ಚಾಮರಾಜನಗರ: ಕಳೆದ ಕೆಲವು ಸಮಯಗಳಿಂದ ಕೃಷಿ ಚಟುವಟಿಕೆಯನ್ನೆಲ್ಲ ಬದಿಗೊತ್ತಿ ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಣ್ಣಿನ ಮಕ್ಕಳು ಇದೀಗ ಮತ್ತೆ ತಮ್ಮ ಹೊಲಗದ್ದೆಗಳತ್ತ ದೃಷ್ಠಿ ನೆಟ್ಟು ಎಂದಿನ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದುವರೆಗಿನ ಚುನಾವಣೆಗಿಂತ ಈ ಬಾರಿ ಭಿನ್ನವಾಗಿ ಚುನಾವಣೆ ನಡೆದಿದ್ದರಿಂದ ರೈತರು ಪ್ರತಿದಿನ ಸಮಾವೇಶ, ಪಾದಯಾತ್ರೆ, ಮತಪ್ರಚಾರ ಹೀಗೆ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರಿಂದ ಹೊಲಗದ್ದೆಗಳತ್ತ ನಿರಾಸಕ್ತಿ ಹೊಂದಿದ್ದರು ಎಂದರೂ ತಪ್ಪಾಗಲಾರದು. ಹೆಚ್ಚಿನ ರೈತರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಕಾರ್ಯಕರ್ತರಾಗಿ ಗುರುತಿಸಿಕೊಂಡು ಬಾವುಟ ಹಿಡಿದುಕೊಂಡು ಸುತ್ತಾಡಿದ್ದರಲ್ಲದೆ, ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಈಗ ಚುನಾವಣೆ ಕಳೆದಿದೆ. ಫಲಿತಾಂಶವೂ ಬಂದಿದೆ. ಗೆದ್ದ ಅಭ್ಯಥರ್ಿ ಪರ ಕೆಲಸ ಮಾಡಿದವರಲ್ಲಿ ಅದೇನೋ ತೃಪ್ತಿ ಲಾಸ್ಯವಾಡುತ್ತಿದ್ದರೆ, ಸೋತ ಅಭ್ಯಥರ್ಿ ಪರ ದುಡಿದ ಕಾರ್ಯಕರ್ತರಲ್ಲಿ ನಿರಾಸೆಯ ಛಾಯೆ ಎದ್ದು ಕಾಣುತ್ತಿದೆ. ಆದರೆ ರಾಜನಿಗೆ ಪಟ್ಟಾಭಿಷೇಕವಾದರೂ ರಾಗಿ ಬೀಸೋದು ತಪ್ಪಲ್ಲ ಎಂಬಂತೆ ರೈತರು ತಮ್ಮ ಕಾಯಕದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಮತ್ತೆ ರೈತರು ಹೊಲದತ್ತ ತೆರಳಿದ್ದಾರೆ.
ನೀರಿನ ವ್ಯವಸ್ಥೆ ಇರುವವರು ನೀರು ಹಾಯಿಸಿ ಹೊಲವನ್ನು ಹದಗೊಳಿಸಿ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡುತ್ತಿದ್ದರೆ, ಮತ್ತೆ ಕೆಲವರು ಎತ್ತುಗಳ ಮೂಲಕ ಉಳುವೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗುಂಡ್ಲುಪೇಟೆ ವ್ಯಾಪ್ತಿಯ ಕೆಲವೆಡೆ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ರೈತರು ಖುಷಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಕಳೆದ ಕೆಲ ವರ್ಷಗಳಿಂದ ಈ ವ್ಯಾಪ್ತಿಯ ಜನರು ಸರಿಯಾಗಿ ಬೆಳೆಯನ್ನೇ ಬೆಳೆದಿಲ್ಲ. ಬಹಳಷ್ಟು ಮಂದಿ ಬರದಿಂದ ತತ್ತರಿಸಿ ಹೋಗಿದ್ದು ಹೊಟ್ಟೆಪಾಡಿಗಾಗಿ ಕೇರಳ, ತಮಿಳುನಾಡಿನತ್ತ ವಲಸೆ ಹೋಗಿದ್ದಾರೆ.
ಕೆಲವು ವರ್ಷಗಳ ಹಿಂದೆ ಮಳೆ ಇಲ್ಲದೆ ಬರಡಾಗಿದ್ದ ಕೆರೆಗಳಿಗೆ ನದಿಯಿಂದ ನೀರು ತುಂಬಿಸಲಾಗಿತ್ತು. ಆದರೆ ಕಳೆದ ಬಾರಿ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಿಲ್ಲ. ಹೀಗಾಗಿ ಕೃಷಿ ಮಾಡುವುದಿರಲಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿಮರ್ಾಣವಾಗಿದೆ. ಬಹಳಷ್ಟು ರೈತರು ಬರಕ್ಕೆ ಹೆದರಿ ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ಮಾರಾಟ ಮಾಡಿದ್ದಾರೆ.
ಒಂದು ವೇಳೆ ಈ ಬಾರಿ ಉತ್ತಮ ಮಳೆಯಾದರೆ ಮತ್ತೆ ಸಾಲ ಮಾಡಿ ಜಾನುವಾರುಗಳನ್ನು ಖರೀದಿಸಬೇಕಾಗಿದೆ. ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ರೈತರು ಯಾವ ಬೆಳೆಬೆಳೆಯ ಬಹುದು ಎಂಬ ತೀಮರ್ಾನಕ್ಕೆ ಬರುತ್ತಿದ್ದಾರೆ. ಶೀಘ್ರವೇ ಫಸಲು ಬರುವ ಅಲ್ಪಾವಧಿ ಬೆಳೆಗಳತ್ತ ರೈತರು ಮನಸ್ಸು ಮಾಡಿದ್ದಾರೆ. ಮಳೆ ಬಿದ್ದ ಕೂಡಲೇ ರೈತರಿಗೆ ಅಗ್ಯವಾಗಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸರಬರಾಜು ಮಾಡಲು ಕೃಷಿಯ ಇಲಾಖೆಯೂ ಸಜ್ಜಾಗಿದೆ.
ಈಗಾಗಲೇ ತಾಲೂಕಿನ ಕಸಬಾ, ಹಂಗಳ, ಬೇಗೂರು ಹಾಗೂ ತೆರಕಣಾಂಬಿ ಸೇರಿದಂತೆ ಎಲ್ಲಾ 4 ರೈತ ಸಂಪರ್ಕ ಕೇಂದ್ರಗಳಿಗೆ ತಲಾ 30 ಕ್ವಿಂಟಾಲ್ ಜೋಳ, 10 ಕ್ವಿಂಟಾಲ್ ಸೂರ್ಯಕಾಂತಿಯನ್ನು ವಿತರಿಸಲಾಗಿದೆ ಎಂದಿರುವ ಕೃಷಿ ಇಲಾಖೆಯ ಸಹಾಯಕ ನಿದರ್ೇಶಕ ಸಿದ್ದೇಗೌಡ ಅವರು, ಈ ಬಾರಿ ಯಾವುದೇ ರೈತರ ಬಳಿ ಬಿತ್ತನೆ ಬೀಜದ ಸಂಗ್ರಹವಿಲ್ಲದೆ ಇರುವುದರಿಂದ ಎಲ್ಲಾ ರೀತಿಯ ಬೀಜಗಳನ್ನು ತರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ