News Kannada
Wednesday, September 28 2022

ಕರ್ನಾಟಕ

ಕೊಡಗಿನಲ್ಲಿ ಹೆಚ್ಚುತ್ತಿದೆ ಬಿಸಿಲ ಝಳ.. - 1 min read

Photo Credit :

ಕೊಡಗಿನಲ್ಲಿ ಹೆಚ್ಚುತ್ತಿದೆ ಬಿಸಿಲ ಝಳ..

ಮಡಿಕೇರಿ: ಒಂದು ಕಾಲದಲ್ಲಿ ಬೇಸಿಗೆಯ ದಿನಗಳಲ್ಲಿ ಮಡಿಕೇರಿ ತಂಪಾಗಿರುತ್ತಿತ್ತು. ತಂಗಾಳಿ ಬೀಸುತ್ತಾ ನಡು ಬೇಸಿಗೆಯ ಹೊತ್ತಲ್ಲೂ ಕೆಲವೊಮ್ಮೆ ಬೆಳದಿಂಗಳಾ? ಎಂಬ ಅಚ್ಚರಿ ಹುಟ್ಟಿಸಿ ಬಿಡುತ್ತಿತ್ತು. ಹೀಗಾಗಿ ಪ್ರವಾಸಿಗರು ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲವೂ ಬದಲಾಗಿದ್ದು, ತಂಪಿನ ನಗರಿ ಉರಿ ಬಿಸಿಲಿನ ನಗರವಾಗಿ ಬದಲಾಗಿರುವುದು ಕಂಡು ಬರುತ್ತಿದೆ.

ಮೊದಲೆಲ್ಲ ಮಡಿಕೇರಿಯ ತಾಪಮಾನ ಗರಿಷ್ಠ 22 ರಿಂದ 24 ಸೆಂಟಿಗ್ರೇಡ್ ಇರುತ್ತಿತ್ತು. ಆದರೆ ಇದೀಗ 30ರಿಂದ 32 ಡಿಗ್ರಿ ತಾಪಮಾನ ಏರುತ್ತಿರುವುದು ಇಲ್ಲಿನವರ ನಿದ್ದೆಗೆಡಿಸಿದ್ದು, ಫ್ಯಾನ್ ನೋಡಿರದ ಮನೆಗಳಲ್ಲಿ ಫ್ಯಾನ್, ಎಸಿ ಬಂದಿದೆ. ಅಷ್ಟೇ ಅಲ್ಲದೆ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಬೇಸಿಗೆಯ ದಿನಗಳಲ್ಲಿ ಇದೀಗ ಪ್ರವಾಸಿಗರ ಕೊರತೆಯೂ ಕಂಡು ಬರುತ್ತಿದೆ. ಕೊಡಗು ಜಲಪಾತಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಬಿಸಿಲಿನ ಝಳಕ್ಕೆ ಸಿಲುಕಿ ಸೊರಗಿ ಹೋಗಿವೆ. ಜಲಮೂಲಗಳು ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಮಳೆ ಸಮರ್ಪಕವಾಗಿ ಬಾರದ ಕಾರಣ ಬಿಸಿಲಿಗೆ ಸಿಕ್ಕಿ ಕಾಫಿಗಿಡಗಳು ಒಣಗುತ್ತಿವೆ. ಇದರಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ನೀರಿನ ಕೊರತೆ ಹಾಗೂ ಬಿಸಿಲಿನ ಝಳಕ್ಕೆ ಸಿಕ್ಕಿ ರಾಜಾಸೀಟಿನಲ್ಲಿದ್ದ ಅಪರೂಪದ ಹೂಗಿಡಗಳು ಒಣಗುತ್ತಿವೆ.

ದಾಹದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ತಂಪು ಪಾನೀಯಗಳಿಗೆ ಮೊರೆ ಹೋಗಿರುವುದರಿಂದ ಎಳನೀರು, ಐಸ್ಕ್ರೀಂ, ಜ್ಯೂಸ್ ಗಳ ಮಾರಾಟವೂ ಭರದಿಂದ ಸಾಗುತ್ತಿದ್ದು ಬೇಡಿಕೆ ಕಂಡು ಬರುತ್ತಿದೆ.

ಒಟ್ಟಾರೆ ಕೊಡಗಿನಲ್ಲಿ ಈ ಬಾರಿ ವಾತಾವರಣದಲ್ಲಿ ಒಂದಷ್ಟು ಏರುಪೇರು ಕಾಣುತ್ತಿದ್ದು, ಮನೆಯಿಂದ ಹೊರ ಬಂದು ನಾಲ್ಕು ಹೆಜ್ಜೆ ಹಾಕಿದರೂ ಮೈಬೆವರುತ್ತಿದೆ. ದಾಹವಾಗುತ್ತಿದೆ. ಇದೆಲ್ಲವೂ ಇಲ್ಲಿನವರು ಭಯಪಡುವಂತಾಗಿದೆ

See also  ಆದಾಯ ತೆರಿಗೆ ಅಧಿಕಾರಿಗಳಿಂದ ಜನಾರ್ದನ ರೆಡ್ಡಿ ಕಚೇರಿಗಳಿಗೆ ದಾಳಿ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು