ಮಂಡ್ಯ: ಇಲ್ಲಿಗೆ ಸಮೀಪದ ನಾರಾಯಣಪುರ ಗ್ರಾಮದ ಬೆಟ್ಟಯ್ಯ ಎಂಬುವರ ಬರಡು ಭೂಮಿಯಲ್ಲಿ ಜಲ ಚಿಮ್ಮಿರುವುದು ಅಚ್ಚರಿ ತಂದಿದೆ.
ಮೇಲುಕೋಟೆಗೆ 10 ಕಿ.ಮೀ. ದೂರದಲ್ಲಿ ನಾರಾಯಣಪುರವಿದ್ದು, ಇಲ್ಲಿನ ನಿವಾಸಿ ಬೆಟ್ಟಯ್ಯ ಎಂಬುವರ ಜಮೀನಿನಲ್ಲಿ 10 ಇಂಚು, 20 ಅಡಿಯಷ್ಟು ತೇವಾಂಶ ಕಾಣಿಸಿಕೊಂಡಿದ್ದು ಅಚ್ಚರಿಗೊಂಡ ಗ್ರಾಮಸ್ಥರು ಗುಂಡಿ ತೆಗೆಯುತ್ತಿದ್ದಂತೆ ನೀರು ಕಾಣಿಸಿದೆ. ಇದನ್ನು ಸಂಗ್ರಹಿಸಿದ ಗ್ರಾಮಸ್ಥರು ತೀರ್ಥದಂತೆ ಸ್ವೀಕರಿಸಿದ್ದಾರೆ.
ವೈರಮುಡಿ ಹಿನ್ನಲೆಯಲ್ಲಿ ಮೇಲುಕೋಟೆ ಕಲ್ಯಾಣಿಯಲ್ಲಿ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನ ನಡೆದ ವೇಳೆ ಪೂಜೆ ಮಾಡಿದ ನಂತರ ನೀರು ಕುಂಡಿಕೆಯಲ್ಲಿ ನಿಧಾನವಾಗಿ ಶೇಖರವಾಗತೊಡಗಿತು ಎನ್ನಲಾಗಿದೆ.
ಈ ಭೂಮಿಯಲ್ಲಿ 15 ಅಡಿ ಆಳದಷ್ಟು ಗುಂಡಿ ತೆಗೆದರೂ ನೀರು ಬರುವುದಿಲ್ಲ. ಹೀಗಿರುವಾಗ ಇಲ್ಲಿ ಕೆಲವೇ ಅಡಿಗೆ ನೀರು ಸಿಕ್ಕಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಇದರ ನಡುವೆ ಇಲ್ಲಿ ನೀರು ಕಾಣಿಸಿಕೊಂಡಿರುವುದಕ್ಕೂ ಕಥೆಗಳು ಹುಟ್ಟಿಕೊಂಡಿದ್ದು, ಚಲುವನಾರಾಯಣಸ್ವಾಮಿ ಮೊದಲು ಈ ಗ್ರಾಮದಲ್ಲಿ ನೆಲೆಸಿದ್ದ. ಆದರೆ, ಗ್ರಾಮದ ವ್ಯಕ್ತಿಯೊಬ್ಬ ಇಲ್ಲಿ ಬೇಡ ಅಂತ ಹೇಳಿದ್ದಕ್ಕೆ ಮೇಲುಕೋಟೆಗೆ ಹೋಗಿ ನೆಲೆಸಿದಂತೆ.
ಭಕ್ತರು ಬಾಟಲಿ ಮತ್ತು ಲೋಟಗಳಲ್ಲಿ ಜಿನುಗುತ್ತಿದ್ದ ನೀರನ್ನು ತುಂಬಿಕೊಂಡು ತೀರ್ಥದಂತೆ ಸ್ವೀಕಾರ ಮಾಡಿ ಚೆಲುವನ ಪವಾಡ ಎನ್ನುತ್ತಾ ತಮ್ಮ ಮನೆಯ ಹಾದಿ ಹಿಡಿದಿದ್ದಾರೆ…