News Kannada
Monday, October 03 2022

ಕರ್ನಾಟಕ

ಕೈ ಮುಖಂಡ ಕಾಗಲವಾಡಿ ಶಿವಣ್ಣ ಕಮಲ ತೆಕ್ಕೆಗೆ! - 1 min read

Photo Credit :

ಕೈ ಮುಖಂಡ ಕಾಗಲವಾಡಿ ಶಿವಣ್ಣ ಕಮಲ ತೆಕ್ಕೆಗೆ!

ಚಾಮರಾಜನಗರ: ಕಾಂಗ್ರೆಸ್ ಮುಖಂಡರು ಒಬ್ಬರಾದ ಮೇಲೆ ಒಬ್ಬರಂತೆ ಕಮಲದತ್ತ ಚಿತ್ತ ಹರಿಸುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಎಸ್.ಎಂ.ಕೃಷ್ಣ, ಕುಮಾರ್ ಬಂಗಾರಪ್ಪ, ಕೆ.ಶಿವರಾಮು, ಪ್ರಮೀಳಾ ನಾಗಪ್ಪ ಮೊದಲಾದ ನಾಯಕರು ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ಚಾಮರಾಜನಗರದಲ್ಲಿ ತನ್ನದೇ ಆದ ವರ್ಚಸ್ಸಿನಿಂದ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಜೈ ಎಂದಿರುವುದು ಕಾಂಗ್ರೆಸ್ಗೆ ಮತ್ತೊಂದು ಶಾಕ್ ಆಗಿದೆ.

ಉಪಚುನಾವಣೆಯಲ್ಲಿ ಗೆದ್ದೇ ತೀರಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಗೆ ಇದೊಂದು ಆಘಾತವಾಗಿದೆ. ಚಾಮರಾಜನಗರ ಅದರಲ್ಲೂ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದ ಬಳಿಕ ಬಹುತೇಕ ಸಣ್ಣಪುಟ್ಟ ನಾಯಕರು ಬಿಜೆಪಿ ಪಕ್ಷದಡಿ ನೆರಳು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಹದೇವಪ್ರಸಾದ್ ಬಳಿಕ ಎರಡನೇ ಹಂತದ ನಾಯಕರಾಗಿ ಯಾರನ್ನು ಬೆಳೆಸದೆ ಇರುವುದು ಕೂಡ ಕಾಂಗ್ರೆಸ್ ಹಿನ್ನಡೆ ನೀಡುತ್ತಿದೆ. ಶಿವಣ್ಣನಂತಹ ನಾಯಕರು ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗುತ್ತಿದ್ದದ್ದು ಕಂಡು ಬಂದಿತ್ತು. ಹೀಗಾಗಿ ಶಿವಣ್ಣ ಅವರು ಬಿಜೆಪಿಯತ್ತ  ಒಲವು ತೋರಿದ್ದು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಸ್ಪಷ್ಟನೆ ನೀಡಿರುವ ಅವರು ನಾನು ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸಂಸದ ಸ್ಥಾನಕ್ಕೆ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದೆ. ಕಳೆದ ಐದಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ಸೌಜನ್ಯಕ್ಕೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಗೌರವ ತೋರಿಸಿದ್ದಾರೆ. ಇದಲ್ಲದೆ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ನನ್ನನ್ನು ಆಹ್ವಾನಿಸಿ ದಲಿತರ ಮತ ಬಳಕೆ ಮಾಡಿಕೊಳ್ಳದೆ ಇರುವುದರಿಂದ ಮನನೊಂದು ಬಿಜೆಪಿಗೆ ಯಾವುದೇ ಅಪೇಕ್ಷೆಯಿಲ್ಲದೆ ಸೇರಿದ್ದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ ನನ್ನನ್ನು ಮೂಲೆಗುಂಪು ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇವರೊಂದಿಗೆ ಕಟ್ಟಾ ಬೆಂಬಲಿಗರಾದ ಆರ್.ಪುಟ್ಟಮಲ್ಲಪ್ಪ, ಕುಂದಕೆರೆ ಶಾಂತಪ್ಪ ಕೂಡ ಸೇರ್ಪಡೆಗೊಂಡಿದ್ದು ಬಿಜೆಪಿಯ ರಡ್ ಶೋದಲ್ಲಿ ಭಾಗವಹಿಸಿದ್ದಾರೆ. ಜೆಡಿಎಸ್ ಇಲ್ಲಿ ತಟಸ್ಥವಾಗಿರುವ ಕಾರಣದಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ ತಾರಕಕ್ಕೇರಿದೆ. ಚುನಾವಣೆಯ ದಿನ ಹತ್ತಿರ ಬರುತ್ತಿದ್ದಂತೆಯೇ ಇದರ ಕಾವು ಇನ್ನಷ್ಟು ಹೆಚ್ಚಾಗಲಿದ್ದು, ಇನ್ನೆಷ್ಟು ನಾಯಕರು ಪಕ್ಷಾಂತರ ಮಾಡಲಿದ್ದಾರೋ ಎಂಬುದನ್ನು ಕಾದು ನೋಡಬೇಕಿದೆ.

See also  ಭೀಕರ ರಸ್ತೆ ಅಪಘಾತ: ನಾಲ್ಕು ಜನ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು