷ್ಯದ ಹಿತದೃಷ್ಟಿಯಿಂದ ಕೃಷ್ಣಪ್ಪನಿಗೆ ಎಚ್ಚರಿಕೆ ನೀಡಿ ಪೊಲೀಸರು ಸಹ ಕಳುಹಿಸಿಕೊಟ್ಟಿದ್ರು. ಆದ್ರೆ ಕಾಡಂಚಿನಲ್ಲಿರುವ ತನ್ನ ಮನೆಯಲ್ಲೇ ದನ ಕಡಿದು ಮಾರಾಟ ಮಾಡುವಾಗ ಪುನಃ ಸಿಕ್ಕಬಿದ್ದಿದ್ದ. ದನ ಕಡಿಯುವ ದಂಧೆಗೆ ಸಹಕರಿಸುತ್ತಿದ್ದ ಮತ್ತೊಬ್ಬ ವ್ಯಕ್ತಿ ಕೂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಂತ ಹೇಳಲಾಗುತ್ತಿದೆ. ಬಾಲಕಿಯನ್ನು ಕೆಲವರು ಹಾಸ್ಟೆಲ್ ಗೆ ಸೇರಿಸುವ ಪ್ರಯತ್ನ ಮಾಡಿದ್ರೂ ಸಹ ಆಕೆ ಒಪ್ಪುತ್ತಿರಲಿಲ್ಲ. ಸಾಕು ತಂದೆಯ ಮೇಲೆ ಬಾಲಕಿ ಇಟ್ಟಿದ್ದ ನಂಬಿಕೆಯೇ ಆಕೆಗೆ ಮುಳುವಾಗಿದೆ. ಸಾಕು ತಂದೆಯಿಂದಲೇ ಬಾಲಕಿ ಗರ್ಭಿಣಿಯಾಗಿರುವ ಪ್ರಕರಣ ಪಟ್ಟಣದಲ್ಲಿ ಬಾಯಿಂದ ಬಾಯಿಗೆ ಹರಿದಾಡುತ್ತಿತ್ತು. ಗ್ರಾಮಸ್ಥರು ನಮಗ್ಯಾಕೆ ಬೇಕು ಉಸಾಬರಿ ಅಂತ ಸುಮ್ಮನಾಗಿದ್ರು.
ಆದ್ರೆ ಸಂಘಟನೆಯೊಂದು ಆರೋಪಿ ಕೃಷ್ಣಪ್ಪನನ್ನು ಹಿಡಿದು ಜಯಪುರ ಠಾಣೆಗೆ ಒಪ್ಪಿಸಿದ್ದಾರೆ. ಒಟ್ಟಾರೆಯಾಗಿ ನಂಬಿಕೆ ಮೇಲೆ ಬದುಕುತ್ತಿದ್ದು ಬಾಲಕಿ ಪರಿಸ್ಥಿತಿ ಈ ಹಂತಕ್ಕೆ ಬಂದು ನಿಂತಿದೆ. ಪೊಲೀಸರು ಮತ್ತು ಮಹಿಳಾ ಸಾಂತ್ವಾನ ಕೇಂದ್ರದ ನೆರವಿನಲ್ಲಿ ಬಾಲಕಿ ಸಾಂತ್ವನ ಕೇಂದ್ರ ವೊಂದರಲ್ಲಿ ಆಶ್ರಯ ಪಡೆಯುತ್ತಿದ್ದು, ಇತ್ತ ಸಾಕು ತಂದೆ ಕೃಷ್ಣಪ್ಪ ವಿರುದ್ಧ ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಕುರುಡಿಯಾಗಿರುವ ಸಾಕು ತಾಯಿ ಗುಡಿಸಲಲ್ಲಿ ಒಂಟಿಯಾಗಿದ್ದು ಬದುಕಿನ ಬಂಡಿ ಸಾಗಿಸಲಾಗದೆ ನರಳುತ್ತಿದ್ದಾಳೆ.