ಚಾಮರಾಜನಗರ: ತೆರಕಣಾಂಬಿ ಸಂತೆಯಲ್ಲಿ ಖರೀದಿಸಿದ ಎಳೆಯ ಕರುಗಳನ್ನು ತಮಿಳುನಾಡಿನ ಕಸಾಯಿಖಾನೆಗೆ ಸಾಗಾಣೆ ಮಾಡುತ್ತಿದ್ದ ಸರಕು ಸಾಗಣೆ ವಾಹನ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು 4 ಕರುಗಳನ್ನು ರಕ್ಷಿಸಿದ್ದಾರೆ.
ಎಳೆಯ ಕರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಸರಕು ಸಾಗಣೆ ವಾಹನದಲ್ಲಿ ಮುಚ್ಚ್ಚಿಕೊಂಡು ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತೆರಕಣಾಂಬಿ ಠಾಣೆಯ ಪೊಲೀಸರು ಗ್ರಾಮದ ಮುರಾರ್ಜಿ ವಸತಿ ಶಾಲೆಯ ಬಳಿ ವಾಹನವನ್ನು ತಪಾಸಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ 4 ಎಳೆಯ ಕರುಗಳನ್ನು ಸಾಗಣೆ ಮಾಡುತ್ತಿರುವುದು ಕಂಡು ಬಂದಿತ್ತು. ಚಾಲಕನನ್ನು ಪಾಷಾ ಎಂಬಾತನನ್ನು ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ತಾನು ತಾಳವಾಡಿಯ ಕಸಾಯಿಖಾನೆಗೆ ಸಾಗಣೆ ಮಾಡುತ್ತಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ರಕ್ಷಿಸಿದ ಕರುಗಳನ್ನು ಮೈಸೂರಿನ ಪಿಂಜರಾಪೋಲಿಗೆ ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ.