News Kannada
Monday, February 06 2023

ಕರ್ನಾಟಕ

ಮಂಡ್ಯದ ಕಿಕ್ಕೇರಿ ವ್ಯಾಪ್ತಿಯಲ್ಲಿ ಚಿರತೆ ಭಯ!

Photo Credit :

ಮಂಡ್ಯದ ಕಿಕ್ಕೇರಿ ವ್ಯಾಪ್ತಿಯಲ್ಲಿ ಚಿರತೆ ಭಯ!

ಮಂಡ್ಯ: ಜಿಲ್ಲೆಯ ಕಿಕ್ಕೇರಿ ಹೋಬಳಿಯ ಡಾಣನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಚಿರತೆಯೊಂದು ಗ್ರಾಮಸ್ಥರನ್ನು ಕಾಡುತ್ತಿದೆ. ಯಾವಾಗ ಯಾರ ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳನ್ನು ಬಲಿ ಪಡೆಯುತ್ತದೆಯೋ ಎಂಬ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಈಗಾಗಲೇ ಡಾಣನಹಳ್ಳಿ ಗ್ರಾಮದ ಕೋಟಹಳ್ಳಿ ನಂಜೇಗೌಡ  ಎಂಬುವರ ಫಾರಂ ಹೌಸ್ಗೆ ನುಗ್ಗಿದ ಚಿರತೆ  ಮನೆಯ ಮುಂದಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹೋರಿಯ ಮೇಲೆ ದಾಳಿ ಮಾಡಿ ಸಾಯಿಸಿ ಬಳಿಕ ಅಲ್ಲಿಂದ ಬೇರೆಡೆಗೆ ಎಳೆದೊಯ್ದು ಒಂದಷ್ಟು ಭಾಗವನ್ನು ತಿಂದು ಹಾಕಿದೆ. ಈ ನಡುವೆ ಜನರ ಸದ್ದು ಕೇಳಿ ದೇಹವನ್ನು ಬಿಟ್ಟು ಚಿರತೆ ಓಡಿಹೋಗಿದೆ ಎನ್ನಲಾಗಿದೆ. ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮದ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಹೊರಗೆ ಹೋದರೆ ಚಿರತೆ ಎಲ್ಲಿ ಎರಗಿ ಬಿಡುತ್ತದೆಯೋ ಎಂಬ ಭಯದಿಂದ ಜನ ಕತ್ತಲಾದರೆ ಹೊರಗೆ ಹೋಗಲು ಭಯಪಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ಬರುವ ಚಿರತೆ ಸಾಕು ನಾಯಿ, ಬೀದಿನಾಯಿ, ಜಾನುವಾರುಗಳನ್ನು ತಿಂದು ಹೋಗುತ್ತಿದೆ.

ಚಿರತೆ ಓಡಾಡುತ್ತಿರುವ ವಿಷಯ ತಿಳಿದ ಬಳಿಕವಂತು ಹಗಲು ವೇಳೆಯಲ್ಲಿಯೇ ದನಗಳನ್ನು ಮೇಯಿಸಲು, ಹೊಲಗದ್ದೆಗಳಿಗೆ ಹೋಗಲು ಭಯಪಡುವಂತಾಗಿದೆ. ಗ್ರಾಮದ ಸುತ್ತ ಕುರುಚಲು, ಗುಡ್ಡಗಾಡು ಇರುವುದರಿಂದ ಇಲ್ಲಿ ಆಶ್ರಯ ಪಡೆದಿರುವ ಚಿರತೆ ಅದ್ಯಾವಾಗ ನಾಡಿನತ್ತ ಬರುತ್ತದೆ ಎಂಬುದೇ ಗೊತ್ತಾಗದಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

See also  ಚಾಮರಾಜನಗರದಲ್ಲಿ ಆಕರ್ಷಿಸಿದ ಕೆಸರುಗದ್ದೆ ಓಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು