ಚಿಕ್ಕಮಗಳೂರು: ಕಾಫೀನಾಡು ಚಿಕ್ಕಮಗಳೂರಿನಲ್ಲಿ ಈ ಭಾರೀ ಅತಿ ಹೆಚ್ಚಿನ ಬಿಸಿಲಿನ ಧಗೆಗೆ ಇಲ್ಲಿನ ಮಲೆನಾಡಿನ ಜನರು ಬೆಂದೂ ಹೋಗುತ್ತಿದ್ದಾರೆ.ಈ ವರ್ಷ ಅತಿ ಹೆಚ್ಚು ಬಿಸಿಲನ್ನೂ ಮಲೆನಾಡಿನ ಜನರು ನೋಡುತ್ತಿದ್ದು ಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಕಂಗಾಲಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಕಾಫೀ ನಾಡು ಚಿಕ್ಕಮಗಳೂರು ಮಲೆನಾಡು ಜಿಲ್ಲೆ. ಸಾಮಾನ್ಯವಾಗಿ ತಣ್ಣನೆಯ ವಾತವರಣವನ್ನೂ ಹೊಂದಿದ್ದು ತಂಪಾದ ಗಾಳಿಯ ಮಧ್ಯೆ ಇಲ್ಲಿನ ಜನರು ಜೀವನ ಮಾಡುತ್ತಿದ್ದರು, ಆದ್ರೆ ಈ ಭಾರೀ ಜಿಲ್ಲೆಯಲ್ಲಿ ಬಳ್ಳಾರಿ, ಮಂಗಳೂರು, ರಾಯಚೂರು ಜಿಲ್ಲೆಗಳನ್ನು ಮೀರಿಸುವಂತಹ ಬಿಸಿಲು ಇಲ್ಲಿ ಬಂದಿರೋದರಿಂದಾ ಜನರು ಬಸಿಲಿನ ಧಗೆಯಿಂದಾ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಅರಣ್ಯ ವಿಪರೀತ ನಾಶ, ಮತ್ತು ಕಾಫೀ ತೋಟಗಳ ನಾಶದಿಂದ ಮಳೆ ಕಡಿಮೆಯಾದ ಪರಿಣಾದಿಂದಾಗಿ ಈ ಹವಾಮಾನದಲ್ಲಿ ವೈಪರಿತ್ಯ ಕಂಡೂ ಬರುತ್ತಿದ್ದು, ಜನರು ಮನೆಯ ಹೊರಗೂ ಇರಲಾರದೇ ಮನೆಯ ಒಳಗೂ ಇರಲಾರದೇ ಬಿಸಿಲಿನಿಂದ ಬೆಂದೂ ಹೋಗುತ್ತಿದ್ದಾರೆ. ಈ ಭಾರೀ ಜಿಲ್ಲೆಯಲ್ಲಿ ಗರಿಷ್ಟ ಮಟ್ಟದಲ್ಲಿ ಅಂದ್ರೆ 36 ರಿಂದ 37 ರ ವರೆಗೂ ಡಿಗ್ರಿ, ತಾಪಮಾನ ಜಿಲ್ಲೆಗೆ ಬಂದೆರಗಿದೆ.
ಈ ಹವಾಮಾನದ ವೈಪರಿತ್ಯ ಪ್ರಕೃತಿಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿದ್ದು, ನದಿಯ ತೊರೆಗಳು ಹಳ್ಳಕೊಳ್ಳಗಳಲ್ಲಿ ನೀರು ಮಾಯವಾಗಿ ಹೋಗಿದೆ. ಧನ ಕರುಗಳಿಗೆ ಕುಡಿಯಲು ಸರಿಯಾಗಿ ನೀರು ಸಿಗುತ್ತಿಲ್ಲ, ಮೇವು ಸಿಗುತ್ತಿಲ್ಲ, ಇಷ್ಟು ದಿನ ಪಕ್ಕಾ ಮಲೆನಾಡು ಆಗಿದ್ದ ಈ ಜಿಲ್ಲೆ ಈಗ ಬಯಲು ಸೀಮೆಯಾಗಿದೇ ಏನೋ ಎಂಬಂತೆ ಎಲ್ಲರಿಗೂ ಭಾಸವಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟವೂ ದಿನದಿಂದ ದಿನಕ್ಕೆ ಸಂಪೂರ್ಣ ಕುಂಠಿತ ಆಗುತ್ತಿದೆ. ಪರಿಸರ ನಾಶ, ಅರಣ್ಯ ನಾಶ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೆಸಾರ್ಟ್ ಗಳ ಸಂತತಿ, ಇದರಿಂದ ಮರಗಳ ಮತ್ತು ಅರಣ್ಯಗಳ ಮಾರಣ ಹೋಮ ಇದಕ್ಕೆ ಪ್ರಮುಖ ಕಾರಣವಾಗಿ ಇಲ್ಲಿ ಕಾಣುತ್ತಿದೆ.
ಒಟ್ಟಾರೆಯಾಗಿ ಇಷ್ಟು ದಿನ ತಂಪಾದ ತಣ್ಣನೆಯ ಗಾಳಿಯಲ್ಲಿ ಸ್ವಂಚ್ಚದ ಜೀವನ ಮಾಡುತ್ತಿದ್ದ ಮಲೆನಾಡು ಜನರು ಈಗ ಬಿರು ಬಿಸಿಲಿನಲ್ಲಿ ಸುಟ್ಟು ಹೋಗುತ್ತಿದ್ದಾರೆ, ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತೋ ಮಳೆಗಾಲ ಎಂದೂ ಪ್ರಾರಂಭ ಆಗುತ್ತೋ ಎಂದೂ ಮೋಡದತ್ತ ನೋಡುತ್ತಾ ದಿನವನ್ನೂ ದೂಡುತ್ತಿದ್ದಾರೆ…