ಮಡಿಕೇರಿ: ರಾಯಲ್ ಬ್ರದರ್ಸ್ ಬೈಕ್ ರೆಂಟಲ್ ಸರ್ವೀಸ್ ಗೆ ನಗರದ ರೇಸ್ಕೋರ್ಸ್ ರಸ್ತೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ನಗರಸಭೆಯ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಚಾಲನೆ ನೀಡಿದರು.
ಈ ಸಂದರ್ಭ ರಾಯಲ್ ಬ್ರದರ್ಸ್ ಕಚೇರಿಯಲ್ಲಿ ಮಾತನಾಡಿದ ಸಂಸ್ಥೆಯ ಮಡಿಕೇರಿ ಶಾಖೆಯ ವ್ಯವಸ್ಥಾಪಕ ಕೋಚನ ಭವನ್ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಬಾಡಿಗೆ ಬೈಕ್ ಗಳ ಸೇವೆಗೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ಮತ್ತೊಂದೆಡೆ ಬಾಡಿಗೆ ಬೈಕ್ ಸೇವೆಯನ್ನು ವಿರೋಧಿಸಿ ರಾಜಾಸೀಟು ಬಳಿ ಪ್ರತಿಭಟನೆ ನಡೆಸಲು ಆಗಮಿಸಿದ್ದ ಆಟೋಚಾಲಕರು ಬೈಕ್ ರೋಡ್ ಶೋ ನಡೆಯದ ಕಾರಣ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿ ಮರಳಿದರು.